Saturday, May 18, 2024

ಪ್ರಾಯೋಗಿಕ ಆವೃತ್ತಿ

ಡಿಡಿ ನ್ಯೂಸ್ ಲೋಗೊ ‘ಕೇಸರೀಕರಣ’: ವ್ಯಾಪಕ ಆಕ್ರೋಶ

ಕೇಂದ್ರ ಸರ್ಕಾರ ಅಧೀನದ ವಿದ್ಯುನ್ಮಾನ ಮಾಧ್ಯಮ ಸಂಸ್ಥೆ ಡಿಡಿ ನ್ಯೂಸ್‌ ಲೋಗೊ ಬಣ್ಣವನ್ನು ಕೇಸರಿ ಬಣ್ಣದೊಂದಿಗೆ ಬದಲಾಯಿಸಲಾಗಿದೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಣೆ ಹೊರಡಿಸಿರುವ ಡಿಡಿ ನ್ಯೂಸ್, ನಮ್ಮ ಮೌಲ್ಯಗಳು ಹಾಗೆ ಉಳಿದುಕೊಂಡಿದ್ದು,ಹೊಸ ಅವತಾರದೊಂದಿಗೆ ನಾವು ಈಗ ಲಭ್ಯವಿದ್ದೇವೆ. ಎಲ್ಲ ನೂತನ ಡಿಡಿ ನ್ಯೂಸ್‌ ಅನುಭವದೊಂದಿಗೆ ಹಿಂದೆಂದಿಗಿಂತಲೂ ಹೊಸ ಸುದ್ದಿಯ ಪಯಣಕ್ಕೆ ಸಿದ್ದರಾಗಿ ಎಂದು ತಿಳಿಸಿದೆ.

ಡಿಡಿ ನ್ಯೂಸ್‌ ಲೋಗೊಗೆ ಕೇಸರಿ ಬಣ್ಣ ಕೇಸರೀಕರಣಗೊಳಿಸಿರುವುದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ತನ್ನ ಕೇಸರಿ ಬಣ್ಣವನ್ನು ಸರ್ಕಾರಿ ಅಧೀನದ ಮಾಧ್ಯಮ ಸಂಸ್ಥೆಗೂ ಬಳಿದಿದೆ. ಕೇಸರಿ ಬಣ್ಣವು ಹಿಂದುತ್ವದೊಂದಿಗೆ ಸಂಬಂಧ ಹೊಂದದ್ದು, ಈ ಸಿದ್ದಾಂತವನ್ನು ಮಾಧ್ಯಮ ಸಂಸ್ಥೆಯ ಮೂಲಕ ಪ್ರತಿಪಾದಿಸಲು ಹೊರಟಿದೆ ಎಂದು ಹಲವರು ಟೀಕಿಸಿದ್ದಾರೆ.

ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಸಾರ ಭಾರತಿಯ ಮಾಜಿ ಸಿಇಒ ಜವಾಹರ್ ಸರ್ಕಾರ್, ರಾಷ್ಟ್ರೀಯ ಪ್ರಸಾರ ಮಾಧ್ಯಮ ದೂರದರ್ಶನದ ಐತಿಹಾಸಿಕವಾದ ಪ್ರಮುಖ ಲೋಗೊ ಕೇಸರೀಕರಣಗೊಂಡಿದೆ. ಪ್ರಸಾರ ಭಾರತಿಯ ಮಾಜಿ ಸಿಇಒ ಆಗಿ ಕೇಸರಿಕರಣದ ಎಚ್ಚರಿಕೆ ಹಾಗೂ ಅನುಭವದೊಂದಿಗೆ ಕಾರ್ಯಕ್ರಮವನ್ನು ನೋಡುತ್ತಿದ್ದೇನೆ. ಇದು ಇನ್ನು ಪ್ರಸಾರ ಭಾರತಿಯಲ್ಲ, ಇದು ಪ್ರಚಾರ ಭಾರತಿಯಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ದೂರದರ್ಶನವು ಪ್ರಸಾರ ಭಾರತಿಯ ಅಂಗಸಂಸ್ಥೆಯಾಗಿದ್ದು, ಆಲ್‌ ಇಂಡಿಯಾ ರೇಡಿಯೋ ಸೇರಿದಂತೆ ಹಲವು ಅಂಗಸಂಸ್ಥೆಗಳಿವೆ.

“>

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!