Thursday, September 19, 2024

ಪ್ರಾಯೋಗಿಕ ಆವೃತ್ತಿ

ರಂಜಾನ್ ಪ್ರಯುಕ್ತ ಈದ್ ಕಿಟ್ ವಿತರಿಸಿದ ಪಿಎಫ್ಐ ಸಂಘಟನೆ

ಬಡ ಮುಸಲ್ಮಾನರ ಕುಟುಂಬಗಳು ಸಂತೋಷದಿಂದ ರಂಜಾನ್ ಹಬ್ಬ ಆಚರಿಸಲು ಈದ್‌ ಕಿಟ್‌ಗಳನ್ನು ವಿತರಿಸುತ್ತಿದ್ದೇವೆ ಎಂದು ಪಿಎಫ್‌ಐ ಸಂಘಟನೆಯ ಮುಖಂಡ ನೂರುಲ್ಲಾ ಷರೀಫ್ ಹೇಳಿದರು.

ಮಂಡ್ಯ ನಗರದ ಗುತ್ತಲು ಬಡಾವಣೆಯಲ್ಲಿರುವ ಪಿಎಫ್‌ಐ ಸಂಘಟನೆಯ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಿದ್ದ ಈದ್‌ ಕಿಟ್ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದಾನ-ಧರ್ಮಗಳ ಪ್ರತೀಕವಾಗಿರುವ ರಂಜಾನ್ ಹಬ್ಬದ ವಿಶೇಷವಾಗಿ ಪಿಎಫ್‌ಐನಿಂದ ಪ್ರತಿ ವರ್ಷದಂತೆ ೧೦೦ ಬಡ ಮುಸ್ಲಿಂ ಕುಟುಂಬಗಳಿಗೆ ಅಕ್ಕಿ, ಸಕ್ಕರೆ, ಎಣ್ಣೆ, ಶ್ಯಾವಿಗೆ ಹಾಗೂ ಉಪ್ಪಿನ ಪ್ಯಾಕೆಟ್‌ಗಳಿರುವ ಈದ್ ಕಿಟ್ ವಿತರಿಸಲಾಗುತ್ತಿದೆ ಎಂದರು.

ಬಡ ಜನರಿಗೆ ಕಿಟ್ ವಿತರಿಸುತ್ತಿರುವುದು ಅರ್ಥಪೂರ್ಣವಾದ ಕಾರ್ಯವಾಗಿದೆ.ರಂಜಾನ್ ಹಬ್ಬದ ಮಹತ್ವವನ್ನು ಇದು ಬಿಂಬಿಸುತ್ತದೆ ಎಂದರು.

ಭಾರತದೇಶದಲ್ಲಿ ಹಿಂದೂ-ಮುಸ್ಲಿಂ ಎಂಬ ಭೇದ-ಭಾವವಿಲ್ಲದೇ ಎಲ್ಲರು ಸಹೋದರರಂತೆ ಬಾಳಿ ಇತರರಿಗೆ ಮಾದರಿಯಾಗಬೇಕಿದೆ ಎಂದು ತಿಳಿಸಿದರು. ಹಲವು ಸಂಘ ಸಂಸ್ಥೆಗಳು ಮುಂದೆ ಬಂದು ಸಮಾಜಮುಖಿ ಕೆಲಸ ಮಾಡುತ್ತಿರುವುದು ಸಂತಸದ ವಿಚಾರ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಸಯ್ಯದ್ ಇರ್ಫಾನ್, ಎಸ್ ಡಿಪಿಐ ತಾಲ್ಲೂ ಅಧ್ಯಕ್ಷ ಸಾದತ್, ನಾಸಿರ್‌ಪಾಷ್, ಇಸ್ಮಾಯಿಲ್, ಫಾಜಿಲ್ ಮತ್ತಿತರರಿದ್ದರು.

ಇದನ್ನು ಓದಿ: ಬಸವಣ್ಣನ ಪುತ್ಥಳಿ ಸ್ಥಾಪನೆಗೆ ಒತ್ತಾಯ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!