Thursday, September 19, 2024

ಪ್ರಾಯೋಗಿಕ ಆವೃತ್ತಿ

ಭಗವಾನ್ ವಿರುದ್ದ ಮಡಿಕೆ ಒಡೆದು ವಿನೂತನ ಪ್ರತಿಭಟನೆ

ಒಕ್ಕಲಿಗ ಸಮುದಾಯದ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿರುವ ಪ್ರೊ.ಭಗವಾನ್ ವಿರುದ್ದ ಭಾರತೀನಗರದಲ್ಲಿ ಒಕ್ಕಲಿಗರ ಪ್ರಗತಿಪರ ಸಂಘಟನೆಯ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿದರು.

ಮದ್ದೂರು ತಾಲ್ಲೂಕಿನ ಭಾರತೀನಗರದ ಹಲಗೂರು ವೃತ್ತದಲ್ಲಿ ನೂರಾರು ಒಕ್ಕಲಿಗ ಮುಖಂಡರು ಜಮಾಯಿಸಿ ಪ್ರೊ.ಭಗವಾನ್ ಅವರ ವಿರುದ್ದ ಧಿಕ್ಕಾರ ಕೂಗಿ ಮಡಿಕೆ ಹೊಡೆಯುವ ಮೂಲಕ ಅವರ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ ಮಾತನಾಡಿ, ಒಕ್ಕಲಿಗರ ಸಮುದಾಯವನ್ನು ಅವಹೇಳನಕಾರಿಯಾಗಿ ಮಾತನಾಡಿರುವ ಕೆ.ಎಸ್.ಭಗವಾನ್ ಅವರಿಗೆ ನೀಡಲಾಗಿರುವ ಭದ್ರತೆಯನ್ನು ಸಕರ್ಾರ ವಾಪಸ್ ಪಡೆಯಬೇಕು. ಕೂಡಲೇ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.

ಸಮುದಾಯಗಳನ್ನು ಒಡೆಯುವಂತಹ ಹೇಳಿಕೆಗಳನ್ನು ನೀಡುವ ಪ್ರೊ.ಭಗವಾನ್ ಅವರಿಗೆ ಬುದ್ದಿ ಭ್ರಮೆಣೆಯಾಗಿದೆ. ಅವರ ತಂದೆ-ತಾಯಿಗಳು ಭಗವಾನ್ ಎಂದು ನಾಮಕರಣ ಮಾಡಿರುವುದು ದುರದೃಷ್ಠಕರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಕ್ಕಲಿಗ ಮುಖಂಡ ತೊರೆಚಾಕನಹಳ್ಳಿ ಶಂಕರೇಗೌಡ ಮಾತನಾಡಿ, ಸಾಹಿತಿ ಭಗವಾನ್ ವಿರುದ್ದ ಪ್ರಕರಣ ದಾಖಲಿಸಿಕೊಂಡು ಗಡಿಪಾರುಮಾಡುವಂತೆ ಒತ್ತಾಯಿಸಿ ಸಮುದಾಯದ ವಿರುದ್ದ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಭಗವಾನ್ ಕ್ರಮವನ್ನು ಖಂಡಿಸಿದರು. ಈ ವೇಳೆ ಭಗವಾನ್ ಭಾವಚಿತ್ರಕ್ಕೆ ಬೆಂಕಿ ಹಾಕಿ ಗ್ರಾ.ಪಂ ಸದಸ್ಯ ಸಿದ್ದರಾಜು ಮಡಿಕೆ ಹೊಡೆದು ವಿನೂತನವಾಗಿ ಪ್ರತಿಭಟನೆ ಮಾಡಿದರು.

ಅರ್ಧ ಗಂಟೆಗೂ ಹೆಚ್ಚುಕಾಲ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ವಾಹನಗಳು ರಸ್ತೆಯುದ್ದಕ್ಕೂ ಜಖಂಗೊಂಡಿದ್ದವು. ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಾಕಾರರಿಂದ ರಸ್ತೆಸಂಚಾರನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಪ್ರತಿಭಟನೆಯಲ್ಲಿ ರೈತಸಂಘದ ಮುಖಂಡ ರಾಮಲಿಂಗೇಗೌಡ, ಪೂಜೂರಿ ವೆಂಕಟೇಗೌಡ, ವಿಶ್ವ, ವೆಂಕಟೇಶ್, ಸುರೇಶ್, ವಿನು, ಸಿದ್ದರಾಮೇಗೌಡ, ರಘು, ರಾಜು, ಶ್ರೀನಿವಾಸ್, ಗ್ರಾ.ಪಂ ಸದಸ್ಯರಾದ ಮಿಥುನ್, ವೆಂಕಟೇಶ್, ಸುನೀಲ್, ಬಸವರಾಜು, ಕಾಳೇಗೌಡ, ಸಂತೋಷ ಸೇರಿದಂತೆ ನೂರಾರು ಒಕ್ಕಲಿಗ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!