Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಫೆ.15ಕ್ಕೆ ಪ್ರೊ. ಜಯಪ್ರಕಾಶಗೌಡ 75 ಅಭಿನಂದನೆ: ಅಭಿನಂದನಾ ಗ್ರಂಥ ಲೋಕಾರ್ಪಣೆ

ಪ್ರೊ. ಜಯಪ್ರಕಾಶಗೌಡ ಅಭಿನಂದನಾ ಸಮಿತಿ ವತಿಯಿಂದ ಫೆ. 15ರಂದು ನಗರದ ಡಾ. ಅಂಬೇಡ್ಕರ್ ಭವನದಲ್ಲಿ ಸಾಂಸ್ಕೃತಿಕ ರಾಯಬಾಯಿ ಎಂದೇ ಖ್ಯಾತಿಯಾಗಿರುವ ಪ್ರೊ. ಜಯಪ್ರಕಾಶಗೌಡ 75 ಅಭಿನಂದನೆ, ರಂಗಾಭಿನಂದನ ಅಭಿನಂದನಾ ಗ್ರಂಥ ಹಾಗೂ ನಾಥಪಂಥ ಎಂಟು ಸಂಪುಟಗಳ ಮಾಲಿಕೆ ಪ್ರಥಮ ಸಂಪುಟ ಲೋಕಾರ್ಪಣೆ ಸಮಾರಂಭ ನಡೆಯಲಿದೆ ಎಂದು ರಂಗಾಭಿನಂದನ ಅಭಿನಂದನಾ ಗ್ರಂಥ ಸಮಿತಿ ಸಂಪಾದಕ ಡಾ. ಮ. ರಾಮಕೃಷ್ಣ ತಿಳಿಸಿದರು.

ಮಂಡ್ಯದಲ್ಲಿ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂದು ಬೆಳಗ್ಗೆ 10.30ಕ್ಕೆ ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಅಧ್ಯಕ್ಷತೆಯಲ್ಲಿ ನಡೆಯುವ ರಂಗಸಂಭ್ರಮ ಕಾರ‍್ಯಕ್ರಮವನ್ನು ಪೊಲೀಸ್ ಮಹಾ ನಿರೀಕ್ಷಕ ಡಾ. ಬಿ.ಆರ್. ರವಿಕಾಂತೇಗೌಡ ಉದ್ಘಾಟಿಸುವರು ಎಂದರು.

ಮಾಜಿ ಶಾಸಕ ಜಿ.ಬಿ. ಶಿವಕುಮಾರ್, ವಿಶ್ರಾಂತ ಪ್ರಾಂಶುಪಾಲರಾದ ಡಾ.ಡಿ. ಶ್ರೀನಿವಾಸ್, ಡಾ. ವಿ.ಕೆ. ಕೃಷ್ಣಪ್ಪ, ಅಭಿನವ ಭಾರತಿ ವಿದ್ಯಾಸಂಸ್ಥೆ ಕಾರ‍್ಯದರ್ಶಿ ಶಿವಮೂರ್ತಿ ಕೀಲಾರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಹೇಳಿದರು.

ಮಧ್ಯಾಹ್ನ 2 ಗಂಟೆಗೆ ಜೆಪಿ-ನೆನಪಿನಂಗಳದಲ್ಲಿ ಕಾರ‍್ಯಕ್ರಮ ನಡೆಯಲಿದ್ದು, ಶಿಕ್ಷಣ ತಜ್ಞ ಪ್ರೊ. ಎಚ್.ಎಸ್. ಉಮೇಶ್ ಅಧ್ಯಕ್ಷತೆ ವಹಿಸುವರು. ವಿಶ್ರಾಂತ ಪ್ರಾಧ್ಯಾಪಕ ಡಾ. ಗುರುಪಾದ ಮರಿಗುದ್ದಿ ಅವರು ಸಾಂಸ್ಕೃತಿಕ ಚಟುವಟಿಕೆಗಳು ಕುರಿತು ಮಾತನಾಡುವರು. ಖ್ಯಾತ ಗಾಯಕ ಡಾ. ಅಪ್ಪಗೆರೆ ತಿಮ್ಮರಾಜು ಅಸ್ಮಿತೆಯ ಹುಡುಕಾಟ ಕುರಿತು ಮಾತನಾಡುವರು. ಮಹಿಳಾ ಚಿಂತಕಿ ಡಾ. ಕೆ.ಆರ್. ಸಂಧ್ಯಾರೆಡ್ಡಿ ಅವರು ಜೆಪಿಯವರ ಒಡನಾಟ ಕುರಿತಂತೆ ಮಾತನಾಡಿದರೆ, ರಂಗಕರ್ಮಿ ಡಾ. ಶಶಿಧರ ಭಾರಿಘಾಟ್ ಅವರು ರಂಗಸಂಘಟನೆ ಕುರಿತು ಮಾತನಾಡುವರು ಎಂದು ವಿವರಿಸಿದರು.

ಸಂಜೆ 4 ಗಂಟೆಗೆ ಪ್ರೊ. ಜಯಪ್ರಕಾಶಗೌಡ 75 ಅಭಿನಂದನೆ ರಂಗಾಭಿನಂದನ ಅಭಿನಂದನಾ ಗ್ರಂಥ ಹಾಗೂ ನಾಥಪಂಥ ಕೃತಿ ಬಿಡುಗಡೆ ಸಮಾರಂಭ ನಡೆಯಲಿದ್ದು, ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ಹಾಗೂ ವಿಶ್ವಮಾನವ ಕೊಮ್ಮೇರಹಳ್ಳಿ ಕ್ಷೇತ್ರದ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆಯುವ ಕಾರ‍್ಯಕ್ರಮವನ್ನು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಉದ್ಘಾಟಿಸುವರು ಎಂದರು.

ಮಾಜಿ ಶಾಸಕ ಬಿ. ರಾಮಕೃಷ್ಣ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಜಲಸಾರಿಗೆ ಮಂಡಳಿ ಸಿಇಓ ಜಯರಾಂ ರಾಯಪುರ ಅವರು ರಂಗಾಭಿನಂದನ ಅಭಿನಂದನಾ ಗ್ರಂಥ ಬಿಡುಗಡೆ ಮಾಡುವರು. ಮಾಜಿ ಶಾಸಕ ಎಂ. ಶ್ರೀನಿವಾಸ್, ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಅವರು ಪ್ರೊ. ಜಯಪ್ರಕಾಶಗೌಡ ಹಾಗೂ ಮಂಜುಳಾ ಜಯಪ್ರಕಾಶಗೌಡ ಅವರನ್ನು ಅಭಿನಂದಿಸುವರು. ವಿಶ್ರಾಂತ ಕುಲಪತಿ ಡಾ. ಪದ್ಮಾಶೇಖರ್ ಅವರು ಅಭಿನಂದನಾ ನುಡಿಯನ್ನಾಡುವರು. ವಿಶಾಂತ ಪ್ರಾಂಶುಪಾಲ ಡಾ. ಮ. ರಾಮಕೃಷ್ಣ ನಾಥಪಂಥ ಸಂಪುಟ ಮಾಲಿಕೆ ಕುರಿತು ಮಾತನಾಡುವರು. ಶಾಸಕ ನರೇಂದ್ರಸ್ವಾಮಿ ಅವರು ನಾಥಪಂಥ ಸಂಪುಟ-1 ಬಿಡುಗಡೆ ಮಾಡುವರು. ಕೃತಿಯ ಲೇಖಕ ಡಾ. ಎಚ್.ಜಿ. ಶ್ರೀಧರ್, ಶಾಸಕ ಪಿ. ರವಿಕುಮಾರ್ ಗಣಿಗ ಅವರು ಸಂಪಾದಕರನ್ನು ಗೌರವಿಸುವರು ಎಂದು ಹೇಳಿದರು.

ಮಾಜಿ ಸಚಿವ ಎಂ.ಎಸ್. ಆತ್ಮಾನಂದ, ಶಾಸಕರಾದ ಮರಿತಿಬ್ಬೇಗೌಡ, ಮಧು ಜಿ.ಮಾದೇಗೌಡ, ದಿನೇಶ್ ಗೂಳೀಗೌಡ, ಜಡಿಲ್ಲಾಧಿಕಾರಿ ಡಾ. ಕುಮಾರ್, ಜಿ.ಪಂ. ಸಿಇಓ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಯತೀಶ್, ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್. ನಾಗರಾಜು, ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ, ಪಿಇಟಿ ಅಧ್ಯಕ್ಷ ಕೆ.ಎಸ್. ವಿಜಯ್ ಆನಂದ್, ಎಸ್‌ಬಿಇಟಿ ಕಾರ‍್ಯದರ್ಶಿ ಮೀರಾ ಶಿವಲಿಂಗಯ್ಯ, ವಿಶ್ರಾಂತ ಪ್ರಾಂಶುಪಾಲ ಪ್ರೊ. ಜಿ.ಟಿ. ವೀರಪ್ಪ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಮಾಜಿ ಶಾಸಕ ಎಂ. ಶ್ರೀನಿವಾಸ್, ಸದಸ್ಯರಾದ ಎಸ್.ಬಿ. ಶಂಕರೇಗೌಡ, ಮಂಜುಳಾ, ನಾಗಪ್ಪ  ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!