Saturday, May 18, 2024

ಪ್ರಾಯೋಗಿಕ ಆವೃತ್ತಿ

ಕೆ.ಎಂ.ದೊಡ್ಡಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪಿಸಲು ಮನವಿ

ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಡಯಾಲಿಸಿಸ್ ಕೇಂದ್ರ ಸ್ಥಾಪನೆ ಮಾಡುವಂತೆ ಭಾರತೀನಗರ ರೋಟರಿ ಸಂಸ್ಥೆ ಶಾಸಕ ಮಧುಜಿಮಾದೇಗೌಡ ಅವರ ನೇತೃತ್ವದಲ್ಲಿ ಡಿಎಚ್ಓ ಡಾ.ಮೋಹನ ಅವರಿಗೆ ಮನವಿ ಸಲ್ಲಿಸಿದರು.

ಭಾರತೀನಗರ ರೋಟರಿ ಮತ್ತು ರೋಟರಿ ಬೆಂಗಳೂರು ಸಂಸ್ಥೆಗಳು ಜೊತೆಗೂಡಿ ಡಯಾಲಿಸಿಸ್ ಯಂತ್ರ ಮತ್ತು ಅದರ ಉಪಕರಣಗಳನ್ನು ಕೆ.ಎಂ.ದೊಡ್ಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೀಡಲು ತೀರ್ಮಾನಿಸಿದ್ದು, ತಮ್ಮ ಇಲಾಖೆಯಿಂದ ಸಿಬ್ಬಂದಿ ನಿಯೋಜಿಸಿ ಕೇಂದ್ರ ನಿರ್ವಹಣೆ ಮಾಡುವ ಬಗ್ಗೆ ಕ್ರಮಕ್ಕೆ ಮುಂದಾಗಬೇಕೆಂದು ಮಧು ಜಿ ಮಾದೇಗೌಡ ಅವರು ಡಿಎಚ್ಓ ಅವರಿಗೆ ಮನವಿ ಮಾಡಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ಮಧು ಜಿ ಮಾದೇಗೌಡ ಮಾತನಾಡಿ, ಕೆ.ಎಂ.ದೊಡ್ಡಿ ಪಟ್ಟಣ ಕೇಂದ್ರಕ್ಕಿಂತಲೂ ಬೆಳೆದು ನಿಂತಿದೆ. ಈ ಆಸ್ಪತ್ರೆಗೆ ಸುತ್ತಮುತ್ತಲಿನ ಹಳ್ಳಿಯ ನೂರಾರು ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದಾರೆ. ಪ್ರಸ್ತುತ ಕಿಡ್ನಿ ವೈಫಲ್ಯದಿಂದಾಗಿ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು ಡಯಾಲಿಸಿಸ್ ವ್ಯವಸ್ಥೆ ಇಲ್ಲದೆ ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ನಗರ ಪ್ರದೇಶಗಳಿಗೆ ಹೋಗುವ ಪರಿಸ್ಥಿತಿ ಬಂದೊದಗಿದೆ. ರೋಟರಿ ಸಂಸ್ಥೆಯವರು ನೀಡುತ್ತಿರುವ ಡಯಾಲಿಸಿಸ್ ಯಂತ್ರ ಮತ್ತು ಅದರ ಉಪಕರಣಗಳನ್ನು ಬಳಸಿಕೊಂಡು ಕೂಡಲೇ ರೋಗಿಗಳಿಗೆ ಅನುಕೂಲ ಕಲ್ಪಿಸಬೇಕೆಂದು ಕೋರಿದರು.

ಮನವಿ ಸ್ವೀಕರಿಸಿದ ಮಾತನಾಡಿ ಡಿಎಚ್ಓ ಡಾ.ಮೋಹನ್, ರೋಟರಿ ಸಂಸ್ಥೆ ಡಯಾಲಿಸಿಸ್ ಯಂತ್ರ ನೀಡುವುದರ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಇದೇ ವೇಳೆ ಭಾರತೀ ಹೆಲ್ತ್ ಸೈನ್ಸ್ ನಿರ್ದೇಶಕ ಡಾ.ತಮಿಜ್ಮಣಿ, ಭಾರತೀನಗರ ರೋಟರಿ ಅಧ್ಯಕ್ಷ ನಂದೀಶ್, ಕಾರ್ಕಹಳ್ಳಿ ಸ್ವರೂಪ್ಚಂದ್ರ, ಸಿದ್ದೇಗೌಡ ಸೇರಿದಂತೆ ಹಲವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!