Friday, November 20, 2026

ಪ್ರಾಯೋಗಿಕ ಆವೃತ್ತಿ

ಕ್ಯಾಂಟರ್ ಗೆ ಸ್ಕೂಟರ್ ಡಿಕ್ಕಿ : ಮಹಿಳೆ ಸಾವು – ಇಬ್ಬರು ಗಂಭೀರ

ಆಸ್ಪತ್ರೆಯಲ್ಲಿದ್ದ ಸಂಬಂಧಿಯ ಆರೋಗ್ಯ ವಿಚಾರಿಸಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಪಂಚರ್ ಆಗಿ ನಿಂತಿದ್ದ ಕ್ಯಾಂಟರ್ ಗೆ ಹಿಂಬದಿಯಿಂದ ಹೋಂಡಾ ಆ್ಯಕ್ಟಿವಾ ಸ್ಕೂಟರ್ ಢಿಕ್ಕಿ ಹೊಡೆದು ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟು,ಆಕೆಯ ಮಗ ಹಾಗೂ ಮೊಮ್ಮಗಳು ಗಂಭೀರವಾಗಿ ಗಾಯಗೊಂಡ ದಾರುಣ ಘಟನೆ ಇಂದು ಸಂಜೆ ಮದ್ದೂರು ಬಳಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಚನ್ನಪಟ್ಟಣ ಮೂಲದ ವರಲಕ್ಷ್ಮಿ (60) ಸಾವಿಗೀಡಾದ ಮಹಿಳೆ.ಈಕೆಯ ಪುತ್ರ ಸುಧಾಕರ್, ಮೊಮ್ಮಗಳು ಗೌತಮಿ ಗಾಯಗೊಂಡಿದ್ದಾರೆ.

ಮಂಡ್ಯದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಬಂಧಿಯನ್ನು ನೋಡಲು ಬಂದಿದ್ದ ವರಲಕ್ಷ್ಮಿ, ಸುಧಾಕರ್ ಹಾಗೂ ಗೌತಮಿ ಅವರ ಆರೋಗ್ಯ ವಿಚಾರಿಸಿಕೊಂಡು ಚನ್ನಪಟ್ಟಣಕ್ಕೆ ಹೋಂಡಾ ಆ್ಯಕ್ವಿವಾ ಸ್ಕೂಟರ್ ನಲ್ಲಿ ಮರಳುತ್ತಿದ್ದಾಗ ಮದ್ದೂರು ಬಳಿ ಅಪಘಾತ ನಡೆದಿದೆ. ಈ ಮೂವರು ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನ ಹಿಂಬದಿಯಿಂದ ಕ್ಯಾಂಟರ್​ ಗೆ ಢಿಕ್ಕಿಯಾಗಿ, ಬಳಿಕ ಹೆದ್ದಾರಿ ಪಕ್ಕದ ತಡೆಗೋಡೆಗೆ ಅಪ್ಪಳಿಸಿದೆ. ಗಂಭೀರ ಗಾಯಗೊಂಡಿದ್ದ ವರಲಕ್ಷ್ಮಿ ಸ್ಥಳದಲ್ಲೇ ಮೃತಪಟ್ಟರೆ,ಗಂಭೀರವಾಗಿ ಗಾಯಗೊಂಡ ಅವರ ಪುತ್ರ ಮತ್ತು ಮೊಮ್ಮಗಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿದ್ದು,ಪ್ರತಿನಿತ್ಯ ಒಂದಾದರೂ ಅಪಘಾತ ಸಂಭವಿಸುತ್ತಿದ್ದು,ಸಾವಿನ ಹೆದ್ದಾರಿಯಾಗಿ ಮಾರ್ಪಾಡಾಗಿದೆ.ನಿನ್ನೆ ಮದ್ದೂರಿನ ಗೆಜ್ಜಲಗೆರೆ ಬಳಿ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ವಿಭಜಕ ದಾಟಿ ಎದುರಿನಿಂದ ಬರುತ್ತಿದ್ದ ಮತ್ತೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇಂದು ಈ ದುರ್ಘಟನೆ ನಡೆದಿದ್ದು,ರಾಷ್ಟ್ರೀಯ ಹೆದ್ದಾರಿ ಸಾವಿನ ಕೂಪವಾಗಿ ಮಾರ್ಪಟ್ಟಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ