Thursday, June 13, 2024

ಪ್ರಾಯೋಗಿಕ ಆವೃತ್ತಿ

ರೈತನ ಮಗ ಸ್ಟಾರ್ ಚಂದ್ರು ಗೆಲ್ಲಿಸಿ ಜಿಲ್ಲೆಯ ಸ್ವಾಭಿಮಾನ ಉಳಿಸಿ: ನರೇಂದ್ರಸ್ವಾಮಿ

ಮಂಡ್ಯ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ಇದೇ ಜಿಲ್ಲೆಯ ರೈತನ ಮಗ. ಹಳ್ಳಿಗಾಡಿನಲ್ಲಿ ಓದಿ, ನಗರದಲ್ಲಿ ಉದ್ಯಮಿಯಾಗಿ ಬೆಳೆದು ಈಗ ಹುಟ್ಟೂರಿನ ಋಣ ತೀರಿಸಲು ರಾಜಕೀಯಕ್ಕೆ ಬಂದಿದ್ದಾರೆ. ರೈತನ ಮಗನಾದ ಸ್ಟಾರ್ ಚಂದ್ರು ಅವರನ್ನು ಗೆಲ್ಲಿಸಿ ಜಿಲ್ಲೆಯ ಸ್ವಾಭಿಮಾನ ಉಳಿಸಬೇಕು ಎಂದು ಶಾಸಕ ನರೇಂದ್ರಸ್ವಾಮಿ ಅವರು ಮಯದಾರರಲ್ಲಿ ಮನವಿ ಮಾಡಿದರು.

ಮಳವಳ್ಳಿ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯತಿಗಳಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರ ಪರವಾಗಿ ಮತಯಾಚಿಸಿ ಮಾತನಾಡಿದರು.

ಮೋದಿ ಶ್ರೀಮಂತರ ಸಾಲಮನ್ನಾ ಮಾಡ್ತಾರೆ, ರೈತರ ಸಾಲಮನ್ನಾ ಮಾಡಲ್ಲ. ಆದರೆ ಅಧಿಕಾರಕ್ಕೆ್ರ ಬಂದಕೂಡಲೇ ನಮ್ಮ ಸರ್ಕಾರ ಮಾಡುತ್ತದೆ. ಉದ್ಯೋಗದ ಭದ್ರತೆ ನಾವು ಕೊಡುತ್ತೇವೆ. ಜನರ ಬದುಕನ್ನು ಹಸನು ಮಾಡೋ ಕೆಲಸವನ್ನು ಕಾಂಗ್ರೆಸ್ ಮಾಡಲಿದೆ ಎಂದರು.

ಐದು ವರ್ಷದ ಬಳಿಕ ಅಭಿವೃದ್ಧಿ ನಾಗಲೋಟ ಶುರುವಾಗಿದೆ. ಐದು ಗ್ಯಾರಂಟಿಗಳನ್ನು ನೀಡಿದ ಪರಿಣಾಮ ಬರಗಾಲದಲ್ಲಿ ಬಡವರಿಗೆ ಕಾಂಗ್ರೆಸ್ ನೆರವಾಗಿದೆ. ಗ್ಯಾರಂಟಿ ವಿರೋಧಿಸುವ ಬಿಜೆಪಿ, ಜೆಡಿಎಸ್ ಗೆ ಮತದಾರರು ಉತ್ತರಿಸಬೇಕು. ನನ್ನ ದುಡಿಮೆಗೆ ಶಕ್ತಿ ಕೊಟ್ಟು ಪ್ರಮಾಣಿಕ ವ್ಯಕ್ತಿ ಸ್ಟಾರ್ ಚಂದ್ರು ಅವರನ್ನು ಬೆಂಬಲಿಸಿ ಎಂದು ಹೇಳಿದರು.

ವಿಧಾನಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ ಅವರು ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ವಿವರಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!