Thursday, September 19, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿ – ಆರೆಸ್ಸೆಸ್ ನಿಂದ ದೇಶದಲ್ಲಿ 80 : 20 ಪೊಲಿಟಿಕ್ಸ್ : ಶಶಿಕಾಂತ್ ಸೆಂಥಿಲ್

ದೇಶದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ಸಂಘಟನೆಗಳು ಮುಸಲ್ಮಾನರನ್ನು ವಿರೋಧಿಸುತ್ತಿರುವುದು ರಾಜಕೀಯ ಕಾರಣಕ್ಕಾಗಿಯೇ ಹೊರತು ಬೇರೆನೂ ಅಲ್ಲ, ದೇಶದಲ್ಲಿ ಶೇ.80ರಷ್ಟಿರುವ  ಹಿಂದೂಗಳನ್ನು ಶೇ.20 ರಷ್ಟಿರುವ ಮುಸಲ್ಮಾರ ವಿರುದ್ಧ ಎತ್ತಿಕಟ್ಟಿ ದೇಶದಲ್ಲಿ ಅಧಿಕಾರ ಹಿಡಿಯುವುದೇ ಅವರ ಕುತಂತ್ರವಾಗಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ವಾಗ್ದಾಳಿ ನಡೆಸಿದರು.

ಮಂಡ್ಯ ಜಿಲ್ಲಾ ಸಮಾನ ಮನಸ್ಕರ ವೇದಿಕೆ ವತಿಯಿಂದ ಭಾನುವಾರ ಶ್ರೀರಂಗಪಟ್ಟಣದಲ್ಲಿ ನಡೆದ ಸಾಮರಸ್ಯ ಸಹಬಾಳ್ವೆ ಸಂಗಮ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಸ್ಲಿಂರನ್ನು ಕೋಮುವಾದಿ ರಾಜಕಾರಣಿಗಳು ವಿರೋಧ ಮಾಡುತ್ತಿರುವುದು ರಾಜಕೀಯ ಕಾರಣಕ್ಕಾಗಿ. ಅಲ್ಪಸಂಖ್ಯಾತ ಸಮುದಾಯವನ್ನು ವಿರೋಧಿಸಿ ಬಹು ಸಂಖ್ಯಾತರ ಮತಗಳಿಸಿ, ಅಧಿಕಾರ ಹಿಡಿಯುವ ಸಲುವಾಗಿ ವಿರೋಧಿಸುತ್ತಿವೆ. ಇದರ ಭಾಗವೇ ಬಿಜೆಪಿ ಪಕ್ಷದ 80 20 ರಾಜಕಾರಣ ಎಂದು ವಿವರಿಸಿದರು.

ಸಮಾನತೆಯ ಸಮಾಜ ಬಯಸದವರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ, ಸ್ವಾತಂತ್ರ್ಯ ಚಳವಳಿಯಲ್ಲಿ ಸಮಾನತೆಯ ಹೋರಾಟವು ಸಹ ಇತ್ತು. ಹಾಗಾಗಿ ಸಮಾಜದಲ್ಲಿನ ಶ್ರೇಣಿಕೃತ, ಜಾತಿ ವ್ಯವಸ್ಥೆ ಪ್ರತಿಪಾದಿಸುತ್ತಿದ್ದ. ಮೇಲು-ಕೀಳು ಭಾವನೆ ಹೊಂದಿದ್ದವರು ಹೋರಾಟಕ್ಕೆ ಭಾಗಿಯಾಗಲಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ಕಿಡಿಕಾರಿದರು.

ದೇಶದಲ್ಲಿ ಸಮಾನತೆ ಸಮಾಜ ಒಪ್ಪಿ ಸಹೋದರತ್ವ, ಸೌಹಾರ್ದತೆ, ಪ್ರೀತಿಯ ಬದುಕಿನ ಚಿಂತನೆ ಮಾಡುವವರು ಒಂದೆಡೆಯಾದರೆ ಸಮಾನತೆಯನ್ನ ಒಪ್ಪದೆ ಅಸಮಾನತೆ ಇರುವ ಸಮಾಜ ಬಯಸುವವರು ಇದ್ದಾರೆ, ಇಂತಹ ಎರಡು ಚಿಂತನೆಗಳ ನಡುವೆ ಹೋರಾಟ ನಡೆಯುತ್ತಿದೆ, ಹಾಗಾಗಿ ಅಸಮಾನತೆ ಸೃಷ್ಟಿಸಲು ದ್ವೇಷ ಬಿತ್ತಲಾಗುತ್ತಿದೆ, ಇದರ ಬಗ್ಗೆ ಜನತೆ ಜಾಗೃತರಾಗಬೇಕಾಗಿದೆ ಎಂದರು.

ಭಾರತ ದೇಶ ವಿಭಿನ್ನತೆ, ವೈವಿಧ್ಯಮಯ, ಎಲ್ಲರೂ ಒಗ್ಗೂಡಿ ಬದುಕುತ್ತಿರುವ ರಾಷ್ಟ್ರ ಆಚರಣೆ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ, ಇದೇ ಭಾರತೀಯ ಸಂಸ್ಕೃತಿ ಆದರೆ ಇಂಥ ಸಂಸ್ಕೃತಿಯನ್ನು ಬುಡಮೇಲು ಮಾಡುವ ದುಷ್ಕೃತ್ಯ ನಡೆಯುತ್ತಿದೆ. ಇದನ್ನು ಪ್ರಶ್ನಿಸಬೇಕಾಗಿದೆ ಆದರೆ ಜನತೆ ಮೌನ ತಾಳಿದ್ದಾರೆ. ಮೌನವೇ ಶತ್ರುವಾಗಿ ಪರಿಣಮಿಸಲಿದೆ ಎಂದು ಎಚ್ಚರಿಸಿದರು.

ಸಮಾಜದಲ್ಲಿ ದ್ವೇಷ, ಅಸೂಯೆ, ಅಸಮಾನತೆ ಸೃಷ್ಟಿಸುವವರು ಕೆಲವೇ ಮಂದಿ ಮಾತ್ರ, ಶೇ 90ರಷ್ಟು ಜನತೆ ಒಳ್ಳೆಯವರಿದ್ದು ಅಂಥವರನ್ನು ಸಮಾನತೆಯ ಸಮಾಜದ ಕಡೆ ಕರೆ ತರಬಹುದಾಗಿದೆ. ದ್ವೇಷಕ್ಕೆ ಕತ್ತಿಗಳಾಗದೆ, ಕಡಲಾಗುವ ಮೂಲಕ ಪ್ರೀತಿಯಿಂದ ಸೈದ್ಧಾಂತಿಕ ದಾಳಿ ಎದುರಿಸಬೇಕಾಗಿದೆ. ಸಂವಿಧಾನದ ಮಹತ್ವವನ್ನು ಅರಿಯದೆ ನಿರ್ಲಕ್ಷತೆ ತೋರಿರುವುದು ಸರಿಯಲ್ಲ, ಸಂವಿಧಾನದ ಮೌಲ್ಯವನ್ನು ಅರಿಯಬೇಕು ಇದಕ್ಕಾಗಿ, ಸಂವಿಧಾನ ದಿನಾಚರಣೆಯನ್ನು ಆಚರಿಸಬೇಕು, ಎಲ್ಲವನ್ನು ಸಹಿಸಿಕೊಂಡು ಕುಳಿತುಕೊಂಡರೆ ಸಾಲದು, ಅನ್ಯಾಯವನ್ನು ಸಹಿಸಬೇಡಿ. ಧೈರ್ಯದಿಂದ ಪ್ರಶ್ನಿಸಿ ಎಂದು ಕರೆ ನೀಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!