ಯುವಕರಿಗೆ ಯಾವ ಕ್ರೀಡೆಯಲ್ಲಿ ಆಸಕ್ತಿ ಇರುತ್ತದೋ, ಆ ಕ್ರೀಡೆಗೆ ಪೋಷಕರು ಪ್ರೋತ್ಸಾಹ ನೀಡಬೇಕು. ನಾನೂ ಸಹ ಯುವಕರಿಗೆ ಕ್ರೀಡೆಯಲ್ಲಿ ತೊಡಗಲು ಸದಾ ಪ್ರೋತ್ಸಾಹ ನೀಡುತ್ತೇನೆ ಎಂದು ಸಮಾಜ ಸೇವಕ ಕದಲೂರು ಉದಯ್ ತಿಳಿಸಿದರು.
ಮದ್ದೂರು ತಾಲ್ಲೂಕಿನ ಭಾರತೀನಗರದ ರಾಯಲ್ ರೆಸ್ಟೋ ಚಾಟ್ಸ್ ನಲ್ಲಿಂದು ತಮ್ಮ ಜನ್ಮದಿನದ ಅಂಗವಾಗಿ ಜೂನ್ 1 ರಿಂದ 3ರವರೆಗೆ ನಡೆಯುವ ಉದಯ್ ಪ್ರೀಮಿಯರ್ ಲೀಗ್ ಪಂದ್ಯದ ಟೀ ಶರ್ಟ್ ಗಳನ್ನು ಬಿಡುಗಡೆಗೊಳಿಸಿ ಅವರು ಮಾಡಿದರು.
ಯುವಕರು ಐಪಿಎಲ್ ಮಾದರಿಯಲ್ಲಿ ನನ್ನ ಜನ್ಮದಿನದ ಅಂಗವಾಗಿ ಈ ಟೂರ್ನಿ ಆಯೋಜಿಸಿರುವುದು ನಿಜಕ್ಕೂ ಸಂತೋಷದ ವಿಷಯ.ಯುವಕರು ಯಾವ ಕ್ರೀಡೆಯಲ್ಲಿ ಆಸಕ್ತಿ ಹೊಂದಿರುತ್ತಾರೋ ಆ ಕ್ರೀಡೆಗೆ ಅವರ ಪೋಷಕರು ಉತ್ತೇಜನ ನೀಡಬೇಕು. ಅವರಲ್ಲಿ ಯಾರಾದರೂ ಮುಂದಿನ ದಿನಗಳಲ್ಲಿ ರಣಜಿಯಲ್ಲೋ, ರಾಷ್ಟಮಟ್ಟದಲ್ಲೋ ಆಡಬಹುದು. ಯುವಕರಿಗೆ ನಾನು ಬೆನ್ನೆಲುಬಾಗಿ ಸದಾ ಅವರ ಜೊತೆ ಇರುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕದಲೂರು ತಿಮ್ಮೇಗೌಡ, ಯತೀಶ್,ಶಿವು, ಅಯೋಜಕರಾದ ಕರಡಕೆರೆ ಮನು, ನಾಗೇಶ್, ಅಣ್ಣೂರು ಮನೋಹರ್,ಹರೀಶ್,ಸಿದ್ದೇಗೌಡ, ರಾಘವೇಂದ್ರ,ಲಕ್ಷ್ಮೇಗೌಡನದೊಡ್ಡಿ ನಂದೀಶ್,ಕಾರ್ಕಹಳ್ಳಿ ಸಚ್ಚಿ, ಅಜ್ಜ ಹಳ್ಳಿ ಮನು,ರಾಯಲ್ ರೆಸ್ಟೋ ಅಜಯ್,ಸಾಗರ್ ,ಹನುಮಂತ,ಶಶಿ ಸೇರಿದಂತೆ ಹಲವರಿದ್ದರು.