Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾಮುಕ ಮುಖ್ಯಶಿಕ್ಷಕನನ್ನು ದೊಣ್ಣೆ ಹಿಡಿದು ಅಟ್ಟಾಡಿಸಿದ ವಿದ್ಯಾರ್ಥಿನಿಯರು !

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕ ಮುಖ್ಯಶಿಕ್ಷಕ ಚಿನ್ಮಯಾನಂದಮೂರ್ತಿಯ ವಿರುದ್ಧ ಹಾಸ್ಟೆಲ್ ನ ವಿದ್ಯಾರ್ಥಿನಿಯರ ರೋಷ ಅಕ್ಷರಶಃ ಕಟ್ಟೆಯೊಡೆದು, ವಿದ್ಯಾರ್ಥಿನಿಯರೇ ದೊಣ್ಣೆಗಳನ್ನು ಹಿಡಿದುಕೊಂಡು ಕಾಮುಕ ಶಿಕ್ಷಕನನ್ನು ಥಳಿಸಿ ತಕ್ಕಪಾಠ ಕಲಿಸಿದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

“>

 

ತರಗತಿಯಲ್ಲಿ ಪಾಠ ಮಾಡಿದ ಶಿಕ್ಷಕನನ್ನೆ ಅಟ್ಟಾಸಿಕೊಂಡು ಹೊಡೆಯಲು ವಿದ್ಯಾರ್ಥಿಯರು ಮುನುಗ್ಗಿದ್ದು, ಈ ಕಾಮುಕನು ವಿದ್ಯಾರ್ಥಿನಿಯರಿಗೆ ಎಷ್ಟರ ಮಟ್ಟಿಗೆ ಕಿರುಕುಳ ನೀಡಿದ್ದಾನೆ ಎಂಬುದನ್ನು ಎತ್ತಿ ತೋರಿಸುವಂತಿತ್ತು.

ಕಾಮುಕ ದೃಷ್ಠಿ ಶಿಕ್ಷಕಿಯರ ಮೇಲೂ ಬಿದ್ದಿತ್ತು

ಪಾಂಡವಪುರ ತಾಲ್ಲೂಕಿನ ಕಟ್ಟೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಚಿನ್ಮಯಾನಂದಮೂರ್ತಿ ಶಾಲಾ ವಿದ್ಯಾರ್ಥಿನಿಯರನ್ನಷ್ಟೆ ಅಲ್ಲದೇ ಸಹೋದ್ಯೋಗಿ ಶಿಕ್ಷಕಿಯರನ್ನು ಕಾಮುಕ ದೃಷ್ಟಿಯಿಂದ ನೋಡುತ್ತಿದ್ದದ್ದು, ಕೆ.ಆರ್.ಎಸ್. ಪೊಲೀಸ್ ಠಾಣೆಯ ಪೊಲೀಸರು ದಾಖಲಿಸಿರುವ ಎಫ್ಐಆರ್ ನಲ್ಲಿ ದಾಖಲಾಗಿದೆ.

ಲೈಂಗಿಕ ಕಿರುಕುಳ ನೀಡಲು ಆಫೀಸ್ ರೂಂ ಗೆ ಕರೆಸಿಕೊಳ್ಳುತ್ತಿದ್ದ

ಕಟ್ಟೇರಿಯ ಆರ್.ಎಂ.ಎಸ್.ಎ ಹಾಸ್ಟೆಲ್ ನ ವಾರ್ಡನ್ ಕೆ.ಎಸ್.ನಮಿತಾ ನೀಡಿರುವ ಮಾಹಿತಿ ಪ್ರಕಾರ ಮುಖ್ಯಶಿಕ್ಷಕ ಚಿನ್ಮಯಾನಂದ ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುವುದಕ್ಕಾಗಿ ತನ್ನಆಫೀಸ್ ರೂಂ ಗೆ ಕರೆಸಿಕೊಳ್ಳುತ್ತಿದ್ದ. ಅಲ್ಲದೇ ವಿದ್ಯಾರ್ಥಿನಿಯರ ಅಂಗಾಂಗಗಳನ್ನು ವರ್ಣಿಸುತ್ತಿದ್ದ. ಅಲ್ಲದೇ ಶಾಲಾ ಶಿಕ್ಷಕಿಯರ ಅಂಗಾಂಗಗಳ ಬಗ್ಗೆಯೂ ವರ್ಣಿಸಿ ವಿದ್ಯಾರ್ಥಿಯರನ್ನು ಪ್ರಚೋದಿಸುತ್ತಿದ್ದ.

ಆಶ್ಲೀಲ ವೀಡಿಯೋ ನೋಡುವಂತೆ ಒತ್ತಾಯಿಸುತ್ತಿದ್ದ

ವಿದ್ಯಾರ್ಥಿಯರನ್ನು ಆಫೀಸ್ ರೂಮ್ ಗೆ ಕರೆಸಿಕೊಳ್ಳುತ್ತಿದ್ದ ಕಾಮುಕ ಚಿನ್ಮಯಾನಂದ, ಅವರಿಗೆ ಬಟ್ಟೆ ಬಿಚ್ಚುವಂತೆ ಬೆದರಿಸುತ್ತಿದ್ದ, ನಾನು ಹೇಳಿದ್ದನ್ನು ಕೇಳದೆ ಹೋದರೆ ನಿನ್ನ ಟಿ.ಸಿ ಯಲ್ಲಿ ಬ್ಯಾಡ್ ಕ್ಯಾರೆಕ್ಟರ್ ಎಂದು ನಮೂದಿಸುತ್ತೇನೆ. ಅಲ್ಲದೇ ಇಲ್ಲಿ ನಡೆದಿದ್ದನ್ನು ಹೊರಗೆ ಹೇಳಿದರೆ ನಿಮ್ಮನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ. ಅಲ್ಲದೇ ಅಶ್ಲೀಲ ವೀಡಿಯೋಗಳನ್ನು ವಿದ್ಯಾರ್ಥಿನಿಯರಿಗೆ ತೋರಿಸಿ, ಅಲ್ಲಿ ಇರುವ ಹಾಗೇ ನಾನು ಮಾಡಿದರೆ ಚೆನ್ನಾಗಿರುತ್ತದೆ ಎಂದು ಪ್ರಚೋದನೆ ನೀಡುತ್ತಿದ್ದ. ಈ ಎಲ್ಲಾ ಅಂಶಗಳು ಎಫ್ಐಆರ್ ದಾಖಲಾಗಿವೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!