Saturday, May 18, 2024

ಪ್ರಾಯೋಗಿಕ ಆವೃತ್ತಿ

ಅಮೆರಿಕ | ಮೋದಿ ಭೇಟಿ ವಿರೋಧಿಸಿ ”ಕ್ರೈಂ ಮಿನಿಸ್ಟರ್ ಆಫ್ ಇಂಡಿಯಾ” ಹ್ಯಾಷ್‌ಟ್ಯಾಗ್ ನಲ್ಲಿ ಪ್ರತಿಭಟನೆ

ಹೆ, ಜೋ ಬೈಡನ್ ಮೋದಿಯನ್ನು ಕೇಳಿ ವಿದ್ಯಾರ್ಥಿ ಕಾರ್ಯಕರ್ತ ಉಮರ್ ಖಾಲಿದ್ ವಿಚಾರಣೆ ಎದುರಿಸದೆ ಏಕೆ 1000 ದಿನಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿದ್ದಾರೆ? #ಕ್ರೈಂ ಮಿನಿಸ್ಟರ್ ಆಫ್ ಇಂಡಿಯಾ ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಅಮೆರಿಕದ ನ್ಯೂಯಾರ್ಕ್‌ ನಗರದಲ್ಲಿ ಈ ರೀತಿಯ ಭಿತ್ತಿಫಲಕಗಳನ್ನು ಬಳಸಿ ಮೋದಿ ಅಮೆರಿಕ ಭೇಟಿ ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.

“>

 

ಹೆ ಜೋ ಬೈಡನ್, ಮೋದಿಯನ್ನು ಕೇಳಿ ಒಲಿಂಪಿಕ್ಸ್ ಪದಕಗಳನ್ನು ಗೆದ್ದ ಮಹಿಳಾ ಕುಸ್ತಿಪಟುಗಳು ಮೋದಿಯವರ ಸಚಿವನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದನ್ನು ವಿರೋಧಿಸಿ ಪ್ರತಿಭಟಿಸಿದಾಗ ಅವರ ಮೇಲೆ ಹಿಂಸಾಚಾರ ಎಸಗಿದ್ದು ಏಕೆ? ಎಂಬ ಡಿಜಿಟಲ್ ಹೋರ್ಡಿಂಗ್‌ಗಳು ಕಂಡು ಬರುತ್ತಿವೆ.

“>

 

ಹೆ, ಜೋ ಬೈಡನ್, ಪ್ರಶ್ನೆ: 2005-2014ರವರೆಗೆ ಏಕೆ ಅಮೆರಿಕ ಮೋದಿಯವರ ವೀಸಾವನ್ನು ರದ್ದುಗೊಳಿಸಿತ್ತು? ಉತ್ತರ: ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕಿದ ಕಾರಣಕ್ಕಾಗಿ.. ಮತ್ತು ಈ ಕಾರಣಕ್ಕೆ ವೀಸಾ ನಿರಾಕರಿಸಲ್ಪಟ್ಟ ಏಕೈಕ ವ್ಯಕ್ತಿ ಮೋದಿ. #ಕ್ರೈಂ ಮಿನಿಸ್ಟರ್ ಆಫ್ ಇಂಡಿಯಾ ಎಂದು ಸಹ ಪ್ರದರ್ಶಿಸಲಾಗುತ್ತಿದೆ.

“>

ನಿಮಗಿದು ಗೊತ್ತೆ, ಮೋದಿ ಆಳ್ವಿಕೆಯಲ್ಲಿ ಮುಸ್ಲಿಂ, ಕ್ರಿಶ್ಚಿಯನ್ ಮತ್ತು ದಲಿತರ ಮೇಲೆ ಮಾಬ್ ಲಿಂಚಿಂಗ್‌ಗಳು ಮಿತಿ ಮೀರಿವೆ. ಆದರೆ ಇದಕ್ಕೆ ಯಾರೂ ಉತ್ತರದಾಯಿಗಳಲ್ಲ.. ಹೇ ಜೋ ಬಿಡೆನ್, ಇಂದು ಭಾರತವೇಕೆ ನರಮೇಧದ ಹೊಸ್ತಿಲಲ್ಲಿದೆ ಎಂದು ಮೋದಿಯವರನ್ನು ಕೇಳಿ ಎಂಬ ವಿಡಿಯೋ ತುಣುಕುಗಳು ಬಿತ್ತರವಾಗುತ್ತಿವೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!