Thursday, September 19, 2024

ಪ್ರಾಯೋಗಿಕ ಆವೃತ್ತಿ

ಮೈಸೂರಿನಿಂದ ಊಟಿ ಕೇವಲ 8 ಕಿ.ಮೀ. ದೂರದಲ್ಲಿದೆ ಎಂದು ಹೇಳುತ್ತಿದೆ ಹೆದ್ದಾರಿ ಪ್ರಾಧಿಕಾರ !

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (National Highway Authority)ದ ಅಧಿಕಾರಿಗಳು ಪ್ರಯಾಣಿಕರಿಗೆ ತಪ್ಪು ಮಾಹಿತಿ ನೀಡುವುದರ ಜೊತೆ ಕನ್ನಡದ ಅಕ್ಷರಗಳನ್ನು ಸರಿಯಾಗಿ ಮುದ್ರಿಸದೇ ಅಪಮಾನ ಮಾಡುತ್ತಿದ್ದಾರೆ.

ಮೈಸೂರು ನಗರದ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಬಳಿ ಅಳವಡಿಸಿರುವ ಹೆದ್ದಾರಿ ನಾಮಫಲಕದಲ್ಲಿ ಊಟಿ ಕೇವಲ 8 ಕಿ.ಮೀ ಎಂದು ತಪ್ಪು ಮಾಹಿತಿ ನೀಡಲಾಗಿದೆ, ಇದರಿಂದಾಗಿ ಹೆದ್ದಾರಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಗೊಂದಲ ಉಂಟಾಗುತ್ತಿದೆ.

ಅಲ್ಲದೇ ಅದೇ ನಾಮಫಲಕದಲ್ಲಿ ಮೈಸೂರು 7 ಕಿ.ಮೀ. ಮೀಟರ್ ಎಂದು ನಮೂದಿಸಲಾಗಿದೆ. ಇದರಿಂದಾಗಿ ಊಟಿ ಹಾಗೂ ಮೈಸೂರು ಪ್ರವಾಸಿ ತಾಣಗಳು ಇಷ್ಟೊಂದು ಹತ್ತಿರದಲ್ಲಿವೆಯೇ ಎಂದು ಎಲ್ಲರೂ ಆಶ್ಚರ್ಯ ಪಡುವಂತಾಗಿದೆ. ಅದರೆ ವಾಸ್ತವವಾಗಿ ಮೈಸೂರು ಹಾಗೂ ಊಟಿಗೂ 125 ಕಿ.ಮೀ ಅಂತರವಿದೆ. ಇದೇ ನಾಮಫಲಕದಲ್ಲಿ ಊಟಿಯನ್ನು ಕನ್ನಡ ಭಾಷೆಯಲ್ಲಿ ”ಊಟೆ” ಎಂದು ತಪ್ಪಾಗಿ ಮುದ್ರಿಸಲಾಗಿದೆ. ಕನ್ನಡ ನಾಡಿನಲ್ಲಿ ಕನ್ನಡವನ್ನೇ ಕೆಟ್ಟದಾಗಿ ಬಳಕೆ ಮಾಡುತ್ತಿರುವುದು ನಮ್ಮ ಮಾತೃ ಭಾಷೆಗೆ ಮಾಡಿದ ಅಪಮಾನವೆಂದು ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!