Thursday, September 19, 2024

ಪ್ರಾಯೋಗಿಕ ಆವೃತ್ತಿ

ಜನ ಯಾಕಿಷ್ಟು ಒಂಟಿಯಾಗಿದ್ದಾರೆ?

✍️ Haruki Murakami
ಅನುವಾದ : ಚಿದಂಬರ ನರೇಂದ್ರ

ಜನ
ಯಾಕಿಷ್ಟು ಒಂಟಿಯಾಗಿದ್ದಾರೆ?
ಅವರ ಉದ್ದೇಶವಾದರೂ ಏನು?
ಜಗತ್ತಿನ ಲಕ್ಷಾಂತರ ಜನ,
ಪ್ರತಿಯೊಬ್ಬರೂ
ತಮ್ಮನ್ನು ಇನ್ನೊಬ್ಬರು
ಸಮಾಧಾನ ಮಾಡಬೇಕೆಂದು,
ತೃಪ್ತಿಪಡಿಸಬೇಕೆಂದು
ಚಡಪಡಿಸುತ್ತಿರುವಾಗಲೂ,
ಯಾಕೆ ತಮ್ಮನ್ನು ತಾವು
ಎಲ್ಲರಿಂದ ದೂರವಾಗಿಸಿಕೊಂಡಿದ್ದಾರೆ?
ಉದ್ದೇಶವಾದರೂ ಏನು?
ಯಾಕೆ?
ಈ ಜಗತ್ತು ಸೃಷ್ಟಿಯಾಗಿರುವುದು
ಮನುಷ್ಯನ ಒಂಟಿತನವನ್ನು
ಪೋಷಿಸುವುದಕ್ಕಾ ?

ಇನ್ನೊಬ್ಬರನ್ನು ಚೇತರಿಸಿಕೊಳ್ಳಲಾಗದಂತೆ
ಘಾಸಿ ಮಾಡುವುದು
ನನ್ನಿಂದ ಸಾಧ್ಯ ಎನ್ನುವುದು
ತಿಳಿದಿರಲಿಲ್ಲ ನನಗೂ ಮೊದಲು.

ಆದರೆ ಇದು ಸತ್ಯ,
ಒಬ್ಬ ಮನುಷ್ಯ ತನ್ನ ಪಾಡಿಗೆ ತಾನು
ಸುಮ್ಮನೇ ಇದ್ದು ಬಿಡುವ ಕಾರಣವಾಗಿಯೇ
ನಾಶಮಾಡಿಬಿಡಬಲ್ಲ ಇನ್ನೊಬ್ಬರನ್ನು
ಎಂದೂ
ರಿಪೇರಿಯಾಗದಂತೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!