Thursday, September 19, 2024

ಪ್ರಾಯೋಗಿಕ ಆವೃತ್ತಿ

ಫ್ಯಾಕ್ಟ್‌ಚೆಕ್ | ಸಿದ್ದರಾಮಯ್ಯ ಸೊಸೆ ಸ್ಮಿತಾ ರಾಕೇಶ್ ಹೆಸರಿನಲ್ಲಿ ಏಷ್ಯಾದ ಅತೀ ದೊಡ್ಡ ಐಷಾರಾಮಿ ಪಬ್‌ ಇದೆಯೇ ?

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೊಸೆ (ಸಿದ್ದರಾಮಯ್ಯ ಹಿರಿಯ ಮಗ ದಿ. ರಾಕೇಶ್ ಪತ್ನಿ) ಹೆಸರಿನಲ್ಲಿ ಏಷ್ಯಾದಲ್ಲೇ ಅತಿ ದೊಡ್ಡದಾದ ಬೆಂಗಳೂರಿನ ಹೆಣ್ಣೂರಿನಲ್ಲಿ ಇರುವ ಈಯಾ ಪಬ್ ಮಾಲೀಕರು  ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

ನಮೋ ಕರ್ನಾಟಕ ಎಂಬ ಪೇಸ್‌ಬುಕ್ ಪೇಜ್‌ನಲ್ಲಿ ವಿಡಿಯೋ ಶೀರ್ಷಿಕೆಯನ್ನೊಳಗೊಂಡ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದ್ದು, “ಮಜಾವಾದಿ ಸಿದ್ರಾಮುಲ್ಲಾನ ಮತ್ತೊಂದು ಮುಖವಿದು. ಸಿದ್ರಾಮುಲ್ಲಾನ ಸೊಸೆ ಏಷ್ಯಾದ ಅತಿದೊಡ್ಡ ಪಬ್’ನ ಓನರ್” ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

I Support Prathap Simha ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಇದೇ ರೀತಿಯ ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಸಿದ್ದರಾಮಯ್ಯ ಸೊಸೆ  ಏಷ್ಯಾದ ಅತೀ ದೊಡ್ಡ ಪಬ್ ಓನರ್ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಇದೇ ರೀತಿ ಹಲವು ಬಲಪಂಥೀಯ ಸಾಮಾಜಿಕ ಮಾಧ್ಯಮಗಳ ಖಾತೆಗಳ ಮೂಲಕ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.  ಹಾಗಿದ್ದರೆ ಸಿದ್ದರಾಮಯ್ಯ ಹಿರಿಯ ಮಗ ದಿವಂಗತ ರಾಕೇಶ್ ಪತ್ನಿ ಅವರ ಹೆಸರಿನಲ್ಲಿ ಇಂತಹದೊಂದು ಪಬ್ ಇದೆಯೇ? ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಸುದ್ದಿ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಬೆಂಗಳೂರಿನ ಹೆಣ್ಣೂರಿನಲ್ಲಿರುವ ಏಷ್ಯಾದಲ್ಲೇ ಅತಿ ದೊಡ್ಡ ಪಬ್ ಎಂದೆನಿಸಿಕೊಂಡಿರುವ  ಈಯಾ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿರಿಯ ಮಗ- ದಿವಂಗತ ರಾಕೇಶ್ ಪತ್ನಿಗೆ ಸೇರಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಿದಾಗ,  The Hindu  ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದು ಲಭ್ಯವಾಗಿದೆ.

ಬೆಂಗಳೂರಿನ ಹೆಣ್ಣೂರಿನಲ್ಲಿ ಈಯಾ ಎಂಬ ಹೆಸರಿನ ಪಬ್ ಇದೆ. 87,000 ಚದರಡಿ ವ್ಯಾಪಿಸಿದ್ದು, ನಲವತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿದೆ. ಈ ಬಗ್ಗೆ ಜೂನ್ 14, 2023ರಂದು ದ ಹಿಂದೂ’ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದ್ದು, ಏಕಕಾಲಕ್ಕೆ ಸಾವಿರದಾ ಎಂಟುನೂರು ಮಂದಿ ಅತಿಥಿಗಳು ಇದರಲ್ಲಿ ಭಾಗವಹಿಸಬಹುದು ಎಂದು ಹೇಳಲಾಗಿದೆ.

ಇದರ ಮಾಲೀಕರು ಯಾರು ಎಂಬ ಬಗ್ಗೆಯೂ ಮಾಹಿತಿ ಇದ್ದು,  ದಿ ಹಿಂದೂ ವರದಿಯ ಪ್ರಕಾರ, ಮಿಸೊ ಸೆಕ್ಸಿ, ಡ್ಯಾಡಿ, ಡಯಾಬ್ಲೊ ಮತ್ತು ಬೌಗಿ ಸೇರಿದಂತೆ ಅವರ ಯಶಸ್ವಿ ಆಹಾರ ಮತ್ತು ಪಾನೀಯ (ಎಫ್ ಅಂಡ್ ಬಿ) ಉದ್ಯಮಗಳಿಗೆ ಹೆಸರುವಾಸಿಯಾದ ಲೋಕೇಶ್ ಸುಖಿಜಾ ಅವರು ಓಯಾವನ್ನು ಆರಂಭಿಸಿದ್ದಾರೆ ಎಂದು ಉಲ್ಲೇಖಿಸಿದೆ. ಈ ಪಬ್ ಬಗ್ಗೆ ಮಾತನಾಡಿರುವ ಸುಖಿಜಾ, “ಇದು ನನ್ನ 40ನೇ ಉದ್ಯಮ ಸಾಹಸ ಸೂಚಿಸುತ್ತದೆ. ಅಂತಹ ಪ್ರಯತ್ನಗಳಿಗೆ ಬೆಂಗಳೂರು ಅನುಕೂಲಕರ ವಾತಾವರಣವನ್ನು ಒದಗಿಸುತ್ತದೆ. ನಗರದ ಉತ್ಸಾಹಭರಿತ ಜನಸಮೂಹಕ್ಕೆ ಈ ಸಂಸ್ಥೆಗಳಿಗೆ ಸೂಕ್ತವಾದ ತಾಣವಾಗಿದೆ,” ಎಂದಿದ್ದಾರೆ ಎಂದು ವರದಿ ಮಾಡಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!