Friday, September 20, 2024

ಪ್ರಾಯೋಗಿಕ ಆವೃತ್ತಿ

ಜನಾಭಿಪ್ರಾಯ ರೂಪಿಸಲು ‘ಪ್ರಜಾಧ್ವನಿಯಾತ್ರೆ’ : ಪಿ.ಎಂ. ನರೇಂದ್ರಸ್ವಾಮಿ

ಚುನಾವಣೆ ಸಮೀಪಿಸುತ್ತಿರುವುದರಿಂದ ಪಕ್ಷ ಸಂಘಟನೆಯೊಂದಿಗೆ ಕಾರ್ಯಕರ್ತರಿಗೆ ಹುಮ್ಮಸ್ಸು ಮೂಡಿಸಿ, ಪಕ್ಷದ ಜವಾಬ್ದಾರಿಯೊಂದಿಗೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಹಾಗೂ ಜನಾಭಿಪ್ರಾಯ ಮೂಡುವಂತೆ ಮಾಡಲು ವಿನೂತನವಾಗಿ ಹಮ್ಮಿಕೊಂಡಿರುವ ಪ್ರಜಾಧ್ವನಿಯಾತ್ರೆಯೂ ಫೆ.11ರಂದು ಮದ್ಯಾಹ್ನ 3ಗಂಟೆಗೆ ಮಳವಳ್ಳಿ ತಾಲ್ಲೂಕಿಗೆ ಆಗಮಿಸಲಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ ನರೇಂದ್ರಸ್ವಾಮಿ ತಿಳಿಸಿದರು.

ಮಳವಳ್ಳಿ ಪಟ್ಟಣದ ಟಿಎಪಿಸಿಎಂಎಸ್ ಕಚೇರಿಯಲ್ಲಿ ಪ್ರಜಾಧ್ವನಿಯಾತ್ರೆ ಪ್ರಚಾರದ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮರ್ ಅವರ ನೇತೃತ್ವದಲ್ಲಿ ಫೆ.11 ರಂದು ಮದ್ಯಾಹ್ನ 3 ಗಂಟೆಗೆ ಹಲಗೂರಿನಿಂದ ರೋಡ್‌ಷೋ ಮೂಲಕ ಪ್ರಜಾಧ್ವನಿ ಯಾತ್ರೆಯೂ ಆರಂಭಗೊಳ್ಳಲಿದ್ದು, ಹಲಗೂರು ಹಾಡ್ಲಿಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಬಹಿರಂಗಸಭೆಯಲ್ಲಿ ಮಾತನಾಡಲಿದ್ದಾರೆ, ಹಲಗೂರಿನಿಂದ ಮಳವಳ್ಳಿಗೆ ಸಾವಿರಾರು ಬೈಕ್ ಜಾಥದ ಮೂಲಕ ಸಂಜೆ 5 ಗಂಟೆಗೆ ಆಗಮಿಸಲಿದ್ದಾರೆಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು, ಅಧಿಕೃತ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಕ್ಕೆ ಮೊದಲಭಾರಿಗೆ ಆಗಮಿಸುತ್ತಿರುವುದರಿಂದ ವಿಶೇಷ ಹಾಗೂ ವಿನೂತನವಾಗಿ ಸ್ವಾಗತ ಕೋರಲು ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಪಟ್ಟಣದ ಪ್ರವಾಸಿ ಮಂದಿರದಿAದ ಅನಂತ್‌ರಾA ವೃತ್ತದವರೆಗೆ ರೋಡ್‌ಷೋ ನಡೆಸಿ ಅನಂತ್‌ರಾA ವೃತ್ತದಲ್ಲಿ ಬಹಿರಂಗ ಸಭೆಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಡಿಕೆ ಶಿವಕುಮಾರ್ ಮಾತನಾಡಲಿದ್ದಾರೆ. ಅಧ್ಯಕ್ಷರಿಗೆ ಪ್ರೀತಿ ಗೌರವ ತೋರಿಸಲು ಮುಕ್ತವಾದ ಅವಕಾಶವನ್ನು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರಿಗೆ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕೇಂದ್ರದ ಮಾಜಿ ಸಚಿವರಾದ ಕೆ.ಎಚ್.ಮುನಿಯಪ್ಪ, ರಾಜ್ಯಸಭಾ ಸದಸ್ಯ ಬಿ.ಸಿ.ಚಂದ್ರಶೇಖರ್, ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ನಜೀರ್ ಅಹಮದ್, ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.

ಕಳೆದ ನಾಲ್ಕು ಮುಕ್ಕಾಲು ವರ್ಷದಲ್ಲಿ ಕ್ಷೇತ್ರದಲ್ಲಿ ಅಭಿವೃದ್ದಿಯೊಂಬುವುದು ಏನಾಗಿದೆ, ಹಿಂದಿನ 10 ವರ್ಷದಲ್ಲಿ ಮಳವಳ್ಳಿ ಕ್ಷೇತ್ರ ಯಾವ ರೀತಿ ಅಭಿವೃದ್ದಿಪತದಲ್ಲಿತ್ತು, ಎನ್ನುವ ಎಲ್ಲಾ ಅಂಶಗಳನ್ನು ಪ್ರಜಾಧ್ವನಿಯಾತ್ರೆ ಸಭೆಯಲ್ಲಿ ಬಹಿರಂಗಪಡಿಸಲಾಗುವುದು ಎಂದ ಅವರು, ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು, ದಯಾಶಂಕರ್, ಮುಖಂಡರಾದ ಮಹದೇವು, ಪ್ರಕಾಶ್, ಶಿವಮಾದೇಗೌಡ, ದ್ಯಾಪೇಗೌಡ, ಅಂಬರೀಷ್ ಲಿಂಗರಾಜು, ವಿಶ್ವಾಸ್, ನಾಗೇಶ್, ಮಲ್ಲಯ್ಯ, ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!