Thursday, September 19, 2024

ಪ್ರಾಯೋಗಿಕ ಆವೃತ್ತಿ

ಫೆ. 3-4ರಂದು ಪ್ರಸಿದ್ಧ ಮಳವಳ್ಳಿಯ ಸಿಡಿಹಬ್ಬ

ಮಳವಳ್ಳಿ ಪಟ್ಟಣದ ಇತಿಹಾಸ ಪ್ರಸಿದ್ದಿ ಪಡೆದಿರುವ ಸಿಡಿಹಬ್ಬವು ಫೆ.3 ಮತ್ತು 4ರಂದು ನಡೆಯಲಿದ್ದು, ಜ. 31ರಂದು ನಡೆಯಲಿರುವ ದಂಡಿನ ಮಾರಮ್ಮ ಹಬ್ಬ ಆಚರಣೆ ಮೂಲಕ ಸಿಡಿ ಹಬ್ಬಕ್ಕೆ ಚಾಲನೆ ಸಿಗಲಿದೆ.

ಸಿಡಿಹಬ್ಬದಲ್ಲಿ ವಿಶೇಷವಾಗಿ ಪೂಜೆಸಲ್ಪಡುವ ದಂಡಿನ ಮಾರಮ್ಮ ಮತ್ತು ಪಟ್ಟಲದಮ್ಮ ಅಕ್ಕತಂಗಿಯರು ಆಗಿದ್ದು, ಪ್ರಥಮವಾಗಿ ಅಕ್ಕ ದಂಡಿನ ಮಾರಮ್ಮ ಹಬ್ಬವನ್ನು ಜ.31ರಂದು ಆಚರಿಸಿದರೇ ನಂತರ ಫೆ.3ಮತ್ತು 4ರಂದು ಪಟ್ಟಲದಮ್ಮ ಸಿಡಿ ಹಬ್ಬವು ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಲಿದೆ.

ಮಳವಳ್ಳಿ ಪಟ್ಟಣದಲ್ಲಿ ನೆಲೆಸಿರುವ ಪಟ್ಟಲದಮ್ಮ ಹಾಗೂ ದಂಡಿನ ಮಾರಮ್ಮ ಅಕ್ಕತಂಗಿಯರು ಎಂದು ಹಿರಿಯರು ಹೇಳುತ್ತಾರೆ. ಇತಿಹಾಸದ ಪ್ರಕಾರ 300 ವರ್ಷಗಳ ಹಿಂದೆ ಮಳವಳ್ಳಿ ಪಟ್ಟಣದ ಪೇಟೆ ಬೀದಿವಾಸಿ ಮಂಚಟಪ್ಪನವರು ಶ್ರೀರಂಗಪಟ್ಣಣ ಸೇರಿದಂತೆ ಮತ್ತಿತ್ತರ ಕಡೆಗಳಿಗೆ ಹೋಗಿ ಅಡಿಕೆ ವ್ಯಾಪಾರ ಮಾಡಿಕೊಂಡು ಮಳವಳ್ಳಿಗೆ ಬರುತ್ತಿದ್ದಾಗ ಅಡಿಕೆ ಚೀಲದಲ್ಲಿ ಎರಡು ವಿಗ್ರಹಗಳು ಸಿಗುತ್ತವೆ. ಮಂಚಟಪ್ಪನವರ ಕನಸಿಗೆ ಬಂದು ತಮಗೆ ಗುಡಿ ಕಟ್ಟಿ ಪೂಜಿಸುವಂತೆ ಹೇಳಿದಂತಾಗುತ್ತದೆ. ಅದರಂತೆ ದೇವಸ್ಥಾನ ನಿರ್ಮಾಣ ಮಾಡಿಸಿ ಅಡಿಕೆ ಚೀಲದಲ್ಲಿ ಸಿಕ್ಕ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಅಂದಿನಿಂದ ಇಲ್ಲಿಯವರೆವಿಗೂ ಈ ದೇವತೆಗಳಿಗೆ ಮಂಚಟಪ್ಪನವರ ಕುಟುಂಬದಿಂದಲೇ ಹಬ್ಬದಲ್ಲಿ ಪ್ರಥಮ ಪೂಜೆ ಸಲ್ಲಿಸಿಕೊಂಡು ಬರಲಾಗುತ್ತಿದೆ

ಪ್ರಸಕ್ತ ಸಿಡಿಹಬ್ಬದ ಅಂಗವಾಗಿ ಪಟ್ಟಣವನ್ನು ವಿವಿಧ ಬಣ್ಣದ ವಿದ್ಯುತ್‌ ದೀಪಗಳಿಂದ ಮಧುವಣಗಿತ್ತಿಯಂತೆ ಶೃಂಗರಿಸಲಾಗುತ್ತಿದೆ, ಹಬ್ಬಕ್ಕೆ ಬೇಕಾದ ಕುಡಿಯುವ ನೀರು, ಪಾರ್ಕಿಂಗ್, ತಾತ್ಕಾಲಿಕ ಶೌಚಾಲಯ ನಿರ್ಮಾಣ ಸೇರಿದಂತೆ ಹಲವಾರು ಕ್ರಮಗಳನ್ನು ಪುರಸಭೆ ಮತ್ತು ತಾಲ್ಲೂಕು ಆಡಳಿತದಿಂದ ಕೈಗೊಳ್ಳಲಾಗಿದೆ.

ದಂಡಿನ ಮಾರಮ್ಮ ಹಬ್ಬದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತದೆ. ರಾತ್ರಿಪೂರ್ತಿ ನಡೆಯುವ ಜಾತ್ರೆಯೂ ಶಾಂತಿಯುತವಾಗಿ ನಡೆಯಲು ಪೊಲೀಸ್ ಇಲಾಖೆ ವತಿಯಿಂದ ಆಗತ್ಯ ಕ್ರಮ ಕೈಗೊಳ್ಳಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!