Friday, September 20, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು| ಪ್ರೊ. ಎಂಡಿಎನ್ ಜೀವನಾಧಾರಿತ ”ಡೈರಕ್ಟ್ ಆಕ್ಷನ್” ನಾಟಕದ ಪೋಸ್ಟರ್ ಬಿಡುಗಡೆ

ವಿಶ್ವ ರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ ರೈತಚಳವಳಿ ಆಧಾರಿಸಿದ ಸಾಹಸಗಾಥ ” ಡೈರಕ್ಟ್ಆಕ್ಷನ್” ನಾಟಕದ ಪೋಸ್ಟರ್ ಬಿಡುಗಡೆ ಹಾಗು ಪ್ರಚಾರ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಾಯಿತು

ನೈಸರ್ಗಿಕ ಕೃಷಿಕ ಗೂಳೂರು ಕೃಷ್ಣ ಅವರು ತಮ್ಮ ಗದ್ದೆಯಲ್ಲಿ ನಡೆಯುತ್ತಿದ್ದ ರಾಗಿ ಕಟಾವಿನ ನಡುವೆ ಪೊಸ್ಟರ್ ಬಿಡುಗಡೆ ಗೊಳಿಸಿದರು.

ಬೀಜ ಸ್ವಾತಂತ್ರ್ಯದ ಬಗ್ಗೆ ವಿಶ್ವ ವಾಣಿಜ್ಯ ಒಪ್ಪಂದದ ವೇಳೆ ಎಚ್ಚರಿಸಿ ಜಾಗೃತಿ ಮೂಡಿಸಿದ ಪ್ರೊ.ಎಂ. ಡಿ ನಂಜುಂಡಸ್ವಾಮಿಯವರ ವಿಚಾರಧಾರೆ ಪ್ರಸ್ತುತ ಕಾಲಮಾನಕ್ಕೆ ಹೆಚ್ಚು ಅಗತ್ಯವಾಗಿದೆ ಎಂದರು.

ಫೆ.11ರಂದು ಸಂಜೆ 6 ಗಂಟೆಗೆ ಮದ್ದೂರಿನ ಕ್ರೀಡಾಂಗಣದಲ್ಲಿ ನಾಟಕ ಪ್ರದರ್ಶನ ನಡೆಯಲಿದ್ದು, ಬೆಂಗಳೂರಿನ ಹೆಸರಾಂತ ನಗ್ನ ಥಿಯೇಟರ್ ತಂಡ ನಾಟಕ ಅಭಿನಯಿಸಲಿದ್ದು, ಸಂಪತ್ ಮೈತ್ರೇಯಾ ಪ್ರೊ.ಎಂ.ಡಿ ನಂಜುಂಡಸ್ವಾಮಿಯವರ ಪಾತ್ರದಲ್ಲಿ ಅಭಿನಯಿಸಲಿದ್ದಾರೆ

ನಟರಾಜದ ಹುಳಿಯಾರ್ ನಾಟಕದ ಕಥೆ ಬರೆದಿದ್ದು, ಕಬ್ಬಡ್ಡಿ ನರೇಂದ್ರಬಾಬು ನಾಟಕ ನಿರ್ದೆಶಿಸಿದ್ದಾರೆ.
ರೈತ ಚಳವಳಿ ಕುರಿತ ಸಾಹಸಗಾಥೆ ‘ಡೈರಕ್ಟ್ ಆಕ್ಷನ್’ ನಾಟಕಕ್ಕೆ ಜನರು ಸ್ವ ಪ್ರೇರಣೆಯಿಂದ ಭಾಗವಹಿಸಿ ರೈತ ಚಳವಳಿಯನ್ನು ಕಣ್ತುಂಬಿಕೊಳ್ಳಬೆಕೆಂದು ಮನವಿ ಮಾಡಿದರು.

ಬಿದರಕೊಟೆ ಗ್ರಾಮದ ಗಡಿಯಾರ ಸರ್ಕಲ್ ನಲ್ಲಿ ರೈತ ಮುಖಂಡ ರಮೇಶ್, ಮೋಹನ್ ಬಿ ಎಸ್, ಬಿ ಜೆ ರಮೇಶ್ ಬಿ ಎಲ್ ಪುಟ್ಟಲಿಂಗೇಗೌಡ, ದಿನೇಶ್ ಬಾಬು, ನಾಥಪ್ಪ, ಲೊಕೇಶ್ ಬಿ ಸಿ ಉಪಸ್ಥಿತರಿದ್ದರು. ಕೊಪ್ಪ, ಕೀಳಘಟ್ಟ, ಬೆಸಗರಹಳ್ಳಿ, ಬೆಸಗರಹಳ್ಳಿ ಗೇಟ್ ಸೇರಿದಂತೆ ಮದ್ದೂರು ತಾಲ್ಲೂಕಿನಾದ್ಯಂತ ಪ್ರಚಾರ ಕಾರ್ಯ ಬಿರುಸಿನಿಂದ ನಡೆದಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!