Thursday, September 19, 2024

ಪ್ರಾಯೋಗಿಕ ಆವೃತ್ತಿ

ಸರ್ ಎಂವಿ ಜನ್ಮದಿನ ಆಚರಣೆ

ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮದಿನವನ್ನು ಎರಡು ಕಡೆ ಪತ್ಯೇಕವಾಗಿ ‍ಆಚರಣೆ ಮಾಡಲಾಯಿತು.

ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ವಿಶ್ವೇಶ್ವರಯ್ಯ ಪ್ರತಿಮೆಗೆ ಡಾ.ರಾಜೇಂದ್ರಪ್ರಸಾದ್ ಸ್ಮಾರಕ ಶಿಕ್ಷಣ ಸಂಸ್ಥೆ, ಕಾಳೇಗೌಡ ಪ್ರೌಢಶಾಲೆ ವತಿಯಿಂದ ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಮಾಲಾರ್ಪಣೆ ಮಾಡಿ, ಬಳಿಕ ಮಾತನಾಡಿದರು.

ಈ ಸಂದರ್ಭದಲ್ಲಿ ಡಾ.ರಾಜೇಂದ್ರಪ್ರಸಾದ್ ಸ್ಮಾರಕ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ನಾಗರತ್ನ, ಆಡಳಿತಾಧಿಕಾರಿ ಚಂದ್ರಪ್ರಭ, ಮುಖ್ಯ ಶಿಕ್ಷಕ ಗೋವಿಂದರಾಜು ಹಾಜರಿದ್ದರು.

ಬ್ರಾಹ್ಮಣಸಭಾದಿಂದ ಆಚರಣೆ

ಮಂಡ್ಯ ಜಿಲ್ಲಾ ಬ್ರಾಹ್ಮಣ ಸಭಾ ಹಾಗೂ ಜಿಲ್ಲಾ ಅಭಿಯಂತರರ ಸಂಘದಿಂದ ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮದಿನ ಆಚರಣೆ ಮಾಡಲಾಯಿತು.

ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಮಾತನಾಡಿ, ಸರ್.ಎಂ.ವಿ. ಅವರ ದೂರದೃಷ್ಠಿತ್ವ, ಸಮಯ ಪ್ರಜ್ಞೆ ಮತ್ತು ಶಿಸ್ತನ್ನು ಸ್ವಲ್ಪ ಭಾಗವನ್ನಾದರೂ ಮೈಗೂಡಿಸಿಕೊಳ್ಳಬೇಕು ಎಂದರು.

ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಸರ್.ಎಂ.ವಿ. ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

ಜಿಲ್ಲಾ ಬ್ರಾಹ್ಮಣ ಸಭಾದ ಸಹ ಕಾರ್ಯದರ್ಶಿ ಬಿ.ಜಿ.ಉಮಾ ಮಾತನಾಡಿದರು.

ಈ ಸಂದರ್ಭದಲ್ಲಿ ಬ್ರಾಹ್ಮಣ ಸಭಾದ ಗೌರವಾಧ್ಯಕ್ಷ ಬೆಳ್ಳೂರು ಶಿವರಾಂ, ಅಧ್ಯಕ್ಷ ಸದಾಶಿವಭಟ್, ಉಪಾಧ್ಯಕ್ಷ ಗೋಪಾಲ್, ಕಾರ್ಯದರ್ಶಿ ಶಂಕರ ನಾರಾಯಣಶಾಸ್ತ್ರಿ, ಖಜಾಂಚಿ ಮಮತಾ ರಮೇಶ್, ವಿಜಯಲಕ್ಷ್ಮಿ, ಅಭಿಯಂತರ ಸಂಘದ ಬೋರೇಗೌಡ, ತಮ್ಮಣ್ಣ, ರೇವಣ್ಣ, ಮಹೇಶ್, ನಾಗಣ್ಣ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!