Friday, September 20, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು | ಸಂಕ್ರಾಂತಿ- ಪೇಟೆ ಬೀದಿ ಆಲಂಕರಿಸಿದ ರಾಸುಗಳ ಪರಿಕರ

ಮಕರ ಸಂಕ್ರಾಂತಿ ಎಂದರೆ ಸುಗ್ಗಿಯ ಹಬ್ಬ ರೈತರು ತಮ್ಮ ರಾಸುಗಳನ್ನು ಸಿಂಗರಿಸಿ ಕಿಚ್ಚು ಹಾಯಿಸುವುದೇ ಪ್ರಧಾನ ಕಾರ್ಯಕ್ರಮ. ಉಳಿದಂತೆ ಎಳ್ಳು ಬೆಲ್ಲ ಬೀರಿ ಶುಭಕೋರುವ ದೇವಾಲಯಗಳ ಮತ್ತು ಜ್ಯೋತಿಯ ದರ್ಶನ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸೇರಿವೆ.

ಇಂತಹ ಸಂಕ್ರಾಂತಿಯ ಸಿದ್ದತೆಗಾಗಿ ವ್ಯಾಪಾರಿಗಳು ಭರ್ಜರಿ ಸಿದ್ದತೆಯೊಂದಿಗೆ ರಾಸುಗಳ ಪರಿಕರವನ್ನು ಪೇಟೆ ಬೀದಿಯಲ್ಲಿ ತಂದಿರಿಸಿದ್ದಾರೆ.

ಕೃಷಿ ಮತ್ತು ತತ್ಸಂಬಂಧಿತ ವಲಯ ನಷ್ಠದ ಬಾಬ್ತಾಗಿಹ ಕಾರಣ ಮತ್ತು ಜಾಗತೀಕರಣದ ಫಲವಾಗಿ ರಾಸುಗಳ ಅವಲಂಬನೆ ಅವುಗಳ ಲಾಲನೆ ಪಾಲನೆ ದುಭಾರಿಯಾಗಿದೆ ಎಂಬ ಕಾರಣದಿಂದ ಕಡಿಮೆಯಾಗಿದೆ.
ಪ್ರತಿಹಳ್ಳಿಯಲ್ಲಿ ನೂರಾರು ರಾಸುಗಳು ಇದ್ದ ಕಡೆ ರಾಸುಗಳ ಸಂಖ್ಯೆ ಬೆರಳೆಣಿಕೆಯಷ್ಠು ಇಳಿದಿದೆ.
ರಾಸುಗಳ ಸಂಖ್ಯೆ ಕಡಿಮೆಯಾದರು, ರೈತರುಗಳಿಗೆ ರಾಸುಗಳ ಬಗೆಗಿನ ಒಲುವು ಹಾಗೇಯೆ ಇದೆ.
ಅದೆ ಕಾರಣಕ್ಕೆ ಸಂಕ್ರಾತಿ ಬಂತೆಂದರೇ ಹೀಗೆ ಪೇಟೆಗಳು ರಾಸುಗಳು ಸಿಂಗಾರಕ್ಕಾಗಿ ಸಜ್ಜಾಗುತ್ತವೆ. ರಾಸುಗಳಿಗೆ ಬಣ್ಣ ಬಣ್ಣದ ಅಲಾಂಕಾರಿಕ‌ ಸಾಮಾಗ್ರಿಗಳು, ನೀಲಿ ಧವನ, ಪೀಪಿ, ಸಕ್ಕರೆ ಹಚ್ಚಿನಿಂದ ತಯಾರಿಸಿದ ಬಾತಾಸುಗಳು ಹೀಗೆ ಬಗೆ ಬಗೆಯ ಸಾಮಾಗ್ರಿ ಬಂದಿಳಿದಿವೆ.

ಇವುಗಳನ್ನು ಕಂಡು ಹಿರಿಯ ಕಿರಿಯ ಜನರೆಲ್ಲಾ ಕಣ್ಣರಳಿಸುತ್ತಿದ್ದಾರೆ. ಹಿರಿಯರಿಗಂತೂ ತಮ್ಮ ಕಾಲದ ಗತ ವೈಭವ ನೆನೆದು ಮೆಲಕು ಹಾಕುತ್ತಿದ್ದಾರೆ. ಯುವ ರೈತರು ತಮ್ಮಿಷ್ಠದ ರಾಸುಗಳನ್ನು ಎಲ್ಲಾರಿಗಿಂತ ಮಿಗಿಲಾಗಿ ಸಿಂಗರಿಸಿ ಖುಷಿ ಪಡಲು ಆಸೆ ಗಣ್ಣಿನಿಂದಲೆ‌ ರಾಸುಗಳ ಸಿಂಗಾರದ ಸಾಮಾಗ್ರಿಗಳನ್ನು ಖರೀದಿಸುತ್ತಿದ್ದಾರೆ.
ಒಟ್ಟಾರೆ ಮದ್ದೂರು ಪಟ್ಟಣ ಜೀವಕಳೆಯಿಂದ ಕಂಗೊಳಿಸುತ್ತಿದೆ. ಪೇಟೆಯ ತುಂಬಾ ಧವನದ ಘಮಲು ಹರಡಿದೆ. ಇದು ಎಲ್ಲಾ ಪೇಟೆಗಳ ಚಿತ್ರಣವು ಹೌದು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!