Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಬ್ಬು-ಭತ್ತದ ಬೆಳೆಗಳಿಗೆ ಕೀಟರೋಗ ಬಾಧೆ| ರೈತರು ಅನುಸರಿಸಬೇಕಾದ ಕ್ರಮಗಳೇನು ? ಇಲ್ಲಿದೆ ಮಾಹಿತಿ….

ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳನ್ನೊಳಗೊಂಡ ಮಂಡ್ಯ ಜಿಲ್ಲಾ ಪೀಡೆ ಸರ್ವೇಕ್ಷಣಾ ತಂಡವು ಮಂಡ್ಯ, ಮದ್ದೂರು, ಮಳವಳ್ಳಿ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನ ವಿವಿಧ ಗ್ರಾಮಗಳ ಬೆಳೆಗಳಲ್ಲಿ ಕಂಡುಬಂದಿರುವ ಕೀಟ-ರೋಗ ಬಾಧೆ ಹಾಗೂ ಇತರೆ ಕ್ಷೇತ್ರ ಸಮಸ್ಯೆಗಳನ್ನು ಗುರುತಿಸಿ ಅವುಗಳ ನಿರ್ವಹಣೆಗೆ ಮುಂಜಾಗ್ರತಾ ಕ್ರಮಗಳನ್ನು ರೈತರಿಗೆ ಹಾಗೂ ಇಲಾಖೆಯ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಿದ್ದಾರೆ.

ಭತ್ತದ ಬೆಳೆಗಳಿಗೆ ಅನುಸರಿಸಬೇಕಾದ ಕ್ರಮಗಳು

ಭತ್ತದ ಬೆಳೆಯಲ್ಲಿ ಪ್ರಮುಖವಾಗಿ ಎಲೆ ಮತ್ತು ತೆನೆ ಕವಚ ಕೊಳೆ ರೋಗ, ಕಂದು ಎಲೆ ಚುಕ್ಕೆ ರೋಗ. ಗರಿ ಮಡಿಸುವ ಹುಳು, ಕಣೆ ನೊಣದ ಬಾಧೆ ಕಂಡುಬಂದಿರುತ್ತದೆ. ಬಹುತೇಕ ರೈತರು ಭತ್ತದ ಬೆಳೆಯಲ್ಲಿ ಮೂಲ ಗೊಬ್ಬರವಾಗಿ ಪೆÇೀಟ್ಯಾಷ್ ಬಳಕೆ ಮಾಡದಿರುವುದು ಕಂಡುಬಂದಿದ್ದು, ಇದರಿಂದ ರೋಗ ಕೀಟಭಾದೆ ಹೆಚ್ಚಾಗಿರುತ್ತದೆ. ಮೇಲುಗೊಬ್ಬರವಾಗಿ 10 ಕೆ.ಜಿ. ಯೂರಿಯಾ ಜೊತೆಗೆ 16 ಕೆ.ಜಿ ಎಂ.ಒ.ಪಿ ಪ್ರತಿ ಎಕರೆಗೆ ಹೂವಾಡುವುದಕ್ಕಿಂತ ಮುಂಚೆ ನೀಡಲು ಸೂಚನೆ ನೀಡಲಾಗಿದೆ.

ಎಲೆ ಕವಚ ಕೊಳೆ ರೋಗ

ಎಲೆಗಳ ಕವಚದ ಮೇಲೆ ಕಂದು ಅಂಚುಳ್ಳ ಹುಲ್ಲಿನ ಬಣ್ಣದ ಉದ್ದ ಮಚ್ಚೆಗಳು ಕಾಣಿಸಿಕೊಂಡು ಎಲೆಗಳು ಒಣಗಿರುತ್ತದೆ. ನಿರ್ವಹಣಾ ಕ್ರಮವಾಗಿ ಕಾಬೆರ್ಂಡಜಿಂ 50ಡಬ್ಲ್ಯೂಪಿ (1 ಗ್ರಾಂ) ಅಥವಾ   ಹೆಕ್ಸಾಕೋನಜೋಲ್ 5ಇಸಿ (2 ಮಿ.ಲೀ.) ಅಥವಾ ಮ್ಯಾಂಕೋಜೆಬ್ 63 ಡಬ್ಲ್ಯೂಪಿ + ಕಾಬೆರ್ಂಡಜಿಂ 12% ಡಬ್ಲ್ಯೂಪಿ ಸಂಯುಕ್ತ (2 ಗ್ರಾಂ) ಅಥವಾ ಪೆÇ್ರಪಿಕೋನಜೋಲ್ 25ಇಸಿ (1 ಮಿ.ಲೀ.) ಶಿಲೀಂಧ್ರನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಗಿಡದ ಕಾಂಡದ ಭಾಗಕ್ಕೆ ಸಿಂಪರಣೆ ಮಾಡುವುದು.

ತೆನೆ ಕವಚ ಕೊಳೆ ರೋಗ

ಬಾವುಟದ ಗರಿಯ ಕವಚದ ಮೇಲೆ ಕಂದು ಚುಕ್ಕೆಗಳಾಗಿ ತೆನೆಯು ಸ್ವಲ್ಪ ಮಾತ್ರ ಹೊರ ಬಂದಿರುತ್ತದೆ. ನಿರ್ವಹಣಾ ಕ್ರಮವಾಗಿ ಕಾಬೆರ್ಂಡಜಿಂ 50 ಡಬ್ಲ್ಯೂಪಿ (1 ಗ್ರಾಂ) ಅಥವಾ ಮ್ಯಾಂಕೋಜೆಬ್ 63 ಡಬ್ಲ್ಯೂಪಿ + ಕಾಬೆರ್ಂಡಜಿಂ 12% ಡಬ್ಲ್ಯೂಪಿ ಸಂಯುಕ್ತ (2 ಗ್ರಾಂ) ಅಥವಾ ಟ್ರೈಪಾಕ್ಸಿಸ್ಟ್ರೋಬಿನ್ 25 + ಟೆಬುಕೋನಜೋಲ್ 50 ಡಬ್ಲ್ಯೂಜಿ ಸಂಯುಕ್ತ (4 ಗ್ರಾಂ) ಶಿಲೀಂಧ್ರನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು.

ಕಂದು ಎಲೆ ಚುಕ್ಕೆ ರೋಗ

ಎಲೆಗಳ ಮೇಲೆ ಮೊಟ್ಟೆಯಾಕಾರದ ಅಥವಾ ಕಿರಿದಾದ ಉದ್ದನೆಯ ಕಂದು ಚುಕ್ಕೆಗಳು ಕಂಡು ಬಂದಿರುತ್ತದೆ. ನಿರ್ವಹಣಾ ಕ್ರಮವಾಗಿ ಮ್ಯಾಂಕೋಜೆಬ್ 63 ಡಬ್ಲ್ಯೂಪಿ + ಕಾಬೆರ್ಂಡಜಿಂ 12% ಡಬ್ಲ್ಯೂಪಿ ಸಂಯುಕ್ತ (2 ಗ್ರಾಂ) ಅಥವಾ ಕಾಬೆರ್ಂಡಜಿಂ 50ಡಬ್ಲ್ಯೂಪಿ (2 ಗ್ರಾಂ) ಶಿಲೀಂಧ್ರನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು.

ಗರಿ ಮಡಿಸುವ ಹುಳು

ಗರಿಗಳ ಅಂಚು ಒಳಭಾಗಕ್ಕೆ ಸುರುಳಿ ಸುತ್ತಿಕೊಂಡಿರುವುದು. ಇಂತಹ ಗರಿಗಳೊಳಗೆ ಹಸಿರು ಭಾಗವನ್ನು ಕೆರೆದು ತಿನ್ನುವುದರಿಂದ ಬಿಳಿಯ ಹಾಳೆಯಂತೆ ಕಾಣಿಸಿ ಒಣಗಿರುತ್ತದೆ. ನಿರ್ವಹಣಾ ಕ್ರಮವಾಗಿ ಕ್ವಿನಾಲ್ ಫಾಸ್ 25 ಇಸಿ (2 ಮಿ.ಲೀ) ಅಥವಾ ಕ್ಲೋರೋಪೈರಿಫಾಸ್ 20 ಇ.ಸಿ. (2 ಮಿ.ಲೀ)  ಅಥವಾ ಇಂಡಾಕ್ಸಕಾರ್ಬ್ 14.5 ಇಸಿ (0.5 ಮಿ.ಲೀ) ಅಥವಾ ಫೆÇ್ಲಬೆಂಡೈಮೈಡ್ 480 ಎಸ್.ಸಿ (0.1 ಮಿ.ಲೀ) ಅಥವಾ ಫೆÇ್ಲಬೆಂಡೈಮೈಡ್ 20 ಡಬ್ಲ್ಯೂಜಿ (0.20 ಗ್ರಾಂ) ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು.

ತೆನೆ ತಿಗಣೆ

ತೆನೆ ಹಾಲು ತುಂಬುವ ಹಂತದಲ್ಲಿ ರಸ ಹೀರುತ್ತದೆ. ಅಂತಹ ಕಾಳುಗಳು ಜೊಳ್ಳಾಗಬಹುದು ಅಥವಾ ಚೀಕಲು ಕಾಳು ಉಂಟಾಗಿರುತ್ತದೆ. ನಿರ್ವಹಣಾ ಕ್ರಮವಾಗಿ ಥಯಾಮೆಥಾಕ್ಸಮ್ 25 ಎಸ್.ಜಿ. (0.2 ಗ್ರಾಂ) + ಬೇವಿನ ಎಣ್ಣೆ (3 ಮಿ.ಲೀ.) ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು.

ಕಬ್ಬು ಬೆಳೆಗೆ ಪರಿಹಾರ ಕ್ರಮಗಳು 

ಕಬ್ಬು ಬೆಳೆಯಲ್ಲಿ ಪ್ರಮುಖವಾಗಿ ಆದಿ ಸುಳಿ ಕೊರೆವ ಹುಳು, ಮೇಲಿನ ಸುಳಿ ಕೊರಕ ಕೀಟದ ಬಾಧೆ ಕಂಡುಬಂದಿರುತ್ತದೆ.

ಆದಿ ಸುಳಿ ಕೊರೆವ ಹುಳು

ಮರಿಗಳು ಬುಡಭಾಗದಲ್ಲಿ ಕೊರೆದು ಸುಳಿಯಲ್ಲಿ ಸೇರಿ ಕಾಂಡವನ್ನು ತಿನ್ನುವುದರಿಂದ ಸುಳಿ ಒಣಗಿರುತ್ತದೆ. ಕೈಯಿಂದ ಎಳೆದರೆ ಸುಲಭವಾಗಿ ಸುಳಿ ಹೊರಬರುತ್ತದೆ. ನಿರ್ವಹಣಾ ಕ್ರಮವಾಗಿ ಕ್ಲೋರ್ ಪೈರಿಫಾಸ್ 20 ಇಸಿ (2 ಮಿ.ಲೀ) ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು ಅಥವಾ ಕ್ಲೋರಾಂಟ್ರಾನಿಲಿಪೆÇ್ರೀಲ್ 0.4 ಜಿ (9 ಕಿ.ಗ್ರಾ)  ಅಥವಾ ಕ್ಲೋರೋಪೈರಿಫಾಸ್ 20 ಇ.ಸಿ. (2 ಮಿ.ಲೀ)  ಅಥವಾ ಫಿಪೆಶ್ರೀನಿಲ್ 0.3 ಜಿ (10 ಕಿ.ಗ್ರಾಂ) ಪ್ರತಿ ಎಕೆರೆಗೆ ನಾಟಿ ಮಾಡಿದ 60 ದಿನಗಳ ನಂತರ ಹಾಕುವುದು ಅಥವಾ ಟ್ರೈಕೋಗ್ರಾಮ ಪರತಂತ್ರ ಜೀವಿಗಳ ಬಳಕೆ ಮಾಡಬಹುದಾಗಿದೆ.

ಮೇಲಿನ ಸುಳಿ ಕೊರಕ

ಸುಳಿಯ ಗರಿಯಲ್ಲಿ ಗುಂಡು ಸೂಚಿಯಾಕಾರದ ರಂಧ್ರಗಳು ಕಂಡುಬರುತ್ತದೆ. ಜಲ್ಲೆಯ ಮೇಲ್ಭಾಗದ ಕಣ್ಣುಗಳು ಮೊಳೆತು ಕವಲುಗಳು ಬಂದಿರುತ್ತದೆ. ನಿರ್ವಹಣಾ ಕ್ರಮವಾಗಿ ಕಬ್ಬು ನೆಟ್ಟ 90 ದಿನಗಳ ನಂತರ ಪ್ರತಿ ಎಕರೆಗೆ 6000 ಟ್ರೈಕೋಗ್ರಾಮ ಪರತಂತ್ರ ಜೀವಿಗಳನ್ನು ಪ್ರತಿ ವಾರಕ್ಕೊಮ್ಮೆ 5 ವಾರ ಬಿಡುಗಡೆ ಮಾಡುವುದು. ಕ್ಲೋರೋಪೈರಿಫಾಸ್ 20 ಇ.ಸಿ. (2 ಮಿ.ಲೀ)  ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು.

ಮುಸುಕಿನ ಜೋಳ

ಮುಸುಕಿನ ಜೋಳ ಬೆಳೆಯಲ್ಲಿ ಪ್ರಮುಖವಾಗಿ ಲದ್ದಿಹುಳು ಬಾಧೆ ಕಂಡುಬಂದಿರುತ್ತದೆ. ಸುಳಿಯಲ್ಲಿ ಮರಿಹುಳುಗಳು ಗರಿಗಳನ್ನು ತಿನ್ನುತ್ತದೆ, ಸುಳಿಗರಿಯಲ್ಲಿ ಮರಿಗಳ ಹಿಕ್ಕೆಗಳು ಕಂಡುಬಂದಿರುತ್ತದೆ.  ನಿರ್ವಹಣಾ ಕ್ರಮವಾಗಿ ಸ್ಪೈನೆಟೋರಾಮ್ 11.7 ಎಸ್.ಸಿ  (0.5 ಮಿ.ಲೀ) ಅಥವಾ ಎಮಾಮೆಕ್ಟಿನ್ ಬೆಂಜೋಯೇಟ್ 5% ಎಸ್.ಇ. (0.4 ಗ್ರಾಂ) ಅಥವಾ ಕ್ಲೋರಂಟ್ರಾನಿಲಿಪೆÇ್ರೀಲ್ 12.5 ಎಸ್.ಸಿ. (0.4 ಮಿ.ಲೀ.) ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು.

ರೈತ ಬಾಂಧವರು ಕ್ಷೇತ್ರ ಸಮಸ್ಯೆಗಳಿಗೆ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಲು ಕೋರಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!