Wednesday, September 25, 2024

ಪ್ರಾಯೋಗಿಕ ಆವೃತ್ತಿ

ಆಸ್ಪತ್ರೆಗೆ ಶಾಸಕ ಪಿ.ಎಂ ನರೇಂದ್ರಸ್ವಾಮಿ ದಿಢೀರ್ ಭೇಟಿ : ಪರಿಶೀಲನೆ

ಮಳವಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಪಿ.ಎಂ ನರೇಂದ್ರಸ್ವಾಮಿ ದಿಢೀರ್ ಭೇಟಿ ನೀಡಿ ಸೌಲಭ್ಯಗಳ ಬಗ್ಗೆ ಪರಿಶೀಲಿಸಿ ನಡೆಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕೆಂದು ಸೂಚನೆ ನೀಡಿದರು.

ಪರಿಶೀಲನೆ ನಂತರ ಮಾತನಾಡಿದ ಶಾಸಕ ಪಿ.ಎಂ ನರೇಂದ್ರಸ್ವಾಮಿ ಅವರು, ಆಸ್ಪತ್ರೆಗೆ ರೋಗಿಗಳ ಚಿಕಿತ್ಸೆಗೆ ಯಾವುದೇ ತೊಂದರೆಯಾಗದಂತೆ ಸೌಲಭ್ಯಗಳನ್ನು ನೀಡಬೇಕೆಂದು ತಾಲ್ಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಮಹದೇವನಾಯಕ್ ಅವರಿಗೆ ಸೂಚನೆ ನೀಡಿದರು.

ಕಷ್ಟದಲ್ಲಿ ಬರುವ ರೋಗಿಗಳಿಗೆ ವೈದ್ಯರು ಸರಿಯಾಗಿ ಸ್ಪಂದಿಸಬೇಕು, ಆನಗತ್ಯವಾಗಿ ರೋಗಿಗಳಿಗೆ ತೊಂದರೆ ಕೊಡಬಾರದು, ಅಗತ್ಯವಿರುವ ಔಷಧಗಳನ್ನು ತರಿಸಿಕೊಂಡು ರೋಗಿಗಳಿಗೆ ನೀಡಬೇಕು. ಹೊರಗೆ ತೆಗೆದುಕೊಳ್ಳುವಂತೆ ಚೀಟಿ ಬರೆಯುವುದನ್ನು ನಿಲ್ಲಿಸಬೇಕು. ಆಸ್ಪತ್ರೆಯಲ್ಲಿ ಸ್ಚಚ್ಛತೆಗೆ ಹೆಚ್ಚು ಒತ್ತು ನೀಡಬೇಕು, ಸೌಲಭ್ಯಗಳ ಅಗತ್ಯವಿದ್ದರೆ ಕೂಡಲೇ ನನ್ನ ಗಮನಕ್ಕೆ ತರಬೇಕು, ಚಿಕಿತ್ಸೆ ಹಾಗೂ ವೈದ್ಯಕೀಯ ಸವಲತ್ತು ನೀಡದ ಬಗ್ಗೆ ದೂರುಗಳು ಏನಾದರೂ ಕೇಳಿಬಂದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ತುರ್ತು ವಿಭಾಗ, ಸಾಮಾನ್ಯ ವಾರ್ಡ್, ಔಷಧಿ ಉಗ್ರಾಣ, ಹೆರಿಗೆ ವಾರ್ಡ್ ಸೇರಿದಂತೆ ವಿವಿದ ಕೊಠಡಿಗಳನ್ನು ಪರಿಶೀಲಿಸಿ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಕಾಮಗಾರಿ ಬಗ್ಗೆ ಮಾಹಿತಿ ಪಡೆದ ಸರಿಯಾಗಿ ಕೆಲಸ ಮಾಡದ ಎಂಜಿನಿಯರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಗುಣಮಟ್ಟ ಕಪಾಡಿಕೊಂಡು ತಕ್ಷಣದಲ್ಲಿಯೇ ಕೆಲಸ ಮುಗಿಸುವಂತೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಆರ್.ಎನ್.ವಿಶ್ವಾಸ್, ಇನ್ಸ್ಪೆಕ್ಟರ್ ಎ.ಕೆ.ರಾಜೇಶ್, ಮುಖ್ಯಾಧಿಕಾರಿ ಎಂ.ಎಸ್.ಮಹದೇವ್, ಪುರಸಭೆ ಸದಸ್ಯ ಎಂ.ಎಸ್.ಶಿವಸ್ವಾಮಿ, ಮುಖಂಡರಾದ ಬಂಕ್ ಮಹದೇವ್, ರಮೇಶ್ ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!