Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಪರೂಪದ ಶಿವಶಂಕರ ಮರ ನೆಲಕ್ಕುರುಳಿದೆ

ನ.ಲಿ.ಕೃಷ್ಣ  ಕೃಷಿಕರು, ಸಾಮಾಜಿಕ ಹೋರಾಟಗಾರರು

ಮದ್ದೂರಿನ ಹಳೇ ಒಕ್ಕಲಿಗರ ಬೀದಿಯಲ್ಲಿ ಸುಮಾರು ನೂರು ವರ್ಷಕ್ಕೂ ಹೆಚ್ಚು ಇತಿಹಾಸವಿರುವ ಶಿವಶಂಕರ ಮರ ಆಕಾಲಿಕ ಮಳೆಗೆ ನೆಲಕ್ಕುರಳಿದೆ.

ಶಿವಶಂಕರ ಮರವು ತುಂಬಾ ಪುರಾತನ ಮರವಾಗಿದ್ದು ಇದು ಹಳೇ ಒಕ್ಕಲಿಗರ ಬೀದಿಯ ಹೆಗ್ಗುರುತಾಗಿದೆ ಎನ್ನಲಾಗಿದೆ. ಶಿವಶಂಕರ ಮರವು ದೀರ್ಘಕಾಲ ಬಾಳುವಂತಹದ್ದು, ನೂರು ವರ್ಷಕ್ಕೂ ಹೆಚ್ಚು ವರುಷಗಳ ಕಾಲ ಬೆಳೆದು ಜೀವಂತವಾಗಿರುವ ವಿಶಿಷ್ಟ ಸಂತತಿಯ ಮರ ಇದು. ಇತ್ತಿಚೀನ ವರ್ಷಗಳಲ್ಲಿ ಪರಿಚಯಿಸಲ್ಪಟ್ಟ ಗುಲ್ ಮೊಹರ್ ಮಾದರಿಯ ಮರ ಈ ಶಿವಶಂಕರ ಮರ.

ಈ ಶಿವಶಂಕರ ಮರದ ಜೊತೆಗೆ ಮದ್ದೂರು ಪಟ್ಟಣದ ಜನತೆ ಭಾವನಾತ್ಮಕವಾಗಿಯೂ, ದೈವಿಕವಾಗಿಯೂ ವಿಶೇಷ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ಮರ ಉರುಳಿ 24 ಗಂಟೆಗಳು ಕಳೆದರೂ ಇನ್ನೂ ಹಸಿರಾಗಿದೆ.

ಇದು ಇವಾಗಲೂ ಮರನೆಟ್ಟು ಉಳಿಸಿಕೊಳ್ಳಬಹುದಾ ಎಂಬ ಆಸೆ ಚಿಗುರಿಸಿದೆ. ಆದರೆ ಮರ ಚಿಗುರುತ್ತಾ ಎಂಬ ಪ್ರಶ್ನೆಯು ಇವರಿಗೆ ಕಾಡುತ್ತಿದೆ. ಮರ ತೆರವು ಮಾಡಿದರೆ ಹೇಗೆ, ಹಾಗೆ ಮಾಡಿದರೆ ಹಳೆಯ ಮರ ದೈವದ ಸಂಕೇತವಾಗಿದ್ದ ವೃಕ್ಷ ಕಳೆದು ಹೋಗುವಾ ಭೀತಿಯು ಜನರಲ್ಲಿ ಕಾಡುತ್ತಿದೆ.

ಬದಲಿ ಸಸಿ ನೆಡೋಣ ಎಂದರೆ, ಈ ಸಂತತಿ ನಶಿಸುತ್ತಾ ಬಂದ ಕಾರಣ ಸಸಿಗಳು ಸಿಗುತ್ತಿಲ್ಲಾ. ಇದು ಇಲ್ಲಿನ ಜನರ ಮನದ ತೊಳಲಾಟವಾಗಿದೆ.

ನಮ್ಮ ಪೂರ್ವಿಕರು ಅರಣ್ಯ ಬೆಳೆಸುವ ಉಳಿಸುವ ದೂರದೃಷ್ಟಿಯಿಂದ ವಿಶಿಷ್ಟ ಮರಗಳಿಗೆ ದೈವದ ನಂಟಿನ ಗಂಟು ಹಾಕಿದ್ದರು. ಇದಲ್ಲದೆ ಪ್ರತಿ ಬೆಟ್ಟದ ತುದಿಯಲ್ಲಿ ದೇವಾಲಯ ನಿರ್ಮಿಸಿ ಪ್ರಾಕೃತಿಕ ಸಂಪತ್ತನ್ನು ಜತನಗೊಳಿಸಿದ್ದರು.

ಇಂದಿಗೂ ಕೂಡ ಜೀವ ವೈವಿಧ್ಯ ರಕ್ಷಣೆಗಾಗಿ ಕೇಂದ್ರ ಮತ್ತು  ರಾಜ್ಯಮಟ್ಟದ ಜೀವ ವೈವಿಧ್ಯ ಮಂಡಳಿಯು ಕಾರ್ಯನಿರ್ವಹಿಸುತ್ತಿದೆ.

ಈ ಮಂಡಳಿಯು ಅಪರೂಪದ ಜೀವಸಂಕುಲ ಹಾಗೂ ಪ್ರಾಕೃತಿಕ ಸಂಪತ್ತನ್ನು ದಾಖಲೀಕರಿಸಿ ಉಳಿಸಿ ಬೆಳೆಸುವಾ ಆಶಯ ಹೊಂದಿದೆ. ಆದರಂತೆ ಇಂತಹ ಅಪರೂಪದ ಮರಗಳ ದಾಖಲೀಕರಣ ಹಾಗೂ ಸಂರಕ್ಷಣೆ ಇಂತಹ ಸಸಿಗಳ ಬೆಳೆಸಿ ತಳಿ ಸಂರಕ್ಷಿಸಬೇಕಾದ ಜವಬ್ದಾರಿ ಈ ಮಂಡಳಿಯದ್ದಾಗಿದೆ.

ಆ ಕಾರಣ ಪುರಸಭೆ, ಅರಣ್ಯ ಇಲಾಖೆ ಮತ್ತು ಜೀವ ವೈವಿಧ್ಯ ಮಂಡಳಿ ಜೊತೆ ಸಂಪರ್ಕ ಮಾಡಿ ಮದ್ದೂರಿನ ಈ ಶಿವಶಂಕರ ಮರ ಉಳಿಸಿಕೊಳ್ಳುವಲ್ಲಿ ಇರುವ ಅವಕಾಶಗಳನ್ನು ಪರಿಶೀಲಿಸಿ ಜರೂರಾಗಿ ಅಗತ್ಯಕ್ರಮ ಜರುಗಿಸಲಿ.

ಪುರಸಭೆಯ ನಾಗರೀಕರು, ಜೀವಶಾಶ್ತ್ರ ಪರಿಣಿತರ ತಂಡ ರಚಿಸಿ ಮದ್ದೂರು ಪಟ್ಟಣದಲ್ಲಿ ಇದೇ ಮಾದರಿಯ ಅಪರೂಪದ ಔಷಧಿಯ ಸಸ್ಯಗಳು ಅದರ ಬಳಕೆ ಕುರಿತು ಸರ್ವೆ ನಡೆಸಿ ಅವುಗಳ ಉಳಿವಿಗಾಗಿ ಕಾರ್ಯ ಪ್ರವೃತ್ತರಾಗಲಿ.

ಜೀವವೈವಿಧ್ಯ ಮಂಡಳಿ

ಅಪರೂಪದ ಮರಗಳು, ಸಸ್ಯಗಳ, ಪ್ರಾಕೃತಿಕ ಸಂಪನ್ಮೂಲಗಳಾದ ಮರ, ಗಿಡ, ವಿಭಿನ್ನ ವಿಶಿಷ್ಟ ಪ್ರಭೇದಗಳನ್ನು ಸಂರಕ್ಷಿಸಲು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಜೀವವೈವಿಧ್ಯ ಮಂಡಳಿಯು ಇದೆ. ಈ ಮಂಡಳಿಯು ಎಲ್ಲಾ ಜಿಲ್ಲೆಯಲ್ಲಿ, ತಾಲ್ಲೂಕಿನಲ್ಲಿ ಸ್ಸಳೀಯ ಸಂಸ್ಥೆಗಳ ರೀತಿಯಲ್ಲೇ ಕಾರ್ಯನಿರ್ವಹಿಸುತ್ತದೆ.

ಈ ಮಂಡಳಿಯು ಸ್ಥಳೀಯ ಸಂಸ್ಥೆಗಳನ್ನು ಹೊಂದಿರುತ್ತದೆ. ಜಿಲ್ಲೆ, ತಾಲ್ಲೂಕಿನಲ್ಲಿ, ಇದಕ್ಕೆ ಸಂಬಂಧಿಸಿದಂತೆ ಒಂದು ಅಧಿಕೃತ ಸಮಿತಿಯು ಕಾನೂನು ಬದ್ಧವಾಗಿಯೇ ಕಾರ್ಯನಿರ್ವಹಿಸುತ್ತದೆ.

ಪ್ರತಿ ಜೀವವೈವಿಧ್ಯ ನಿರ್ವಹಣಾ ಸಮಿತಿಯು ತನ್ನ ಕ್ರಿಯಾಯೋಜನೆಯನ್ನು ಈ ಕೆಳಕಂಡ ಅಂಶಗಳನ್ನು ಒಳಗೊಂಡಂತೆ ತಯಾರಿಸಬೇಕಾಗುತ್ತದೆ.

ಈ ಜೀವವೈವಿಧ್ಯ ಸಂಬಂಧೀ ಸಂಪನ್ಮೂಲಗಳ ಸಂರಕ್ಷಣೆಗಾಗಿ ಇಡಬೇಕಾದ ಹೆಜ್ಜೆಗಳು, ಈ ಜೀವವೈವಿಧ್ಯ ನಿರ್ವಹಣಾ ಸಮಿತಿಯ ಸದಸ್ಯರಿಗೆಬೇಕಾದ ತರಬೇತಿಗಳು, ಭೌಗೋಳಿಕಾ ಸೂಚನಾ (Geographical Indicators, G.I) ಜೀವಿಗಳ ಜೀವವೈವಿಧ್ಯಯನ್ನು ಗುರುತಿಸುವಿಕೆಗಾಗಿ ಬೇಕಾಗುವ ಅಂಶಗಳ ಪಟ್ಟಿ ತಯಾರಿಕೆ, ಜೀವವೈವಿಧ್ಯ ಗುರುತಿಸುವಿಕೆಗಾಗಿ ಬೇಕಾಗುವ ಅಂಶಗಳ ಪಟ್ಟಿ ತಯಾರಿಕೆ, ಸ್ಥಳೀಯ ಜೀವವೈವಿಧ್ಯ ಸಂಬಂಧಿ ಸಂಪನ್ಮೂಲಗಳ ಸಮರ್ಪಕ ಬಳಕೆ, ಔಷಧಿ ಸಸ್ಯಗಳು-ಸಂಬಂಧೀ ಸಾಂಪ್ರದಾಯಿಕ ಸಂಪನ್ಮೂಲಗಳ ಸಮರ್ಪಕ ನಿರ್ವಹಣೆಗಾಗಿ ಕ್ರಿಯಾಯೋಜನಾ ತಯಾರಿಕೆ ಮಾಡುವಂತಹ ಕ್ರಿಯಾ ಯೋಜನೆಯನ್ನು ರೂಪಿಸಬೇಕಾಗುತ್ತದೆ.

ಕಳೆದ ಕೆಲವು ದಿನಗಳಿಂದ ಆಕಾಲಿಕ ಮಳೆಯು, ಬದಲಾದ ವಾತಾವರಣದಿಂದ  ಈ ಸಂದರ್ಭದಲ್ಲಿ  ಸಸ್ಯ ಪ್ರಭೇದಗಳು, ತಳಿಗಳು, ವಿಶೇಷವಾದ ಮರಗಳು ನಾಶವಾಶವಾಗುತ್ತಿರುವುದನ್ನು ನೋಡಬಹುದು. ಇದೆಲ್ಲವನ್ನು ಉಳಿಸುವ, ಗುರುತಿಸುವ, ಸಂರಕ್ಷಿಸುವ ಪಾತ್ರ ಜೀವವೈವಿಧ್ಯ  ನಿರ್ವಹಣಾ ಸಮಿತಿಯ ಜವಾಬ್ದಾರಿಯಾಗಿದೆ.

ಭಾರತದಲ್ಲಿ ಅರುಣಾಚಲದ ಶೇರ್ಗಾಂವ್ ಜೀವವೈವಿಧ್ಯ ನಿರ್ವಹಣಾ ಸಮಿತಿಯು ಅತ್ಯುತ್ತಮ ಜೀವವೈವಿಧ್ಯ ನಿರ್ವಹಣಾ ಸಮಿತಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.  ಭಾರತದಲ್ಲಿ  276836 ಜೀವವೈವಿಧ್ಯ ನಿರ್ವಹಣಾ ಸಮಿತಿಗಳಿವೆ.

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!