Thursday, September 19, 2024

ಪ್ರಾಯೋಗಿಕ ಆವೃತ್ತಿ

ಲೈಂಗಿಕ ದೌರ್ಜನ್ಯ : ಆಸ್ಟ್ರೇಲೀಯಾದಲ್ಲಿ ಶ್ರೀಲಂಕಾ ಕ್ರಿಕೆಟಿಗನ ಬಂಧನ

ಶ್ರೀಲಂಕಾದ ಕ್ರಿಕೆಟಿಗ ಧನುಷ್ಕ ಗುಣತಿಲಕ ಅವರನ್ನು ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಆಸ್ಟ್ರೇಲೀಯಾದ ಸಿಡ್ನಿ ಪೊಲೀಸರು ಬಂಧಿಸಿದ್ದಾರೆ.

ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಪೊಲೀಸರ ಪ್ರಕಾರ, ನವೆಂಬರ್ 2ರ ಬುಧವಾರ ಸಂಜೆ, 29 ವರ್ಷದ ಮಹಿಳೆ ಮೇಲೆ ಕ್ರಿಕೆಟಿಗ ಧನುಷ್ಕ ಗುಣತಿಲಕ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಆರೋಪದ ಮೇಲೆ ತಕ್ಷಣ ಅವರನ್ನು ಬಂಧಿಸಲಾಯಿತು. ಗುಣತಿಲಕ ಅವರ ವಿರುದ್ಧ ಸಮ್ಮತಿಯಿಲ್ಲದೆ ಲೈಂಗಿಕ ಸಂಪರ್ಕ ಮಾಡಿದ ನಾಲ್ಕು ಆರೋಪಗಳನ್ನು ಹೊರಿಸಲಾಗಿದೆ.

ಆರೋಪಗಳೇನು?

29 ವರ್ಷದ ಮಹಿಳೆಯನ್ನು ಕ್ರಿಕೆಟಿಗ ಗುಣತಿಲಕ ಅವರು ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್ ಮೂಲಕ ಭೇಟಿಯಾಗಿದ್ದರು, ಅವರು ಭೇಟಿಯಾಗುವ ಮೊದಲು, ಕೆಲವು ದಿನಗಳ ಕಾಲ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಸಿಡ್ನಿಯ ಉಪನಗರವಾದ ರೋಸ್ ಬೇ ಯಲ್ಲಿರುವ ನಿವಾಸದಲ್ಲಿ ಆತ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನೆಯ ವಿವರ

ಶ್ರೀಲಂಕಾ ಕ್ರಿಕೆಟ್ ತಂಡವು ಐಸಿಸಿ ಟಿ 20, 2022ರ ವಿಶ್ವಕಪ್‌ಗಾಗಿ ಸಿಡ್ನಿಯಲ್ಲಿದೆ, ಗಾಯಗೊಂಡಿರುವ ಕಾರಣ ಗುಣತಿಲಕ ಟಿ 20 ವಿಶ್ವಕಪ್‌ ನಿಂದ ಹೊರಗುಳಿದಿದ್ದರು. ಆಸ್ಟ್ರೇಲಿಯಾದ ಪರಮಟ್ಟಾ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಗುಣತಿಲಕ ಅವರಿಗೆ ಜಾಮೀನು ನಿರಾಕರಿಸಲಾಗಿದೆ. ಗುಣತಿಲಕ ವಿರುದ್ಧದ ಆರೋಪಗಳು ಅತ್ಯಾಚಾರವೆಂದೇ ಗುರುತಿಸಿಕೊಂಡಿವೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!