Thursday, September 19, 2024

ಪ್ರಾಯೋಗಿಕ ಆವೃತ್ತಿ

ರೋಹಿಣಿ ಸಿಂಧೂರಿ – ಡಿ. ರೂಪಾ ವಿವಾದ : ಮಹಿಳಾ ಅಧಿಕಾರಿಗಳನ್ನು ಬಂಧಿಸಿಯೇ ಇಡಲು ಬಯಸುವವರ ಹುನ್ನಾರವೇ ?

✍️ ಹರ್ಷ ಕುಮಾರ್ ಕುಗ್ವೆ, ಸಂಪಾದಕರು, ಪೀಪಲ್ ಟಿ.ವಿ.


  • ಒಂದೇ ಕೈಯಿಂದ ಚಪ್ಪಾಳೆ ಸಾಧ್ಯವೆ? ಈ ಐಪಿಎಸ್ ಅಧಿಕಾರಿ ಡಿ.ರೂಪಾ ಯಾಕೆ ಮತ್ತೊಂದು ಕೈ ಬಗ್ಗೆ ಉಸಿರು ಬಿಡುತ್ತಿಲ್ಲ?
  • ಅವರಿಗೆ ಯಾವ ಅಧಿಕಾರಿಯಿಂದ ಪೋಟೋ ಸಿಕ್ಕಿದ್ದು ಎಂಬ ಮಾಹಿತಿಯನ್ನೂ ಕೊಡಬೇಕಿತ್ತಲ್ಲವೆ?
  • ಸತ್ಯಾಸತ್ಯತೆಗಳ ಬಗ್ಗೆ ತೀರ್ಮಾನ ಮಾಡಬೇಕಾದವರು ಮೀಡಿಯಾಗಳೂ ಅಲ್ಲ ಸಾರ್ವಜನಿಕರೂ ಅಲ್ಲ

ರೋಹಿಣಿ ಸಿಂಧೂರಿ ದುರಹಂಕಾರಿ ಎಂಬ ಮಾತು ಕೇಳಿ ಬರುತ್ತಿದೆ. ಇದ್ದರೂ ಇರಬಹುದು. ಒಬ್ಬ ಅಧಿಕಾರಿ ತಾನು ಪಬ್ಲಿಕ್ ಸರ್ವೆಂಟ್ ಆಗಿ ಜನರ ಸೇವೆ ಮಾಡುವ ಎತ್ತಿನಂತೆ ಇರಬೇಕು. ಇದು ಎಲ್ಲಾ ಅಧಿಕಾರಿಗಳಿಗೂ ಮತ್ತು ರಾಜಕಾರಣಿಗಳಿಗೂ ಅನ್ವಯಿಸುತ್ತದೆ.

ರಾಜ್ಯದಲ್ಲಿ ಕೆಲವು ಪುರುಷ ಅಧಿಕಾರಿಗಳಿದ್ದಾರೆ. ಅವರ ದುರಹಂಕಾರ, ಭ್ರಷ್ಟಾಚಾರ ನೀವು ನೋಡಿದರೆ ರೋಹಿಣಿ ಸಿಂಧೂರಿ ಯಾವ ಲೆಕ್ಕವು ಅಲ್ಲ. ಪಂಕಜ್ ಕುಮಾರ್ ಪಾಂಡೆ ಎನ್ನುವ ಒಬ್ಬ ಐಎಎಸ್ ಅಧಿಕಾರಿ, ಮುರುಗನ್ ಎಂಬ ಮತ್ತೊಬ್ಬ ಅಧಿಕಾರಿಗಳ ದುರಹಂಕಾರದ ಮಟ್ಟ ನಾನೇ ನೋಡಿದ್ದೇ‌ನೆ. ಈ ಪಂಕಜ್ ಪಾಂಡೆ ಈಗ ಭ್ರಷ್ಟಾತಿಭ್ರಷ್ಟ ಎಂದೂ ಕೇಳಿದ್ದೇನೆ. ಆದರೆ ಯಾವತ್ತಾದರೂ ಸಾರ್ವಜನಿಕ ವೇದಿಕೆಗಳಲ್ಲಿ ಈ ಪುರುಷ  ಅಧಿಕಾರಿಗಳ ದುರಹಂಕಾರದ ಬಗ್ಗೆ ಚರ್ಚೆ ಆದದ್ದಿದೆಯೆ? ಆಗದಿದ್ದರೆ ಯಾಕೆ ಆಗಲಿಲ್ಲ? ಮೀಡಿಯಾಗಳು ಅಂತ ಅಧಿಕಾರಿಗಳಿಗೆ ರಿಯಾಯಿತಿ ಕೊಟ್ಟಿರುವುದು ಯಾಕೆ? ಪದೇ ಪದೇ ರೋಹಿಣಿ ಸಿಂದೂರಿಯೇ ಯಾಕೆ ಟಾರ್ಗೆಟ್ ಆಗಬೇಕು?

ಒಂದು ವಿಡಿಯೋದಲ್ಲಿ ರೋಹಿಣಿ ಸಿಂಧೂರಿಯ attitude ನೋಡಿ ನನಗೂ ಕೋಪ ಬಂದಿತ್ತು. ಇಂತವರು ಇನ್ನೆಂಥ ಜನರ ಸೇವೆ ಮಾಡಲು ಸಾಧ್ಯ ಅನಿಸಿತ್ತು… ಆದರೂ ನಮ್ಮ ಸಮಾಜ ವ್ಯವಸ್ಥೆ ತಪ್ಪು ಮಾಡಿದ ಹೆಣ್ಣಿನ ಮೇಲೆ ಹರಿಹಾಯುವ ರೀತಿ ಒಬ್ಬ ಗಂಡಿನ ಮೇಲೆ ಹಾಯುವುದಿಲ್ಲ. ಈ disparity ಬಗ್ಗೆ ಮಾತ್ರ ನನ್ನ ತಕರಾರು. ‌

ಇನ್ನು ರೋಹಿಣಿ ಸಿಂಧೂರಿ ಮನೆಮುರುಕಿ ಎಂಬಂತೆ ಐಪಿಎಸ್ ಅಧಿಕಾರಿ ರೂಪ ಆರೋಪಿಸುತ್ತಾ ಆಕೆಯ ವೈಯಕ್ತಿಕ ಫೋಟೋಗಳನ್ನು ಸೋಷಲ್ ಮೀಡಿಯಾ ಮತ್ತು ಮೀಡಿಯಾಗಳ ಮೂಲಕ ಹಂಚಿಕೊಂಡಿದ್ದಾರೆ. ಇದರ ಸತ್ಯಾಸತ್ಯತೆಗಳ ಬಗ್ಗೆ ತೀರ್ಮಾನ ಕೊಡಬೇಕಾಗದವರು ಮೀಡಿಯಾಗಳೂ ಅಲ್ಲ ಸಾರ್ವಜನಿಕರೂ ಅಲ್ಲ. ಆದರೂ ಯಾಕೆ ಇದನ್ನು ಸಾರ್ವಜನಿಕಗೊಳಿಸಲಾಗುತ್ತಿದೆ?

ಒಂದು ವೇಳೆ ಈ ಆರೋಪ ನಿಜ ಎಂದುಕೊಂಡರೂ ಸಿಂಧೂರಿ ಒಬ್ಬರೇ ತಪಿತಸ್ಥಳಾಗಿರಲು ಸಾಧ್ಯವೇ ? ಒಂದೇ ಕೈಯಿಂದ ಚಪ್ಪಾಳೆ ಸಾಧ್ಯವೆ ? ಈ ರೂಪಾ ಯಾಕೆ ಮತ್ತೊಂದು ಕೈ ಬಗ್ಗೆ ಉಸಿರು ಬಿಡುತ್ತಿಲ್ಲ? ಇಂತಹ ವಿಷಯಗಳು ಬಂದಾಗ ಮತ್ತೆ ಹೆಣ್ಣನ್ನೇ ತಪಿತಸ್ಥಳಾಗಿ ಮಾಡುವ ಗಂಡಾಳ್ವಿಕೆಯ ಮನಸ್ಥಿಯನ್ನೇ ಈ ರೂಪಾ ತೋರುತ್ತಿಲ್ಲವೆ? ಅವರಿಗೆ ಯಾವ ಅಧಿಕಾರಿಯಿಂದ ಪೋಟೋ ಸಿಕ್ಕಿದ್ದು ಎಂಬ ಮಾಹಿತಿಯನ್ನೂ ಕೊಡಬೇಕಿತ್ತಲ್ಲವೆ? ಜವಾಬ್ದಾರಿ ಸ್ಥಾನದಲ್ಲಿದ್ದವರು ಮಾದರಿಯಾಗಿ ನಡೆದುಕೊಳ್ಳದಿದ್ದರೆ ಸಮಾಜಕ್ಕೆ ಕೆಟ್ಟ ಸಂದೇಶ ಹೋಗುತ್ತದೆ, ಐಎಎಸ್, ಐಪಿಎಸ್ ನಂತರ ಸ್ಥಾನಗಳ ಬಗ್ಗೆ ಜನರು ಬೇರೆಯೇ ರೀತಿ ಯೋಚಿಸಲು ತೊಡಗುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಗಂಡು ನೆಲೆಯಲ್ಲೇ ಪ್ರತಿಯೊಂದನ್ನೂ ಸ್ವೀಕರಿಸುವ ಸಮಾಜ ‘ನೋಡ್ರಿ ಹೆಂಗಸರು ಎಷ್ಟು ದೊಡ್ಡ ಅಧಿಕಾರಿಗಳಾದ್ರೂ ಇಷ್ಟೇ. ” ಅನ್ನುವ ಸ್ಟಿರಿಯೋಟೈಪ್ ಒಳಗೇ ಇಂತವನ್ನೂ ತರುತ್ತಾರೆ.

ಇಂತಹದೇ ಸಮಸ್ಯೆಗಳಿರುವ ಪುರುಷ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಸಮಾಜ ಸುಲಭವಾಗಿ ಸಹಿಸಿಕೊಂಡು ಮುಂದಕ್ಕೆ ಹೋಗುತ್ತದೆ. ಯಾವತ್ತೂ ಮಹಿಳೆಯರನ್ನು ಬಂಧಿಸಿಯೇ ಇಡಲು ಬಯಸುವವರು ಇಂತಹ ಸನ್ನಿವೇಶಗಳ ದುರುಪಯೋಗ ಪಡೆಯದೇ ಬಿಡುವುದಿಲ್ಲ D Roopa Moudgil ..ಮೇಡಂ…ಸ್ವಲ್ಪ ಮೆಚೂರ್ ಆಗಿ ವರ್ತಿಸಿ…

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!