Sunday, May 19, 2024

ಪ್ರಾಯೋಗಿಕ ಆವೃತ್ತಿ

ಸ್ಪರ್ಧಾತ್ಮಕ ಸಾಧನೆ ಮಾಡಲು ಛಲ ಅತ್ಯವಶ್ಯಕ

ಪ್ರಸ್ತುತ ದಿನಗಳಲ್ಲಿನ ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಸಾಧನೆ ಮಾಡಲು ಹಠ ಮತ್ತು ಛಲ ಅತ್ಯವಶ್ಯಕ ಎಂದು ತಾ.ಪ.ಇಓ ವೀಣಾ ಹೇಳಿದರು.

ನಗರದ ಹರ್ಡೀಕರ್‌ಭವನದಲ್ಲಿ ಭಾರತ ಸೇವಾದಳ ಜಿಲ್ಲಾ ಶಾಖೆ, ಸೇಂಟ್ ಜಾನ್ ಆಂಜುಲನ್ಸ್ ಇಂಡಿಯಾ ಜಿಲ್ಲಾ ಶಾಖೆ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು  ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ- ಧನಸಹಾಯ-ಅಭಿನಂಧನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಜಗತ್ತು ಸ್ಪರ್ಧಾತ್ಮಕವಾಗಿದೆ, ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕವೇ ಹುದ್ದೆಗಳು-ಉನ್ನತ ಹುದ್ದೆಗಳನ್ನು ಪಡೆಲು ಸಾಧ್ಯವಾಗುತ್ತಿದೆ, ವಿದ್ಯಾರ್ಥಿಗಳು ಕನ್ನಡ ಮಾಧ್ಯಮ, ಗ್ರಾಮೀಣ ವಿದ್ಯಾರ್ಥಿಗಳೆಂದು ಕೀಳರಿಮೆ ಬೆಳೆಸಿಕೊಳ್ಳದಿರಿ ಎಂದು ಸಲಹೆ ನೀಡಿದರು.

ಭಾರತ ಸೇವಾದಳ ಜಿಲ್ಲಾ ಶಾಖೆ ಕಾರ್ಯದರ್ಶಿ ಜಿ.ವಿ.ನಾಗರಾಜು ಮಾತನಾಡಿ, ಇಂದಿನ ಶೈಕ್ಷಣಿಕ ಕ್ಷೇತ್ರದಲ್ಲಿ ಮಂಡ್ಯ ಜಿಲ್ಲೆಯ ಗ್ರಾಮೀಣ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿದ್ದಾರೆ, ನಾವು ವಿದ್ಯಾರ್ಥಿಗಳಾಗಿದ್ದ ಅವಧಿಯಲ್ಲಿ ಇಷ್ಟೊಂದು ಸೌಲಭ್ಯ-ಸೌಕರ್ಯಗಳು ಇರಲಿಲ್ಲ ಅಂತಹ ಕಷ್ಟಕರ ದಿನಗಳು ನಮ್ಮದಾಗಿದ್ದವು ಎಂದು ಸ್ಮರಿಸಿದರು.

ಭಾರತ ಸೇವಾದಳ ಜಿಲ್ಲಾ ಶಾಖೆ, ಸೇಂಟ್ ಜಾನ್ ಆಂಜುಲನ್ಸ್ ಇಂಡಿಯಾ ಜಿಲ್ಲಾ ಶಾಖೆ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಸಹಕಾರದೊಂದಿಗೆ ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುತ್ತಿದ್ದೇವೆ, ಪ್ರತಿಭಾ ಪುರಸ್ಕಾರ ನೀಡಿ ಉತ್ತೇಜನ ನೀಡುತ್ತಿದ್ದೇವೆ, ಪ್ರಥಮ ಚಿಕಿತ್ಸೆ ಬಗ್ಗೆ ತರಬೇತಿ ನೀಡುತ್ತ ಬರುತ್ತಿದ್ದೇವೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ವಿವಿಧ ತಾಲೂಕುಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಅರ್ಹ ವಿದ್ಯಾರ್ಥಿಗಳಿಗೆ-ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಗಣ್ಯರು ಅಭಿನಂದನೆ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾರತ ಸೇವಾದಳ ಜಿಲ್ಲಾ ಶಾಖೆ ಅಧ್ಯಕ್ಷ ಬಿ.ಸಿ.ಶಿವನಾಂದ, ಕೇಂದ್ರ ಸಮಿತಿ ಸದಸ್ಯ ವೈ.ಬಿ.ಬಸವರಾಜು, ಸದಸ್ಯರಾದ ರಘು, ಪ್ರಕಾಶ್, ಸಂಘಟಕ ಗಣೇಶ್, ಜಿಲ್ಲಾ ನಾಯಕಿ ಉಷಾರಾಣಿ, ಸೇಂಟ್ ಜಾನ್ ಆಂಜುಲನ್ಸ್ ಇಂಡಿಯಾ ರಾಜ್ಯ ಪ್ರ.ಕಾರ್ಯದರ್ಶಿ ಪಿ.ಎಸ್.ನಾಯ್ಡು, ಉಪಾಧ್ಯಕ್ಷ ಆರ್.ಜೇಮ್ಸ್, ಚುಟುಕು ಸಾಹಿತ್ಯ ಪರಿಷತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಜಿ.ಆರ್.ಅರಸ್ ಸೇರಿದಂತೆ ಹಲವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!