Thursday, June 13, 2024

ಪ್ರಾಯೋಗಿಕ ಆವೃತ್ತಿ

ನಾಗಮಂಗಲ| ಅಂತರಾಷ್ಟ್ರೀಯ ದಾದಿಯರ ದಿನ ಆಚರಣೆ

ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಆದಿಚುಂಚನಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಶನಿವಾರ ಅಂತರಾಷ್ಟ್ರೀಯ ದಾದಿಯರ ( ಶುಶ್ರೂಷಕರ) ದಿನಾಚರಣೆಯನ್ನು ಆಚರಿಸಲಾಯಿತು.

ಆದಿಚುಂಚನಗಿರಿ ಪೀಠಾಧ್ಯಕ್ಷ  ಡಾ.ನಿರ್ಮಲಾನಂದನಾಥ ಮಹಾಸ್ವಾಮಿಜೀ ಮಾತನಾಡಿ, ಶುಶ್ರೂಷಕರು ದೇವರ ಪ್ರೀತಿ ಮೆಚ್ಚುಗೆಗೆ ಪಾತ್ರರಾದವರು, ಅವರು ಆರೋಗ್ಯ ಕ್ಷೇತ್ರದ ಹೃದಯವಿದ್ದಂತೆ, ಅರೋಗ್ಯ ಕ್ಷೇತ್ರದಲ್ಲಿ ವೈದ್ಯರುಗಳು ತಂದೆ ಇದ್ದಂತೆ ಶುಶ್ರೂಷಕರು ತಾಯಿ ಇದ್ದಂತೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು, ಆಧುನಿಕ ಪ್ರಪಂಚದಲ್ಲಿ ತಂತ್ರಜ್ಞಾನವು ಎಂದಿಗೂ ಶುಶ್ರೂಷಕರ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ ಎಂದು ಹೇಳಿದರು.

ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ ಎಂ.ಜಿ. ಶಿವರಾಮ್ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಶುಶ್ರೂಷಕರ ಸೇವೆ ಮೌಲ್ಯಯುತವಾದುದು, ಮಹಾಮಾರಿ ಕೊರೋನದಲ್ಲಿ ಇವರ ಜೀವದ ಹಂಗು ತೊರೆದು ಸೇವೆ ಸಲ್ಲಿಸಿರುವುದು ಮರೆಯಲಾಗುವುದಿಲ್ಲ ಎಂದು ಹೆಮ್ಮೆ ವ್ಯಕ್ತಪಡಿಸಿದರು,
ಎಂಬುದನ್ನು ತಿಳಿಸಿದರು.

ಡಾ. ಸಿ.ಕೆ.ಸುಬ್ಬರಾಯ, ಆಸ್ಪತ್ರೆ ಮುಖ್ಯಸ್ಥರದ ಡಾ.ಕೆ.ಎಂ ಶಿವಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಡೀನ್ ಆಫ್ ಅಕೇಡೆಮಿಕ್ಸ್ ಡಾ.ರಮೇಶ್, ಹಣಕಾಸು ಮುಖ್ಯಸ್ಥ ಬಿ.ಕೆ.ಉಮೇಶ್, ಡಾ.ಇ ಎಸ್ ಚಕ್ರವರ್ತಿ, ಡಾ.ಕೆ ಎಸ್ ರವಿ, ನರ್ಸಿಂಗ್ ಸೂಪರ್ಡೆಂಟ್ ಹೇಮಲತಾ, ಆದಿಚುಂಚನಗಿರಿ ಶುಶ್ರೂಷಕ ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!