ಪ್ರಧಾನಿ ಮೋದಿಜೀ ಅವರು ಲೋಕಸಭಾ ಚುನಾವಣೆಗಳನ್ನು ಗೆಲ್ಲಲು ದೇಶದ ತುಂಬಾ ರ್‍ಯಾಲಿಗಳಲ್ಲಿ ಭಾಗವಹಿಸುತ್ತಾ ಸಭೆ, ಸಮಾರಂಭಗಳಲ್ಲಿ ಪಾಲ್ಗೊಂಡು ಬಿಜೆಪಿ ಗೆಲುವಿಗಾಗಿ ಶ್ರಮಿಸುತ್ತಿರುವಾಗ ಮೋದಿಜೀ ಖುದ್ದು ಉಮೇದುವಾರರಾಗಿರುವ ವಾರಾಣಸಿ ಲೋಕಸಭಾ ಕ್ಷೇತ್ರದ ಪ್ರಚಾರವನ್ನು ಹೇಗೆ ಮಾಡುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇರುತ್ತೆ. ಆ ಕುತೂಹಲಕ್ಕೆ ಉತ್ತರ ಸಿ.ಆರ್.ಪಾಟೀಲ್.
ಬಹಳಷ್ಟು ಜನ ಮೋದಿಜೀ ಅವರ ವೈಯಕ್ತಿಕ ಉಮೇದುವಾರಿಕೆ ಬಗ್ಗೆ, ವಾರಣಾಸಿ ಬಗ್ಗೆ ಅಮಿತ್ ಷಾ ಅವರು ನೋಡಿಕೊಳ್ಳಬಹದು ಎಂದುಕೊಂಡಿದ್ದಾರೆ. ಆದರೆ ನಿಜವಾಗಿ ಮೋದಿಜೀ ಅವರ ಪಕ್ಕಾ ಲೆಪ್ಟಿನೆಂಟ್ ಸಿ.ಆರ್.ಪಾಟೀಲ್ ಆಗಿದ್ದು, ಗುಜರಾತಿನ ಎಲ್ಲಾ ರಾಜಕೀಯ ವ್ಯವಹಾರಗಳನ್ನು ಈ ವ್ಯಕ್ತಿಯೇ ನೋಡಿಕೊಳ್ಳುತ್ತಾರೆ.
ಜೊತೆಗೆ ವಾರಾಣಾಸಿ ಕ್ಷೇತ್ರದ ಉಸ್ತುವಾರಿ ಸಹ ಇದೇ ವ್ಯಕ್ತಿಯದಾಗಿದ್ದು, ಇವುಗಳ ಜೊತೆಗೆ ಅಮೇಥಿ ಹಾಗೂ ರಾಯ್ ಬರೇಲಿ ಕ್ಷೇತ್ರದ ಉಸ್ತುವಾರಿಯನ್ನು ಸಹ ಮೋದಿಜೀ ತನ್ನ ಆಪ್ತ ಸಿ.ಆರ್.ಪಾಟೀಲ್ ಗೆ ವಹಿಸಿದ್ದಾರೆ. ಈ ಭಾರಿ ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಗುಜರಾತ್ ಮೂಲದ ಸಿ.ಆರ್. ಪಾಟೀಲ್ ಅವರಿಗೆ ದೊಡ್ಡ ಹುದ್ದೆ ಸಿಗುತ್ತೆ ಎಂಬ ಸುದ್ದಿ ಇದ್ದು, ಆಗ ಮೋದಿಜೀ ಅವರಿಗೆ ಅಮಿತ್ ಷಾ ಮತ್ತು ಪಾಟೀಲ್ ಎಡಗೈ, ಬಲಗೈ ತರಹ ಕೆಲಸ ಮಾಡುತ್ತಾರೆ ಎನ್ನುವ ಮಾತುಗಳು ಚಾಲ್ತಿಯಲ್ಲಿವೆ.




