Friday, October 11, 2024

ಪ್ರಾಯೋಗಿಕ ಆವೃತ್ತಿ

ಮನುಷ್ಯರು ಧರಿಸಿದ ಚಪ್ಪಲಿಗಳು

ಮನುಷ್ಯರು ಧರಿಸಿದ ಚಪ್ಪಲಿಗಳು
ನನ್ನ ಕಣ್ಣಿಗೆ ಬಿದ್ದವು
ಈ ಚಪ್ಪಲಿಗಳು
ಕಣ್ಣು ಮಂಜಾಗುವಷ್ಟು.

ಬಹಳ ಇತಿಹಾಸವಿದೆ
ಹೌದು
ಬಹಳ ವ್ಯತ್ಯಾಸವು ಇದೆ
‘ಅಜಗಜಾಂತರ’.

ಜೋಡಿ ಆಗುತ್ತವೆ ಈ ಜೋಡು ಯಾರಿದ್ದರೂ ಯಾರೂ ಇಲ್ಲದೆ ಇದ್ದರೂ
ಸೋತು ಸುಣ್ಣವಾದವರ ಜೊತೆಗೆ
ಬದುಕೇ ಮುಗಿಯಿತು ಎನ್ನುವವರ ಬಳಿ ಬಂದವರ
ಭಂಡ ಧೈರ್ಯದಂತೆ.

ಇವು ಚಲೋ ಎಂದು ನಡೆದರೆ
ಚಲೋ‌ ನೇ ಆಗಲಿದೆ.
ಈ ಚಪ್ಪಲಿಗಳು ಧರಿಸಿದವರು ಮಾತ್ರ
ಅಪ್ಪಟ ಮನುಷ್ಯರು.

*ಈ ಪೋಟೋ ಇತ್ತಿಚಿಗೆ ಕೊಲೆಯಾದ ದಲಿತ ಯುವಕರ ಮನೆಗೆ ದಲಿತ ಸಂಘಟನೆಗಳು ಬೇಟಿ ನೀಡಿ ಕುಟುಂಬಗಳಿಗೆ ಭೇಟಿ ನೀಡಿದ ಸಂಧರ್ಭದ್ದು.

– ಅನಿಲ್ ಕುಮಾರ್ ಚಿಕ್ಕದಾಳವಟ್ಟ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!