Thursday, September 19, 2024

ಪ್ರಾಯೋಗಿಕ ಆವೃತ್ತಿ

ವಿಶ್ವಕಪ್ ಕ್ರಿಕೆಟ್: 191 ರನ್ ಗಳಿಗೆ ಪಾಕಿಸ್ತಾನ ಆಲೌಟ್

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತದ ಬೌಲರ್​​ಗಳು ಅಬ್ಬರಿಸಿದರೆ, ಪಾಕಿಸ್ತಾನ ಬ್ಯಾಟರ್​​ಗಳ ಪೆವಿಲಿಯನ್ ಪೆರೇಡ್ ನಡೆಸಿದರು.

ಗುಜರಾತಿನ ಅಹಮದಾಬಾದ್ ಮೈದಾನದಲ್ಲಿ ಭಾರತದೊಂದಿಗೆ ನಡೆಯುತ್ತಿರುವ ಕದನದಲ್ಲಿ ಪಾಕಿಸ್ತಾನ ತಂಡ ಭಾರತೀಯ ಬೌಲರ್‌ಗಳ ವಿರುದ್ಧ ರನ್‌ ಗಳಿಸಲು ಪರದಾಡಿದರು.

ಆರಂಭದಿಂದಲೇ ಅಬ್ಬರಿಸುವ ಸೂಚನೆ ನೀಡಿದ ಪಾಕ್‌ ಬ್ಯಾಟರ್ಸ್‌ ಬಳಿಕ ಒಮ್ಮೆಲೆ ಪೆವಿಲಿಯನ್‌ ಪೇರೆಡ್‌ ನಡೆಸಿದರು. ಆದರೂ ಸಹ ಪಾಕ್ ನಾಯಕ ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್‌ ಕೆಲ ಕಾಲ ಭಾರತೀಯ ಬೌಲರ್‌ಗಳನ್ನು ಕಾಡಿದರು. ಆದರೆ ಬಳಿಕ ಬಾಬರ್‌ ವಿಕೆಟ್‌ ಕಳೆದುಕೊಳ್ಳುತ್ತಿದ್ದಂತೆಯೇ ಪಾಕಿಸ್ತಾನ ಪತನ ಕಾಣಲಾರಂಭಿಸಿತು. ಅಂತಿಮವಾಗಿ ಪಾಕಿಸ್ತಾನ ತಂಡ 42.5 ಓವರ್‌ಗೆ 191 ರನ್‌ಗೆ ಆಲೌಟ್‌ ಆಗುವ ಮೂಲಕ ಭಾರತಕ್ಕೆ 192 ರನ್‌ಗಳ ಸುಲಭ ಗುರಿಯನ್ನು ನೀಡಿದೆ.

nudikarnataka.com

ಭಾರತೀಯರ ಬೆಂಕಿ ಬೌಲಿಂಗ್‌

ಟಾಸ್ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡ ರೋಹಿತ್‌ ಶರ್ಮಾ ನಿರ್ಧಾರವನ್ನು ಭಾರತೀಯ ಬೌಲರ್‌ಗಳು ಸರಿಯಾದ ರೀತಿಯಲ್ಲಿ ಸಮರ್ಥಿಸಿಕೊಂಡರು. ಆರಂಭದಲ್ಲಿ ನಿಧಾನವಾಗಿ ಆರಂಭಿಸಿದ ದಾಳಿ ಬಳಿಕ ಒಮ್ಮೆಲೆ ಚುರುಕು ಪಡೆಯಿತು. ತಾ ಮುಂದು ತಾ ಮುಂದು ಎಂಬಂತೆ ಒಬ್ಬರಾದ ಬಳಿಕ ಒಬ್ಬರು ಪಾಕ್‌ ವಿಕೆಟ್ ಪಡೆದು ಮಿಂಚಿದರು. ಭಾರತದ ಪರ ಕುಲ್‌ದೀಪ್‌ ಯಾದವ್ 10 ಓವರ್‌ಗೆ 35 ರನ್ ನೀಡಿ 2 ವಿಕೆಟ್, ಜಸ್ಪ್ರೀತ್‌ ಬುಮ್ರಾ 2 ವಿಕೆಟ್, ಮೊಹಮ್ಮದ್ ಸಿರಾಜ್ 2 ವಿಕೆಟ್, ಹಾರ್ದಿಕ್‌ ಪಾಂಡ್ಯ 2 ವಿಕೆಟ್ ಮತ್ತು ರವೀಂದ್ರ ಜಡೇಜಾ 2 ವಿಕೆಟ್ ಪಡೆದು ಪಾಕ್‌ ಕುಸಿತಕ್ಕೆ ಪ್ರಮುಖ ಕಾರಣೀಕರ್ತರಾದರು.

ತತ್ತರಿಸಿದ ಪಾಕ್

ಇನ್ನು, ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊಲದು ಬೌಲಿಂಗ್‌ ಆಯ್ಕೆ ಮಾಡಿತು. ಇದರಿಂದ ಮೊದಲು ಬ್ಯಾಟಿಂಗ್‌ ಆರಂಭಿಸಿದ ಪಾಕ್‌ ಮೊದಲ 10 ಓವರ್‌ನಲ್ಲಿ ಅಬ್ಬರಿಸುವ ಸೂಚನೆ ನೀಡಿತು. ಆದರೆ ಮೊಹಮ್ಮದ್ ಸಿರಾಜ್ ಮೊದಲ ವಿಕೆಟ್ ತೆಗೆಯುವ ಮೂಲಕ ಪಾಕ್‌ಗೆ ಆರಂಭಿಕ ಆಘಾತ ನೀಡಿದರು. ಬಳಿಕ ಮತ್ತೊಂದು ವಿಕೆಟ್ ಕಳೆದುಕೊಂಡರೂ ಸಹ ಬಾಬರ್ ಮತ್ತು ರಿಜ್ವಾನ್‌ ಉತ್ತಮ ಬ್ಯಾಟಿಂಗ್‌ ಮಾಡಿದರು. ಆದರೆ ಭಾಬರ್ ವಿಕೆಟ್ ಉರುಳುತ್ತಿದ್ದಂತೆ ಪಾಕ್‌ ಪೆವೆಲಿಯನ್‌ ಪೆರೇಡ್ ನಡೆಸಿತು.

ಪಾಕಿಸ್ತಾನ ತಂಡದ ಪರ ಇಂದು ಅಬ್ದುಲ್ಲಾ ಶಫೀಕ್ 20 ರನ್, ಇಮಾಮ್-ಉಲ್-ಹಕ್ 36 ರನ್, ಬಾಬರ್ ಅಜಂ 58 ಎಸೆತದಲ್ಲಿ 7 ಬೌಂಡರಿ ಮೂಲಕ 50 ರನ್ ಮತ್ತು ಮೊಹಮ್ಮದ್ ರಿಜ್ವಾನ್‌ 49 ರನ್‌ ಗಳಿಸಿದರು. ಉಳಿದಂತೆ ಸೌದ್ ಶಕೀಲ್ 6 ರನ್, ಇಫ್ತಿಕರ್ ಅಹ್ಮದ್ 4 ರನ್, ಶಾದಾಬ್ ಖಾನ್ 2 ರನ್, ಮೊಹಮ್ಮದ್ ನವಾಝ್ 4 ರನ್ ಮತ್ತು ಹಸನ್ ಅಲಿ 12 ರನ್‌ ಗಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!