Thursday, September 19, 2024

ಪ್ರಾಯೋಗಿಕ ಆವೃತ್ತಿ

ಸತೀಶ್ ಜಾರಕಿಹೊಳಿಗೆ ವಾಲ್ಮೀಕಿ ವೇದಿಕೆ ಬೆಂಬಲ

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಿಂದೂ ಪದದ ಮೂಲ ಅರ್ಥದ
ಬಗ್ಗೆ ನೀಡಿರುವ ಹೇಳಿಕೆ ಸತ್ಯವಾಗಿದ್ದು, ಅವರಿಗೆ ಬೆಂಬಲ ನೀಡುವುದಾಗಿ ವಾಲ್ಮಿಕಿ ಯುವ ವೇದಿಕೆ ತಿಳಿಸಿದೆ.

ಮಳವಳ್ಳಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸತೀಶ್ ಜಾರಕಿಹೊಳಿ ಅವರನ್ನು ಬೆಂಬಲಿಸಿ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಸತೀಶ್ ಜಾರಕಿಹೊಳಿ ಪೋಸ್ಟರ್ ಗಳನ್ನು ಪ್ರದರ್ಶಿಸಿದರು.

ಬುದ್ದ ಬಸವ ಅಂಬೇಡ್ಕರ್ ಅನುಯಾಯಿಯಾಗಿರುವ ಸತೀಶ್ ಜಾರಕಿಹೊಳಿ ಪರವಾಗಿ ಹಿಂದೂಳಿದ ಸಮುದಾಯ ನಿಲ್ಲುತ್ತದೆ ಎಂದು ಬುದ್ದ, ಬಸವ, ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ಸಿಕ್ರೇಶ್ ತಿಳಿಸಿದರು.

ವಾಲ್ಮಿಕಿ ಯುವ ವೇದಿಕೆ ಜಿಲ್ಲಾಧ್ಯಕ್ಷ ಜೀವನ್ ಮಾತನಾಡಿ, ಬುದ್ದ ಬಸವ ಅಂಬೇಡ್ಕರ್ ಅನುಯಾಯಿಯಾಗಿರುವ ಸತೀಶ್ ಜಾರಕಿಹೊಳಿ ಅವರು ದೇಶದಲ್ಲಿ ಅದರ್ಶರಾಗಿದ್ದಾರೆ. ಅವರ ಹೇಳಿಕೆ ಪರವಾಗಿ ಮಂಡ್ಯ ಜಿಲ್ಲೆಯ ಜನಪರ ಸಂಘಟನೆಗಳು ಮತ್ತು ಹಿಂದುಳಿದ ಸಮುದಾಯಗಳು ನಿಲ್ಲುತ್ತವೆ ಎಂದರು.

ಹಿಂದೂ ಪದದ ಬಗ್ಗೆ ಸತೀಶ್ ಜಾರಕಿಹೊಳಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಬಿಜೆಪಿ ನಾಯಕರು ಟೀಕಿಸುತ್ತಿರುವುದು ಖಂಡನೀಯ, ಡಾ. ಬಿ.ಆರ್. ಅಂಬೇಡ್ಕರ್ ಕೊಟ್ಟಿರುವ ಸಂವಿಧಾನದಲ್ಲಿದಡಿಯಲ್ಲಿ ಈ  ನೆಲದ ಕಾನೂನು ನಡೆಯುತ್ತಿದ್ದು, ನಾವು ಬೌದ್ದ ಧರ್ಮದ ಮೂಲ ನಿವಾಸಿಗಳಾಗಿದ್ದೇವೆಂದು ಹೇಳಿದರು.

ಸತೀಶ್ ಜಾರಕಿಹೊಳಿ ಅವರು ಹಿಂದೂ ಧರ್ಮದ ಅರ್ಥದ ಬಗ್ಗೆ ಮಾತನಾಡಿದ್ದಾರೆ, ಹಿಂದೂ
ಧರ್ಮದ ವಿರುದ್ದವಾಗಿ ಮಾತನಾಡಿಲ್ಲ, ಆದರೆ ಮನುವಾದಿಗಳು ಅವರ ಹೇಳಿಕೆಯನ್ನು ತಿರುಚಿ
ಅಪಮಾನ ಮಾಡಲು ಹೊರಟಿದ್ದಾರೆ, ಜಾರಕಿಹೊಳಿ ಪರವಾಗಿ ಹಿಂದೂಳಿದ ಸಮುದಾಯ ನಿಲ್ಲುತ್ತದೆ
ಎಂದರು.

ಈ ಸಂದರ್ಭದಲ್ಲಿ ಯುವ ಮುಖಂಡರಾದ ಬಸಂತ್, ಚಂದನ್, ಶಾಶಂಕ್, ಸಿದ್ದು, ತಾರಕ್, ಕಾರ್ತಿಕ್, ನಿತೀಶ್ ನಾಯಕ್, ಚಂದನ್, ಪವನ್, ಶೃಂಗರ್, ಭವನ್ ಸೇರಿದಂತೆ ಇತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!