Thursday, November 19, 2026

ಪ್ರಾಯೋಗಿಕ ಆವೃತ್ತಿ

ರಾಜ್ಯದ ಮಹಿಳೆಯರ ಧ್ವನಿಯಾದ ಡಾ.ನಾಗಲಕ್ಷ್ಮಿ ಚೌಧರಿ ; ರವಿಕುಮಾರ್ ಗಣಿಗ

ರಾಜ್ಯದ ನೊಂದ ಮಹಿಳೆಯರ ಧ್ವನಿಯಾಗಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮಿ ಚೌಧರಿ ಅವರು ನಾಡಿನೆಲ್ಲಡೆ ಸಂಚರಿಸುತ್ತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆಂದು ಮಂಡ್ಯ ಶಾಸಕ ರವಿಕುಮಾರ್ ಗಣಿಗ ಬಣ್ಣಿಸಿದರು.

ಭಾರತ ಸೇವಾದಳ, ಭಾರತ ಚುಟುಕು ಸಾಹಿತ್ಯ ಪರಿಷತ್ತು ಇವರ ವತಿಯಿಂದ ಮಂಡ್ಯನಗರದ ಬಾಲಭವನದ ಆವರಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮ ಹಾಗೂ ಹಾಸ್ಯ ಸಂಜೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಳೆದ 50 ವರ್ಷಗಳಿಂದ ರಾಜ್ಯದಲ್ಲಿ ಮಹಿಳಾ ಆಯೋಗ ಇತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ಚೌಧರಿಯವರು ಬಂದ ನಂತರ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯದ ಉದ್ದಗಲಕ್ಕೂ ಓಡಾಡಿಗೆ ಮಹಿಳೆಯರ ನೋವಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ನೊಂದ ಮಹಿಳೆಯರು ಎಷ್ಟೊತ್ತಿಗೆ ಬೇಕಾದ್ರೂ ಸಂಪರ್ಕಿಸಬಹುದಾಗಿ. ಸಿಎಂ ಸಿದ್ದರಾಮಯ್ಯ ಅವರು ನಾಗಲಕ್ಷ್ಮಿ ಅವರನ್ನು ಮಹಿಳಾ ಆಯೋಗಕ್ಕೆ ಆಯ್ಕೆ ಮಾಡುವ ಮೂಲಕ ಉತ್ತಮ ಕೆಲಸ ಮಾಡಿದ್ದಾರೆಂದರು.

19 ವಾರ್ಡ್ ನಲ್ಲಿ ಉತ್ತಮ ಕೆಲಸ ನಡಿತಿದೆ, ಪ್ರತಿ ವಾರ ಮಂಡ್ಯದ ಕಾವೇರಿ ಉದ್ಯಾನವನ ಹಾಗೂ ಬಾಲಭವನ ಉದ್ಯಾನವನದಲ್ಲಿ ಕಾರ್ಯಕ್ರಮ ನಡೆಸುವ ಮೂಲಕ ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಮಾಡಲಾಗುವುದು ಎಂದರು.

ಉದ್ಯಾನವನ ಅಭಿವೃದ್ದಿಗೆ 20 ಲಕ್ಷ ರೂ.

ಬಾಲಭವನದ ಉದ್ಯಾನವನ ಅಭಿವೃದ್ದಿಗೆ 20 ಲಕ್ಷ ರೂ.ಗಳ ಅನುದಾನ ನೀಡಲಾಗುವುದು, ಮಂಡ್ಯನಗರ ಅಭಿವೃದ್ದಿಗೆ ಈಗಾಗಲೇ 100 ಕೋಟಿ ರೂ. ಕೆಲಸ ಮುಗಿಯುವ ಹಂತಕ್ಕೆ ಬಂದಿದೆ. 33 ಕೋಟಿ ರೂ. ವೆಚ್ಚದಲ್ಲಿ ಹೆದ್ದಾರಿಯನ್ನ ಅಭಿವೃದ್ದಿ ಮಾಡಲಾಗುತ್ತಿದೆ. ಹೊಸಹಳ್ಳಿ ರಸ್ತೆ, ನೂರಡಿ ರಸ್ತೆ ಸೇರಿದಂತೆ ಇನ್ನೂ ಮುಂದಾದ ರಸ್ತೆಗಳನ್ನು ಅಭಿವೃದ್ದಿ ಮಾಡುತ್ತಿದ್ದೇವೆ ಎಂದರು.

ಭಾರತ ಸೇವಾದಳದ ಮಂಡ್ಯ ಘಟಕದ ಜಿಲ್ಲಾಧ್ಯಕ್ಷ ಬಿ.ಸಿ. ಶಿವಾನಂದರವರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ರೋಟರಿ ಅಧ್ಯಕ್ಷ ರವೀಂದ್ರ ಕೆಂಪಯ್ಯ, ನಿವೃತ್ತ ಪ್ರಾಂಶುಪಾಲರಾದ ಜಿ.ವಿ.ಕುಮಾರ್, ಸಾಹಿತಿ ಕೃಷ್ಣ ಸ್ವರ್ಣಸಂದ್ರ, ಪತ್ರಕರ್ತ ಕಬ್ಬನಹಳ್ಳಿ ಕೆ. ಶಂಭು, ಸಮಾಜ ಸೇವಕರಾದ ಹಾಲಹಳ್ಳಿ ಮಹೇಶ್, ಧಾರ್ಮಿಕ ಮುಖಂಡರಾದ ಚಿಕ್ಕಸಿದ್ದಪ್ಪ, ಪೇಂಟನಿಯಲ್ ಲಯನ್ಸ್ ಕ್ಲಬ್ ನ ಸ್ಥಾಪಕ ಅಧ್ಯಕ್ಷರಾದ ಪ್ರತಿಮಾ ರಮೇಶ್, ಸೇವಾದಳ ಶಿಕ್ಷಕಿ ಉಷಾರಾಣಿ ಅವರನ್ನು ಮಂಡ್ಯ ಶಾಸಕ ರವಿಕುಮಾರ್ ಗಣಿಗ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ  ಮನ್ಮುಲ್ ಅಧ್ಯಕ್ಷ ಉಮ್ಮಡಹಳ್ಳಿ ಶಿವಪ್ಪ, ಚಲನಚಿತ್ರ ನಟ ಶಂಕರ್ ಅಶ್ವಥ್, ಕಾಂಗ್ರೆಸ್ ಪಕ್ಷದ ಮುಖಂಡ ಹೆಚ್.ಕೆ. ರುದ್ರಪ್ಪ, ಪಿ.ಎಲ್.ಡಿ ಬ್ಯಾಂಕಿನ ಅಧ್ಯಕ್ಷ ಬೇಲೂರು ಸೋಮಶೇಖರ್, ಭಾರತ ಸೇವಾದಳದ ಖಜಾಂಚಿಗಳಾದ ಎಸ್.ಕೆ.ಶಿವಪ್ರಕಾಶ್ ಬಾಬು, ನಗರಸಭಾ ಸದಸ್ಯೆ ಮಂಜುಳಾ ಉದಯ ಶಂಕರ್, ಎಂ.ಎನ್. ಶ್ರೀಧರ್, ಸಜ್ಜನ್ ಕೊಠಾರಿ ಉಪಸ್ಥಿತರಿದ್ದರು.

ಹಾಸ್ಯ ಕಲಾವಿದರಾದ ಮೈಸೂರು ಆನಂದ್, ಮಿಮಿಕ್ರಿ ಮೈಸೂರು ರಮೇಶ್ ಬಾಬು, ಮಂಡ್ಯ ಸತ್ಯ, ಜನಾರ್ಧನ ಕೊಂಡ್ಲಿ ಹಾಸ್ಯ ಸಂಜೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ