Saturday, July 13, 2024

ಪ್ರಾಯೋಗಿಕ ಆವೃತ್ತಿ

ಮೈ.ವಿ. ರವಿಶಂಕರ್ ಪರ ಮತಯಾಚನೆ

ದಕ್ಷಿಣ ಪದವೀಧರರ ಚುನಾವಣೆಯ ಬಿಜೆಪಿ ಅಭ್ಯರ್ಥಿ ಮೈ .ವಿ .ರವಿಶಂಕರ್ ಗೆಲ್ಲಿಸಿ , ನಿಮ್ಮ ಸಮಸ್ಯೆಯನ್ನು ಬಗೆಹರಿಸಲು ಸಹಕಾರ ನೀಡಿ ಎಂದು ಮೈಸೂರು ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕರಾದ ಮೋಹನ್ ಮನವಿ ಮಾಡಿದರು.

ಶ್ರೀರಂಗಪಟ್ಟಣ ತಾಲೂಕಿನ ಮೊಗರಳ್ಳಿ ಗ್ರಾಮದಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಪರವಾಗಿ ಮತಯಾಚನೆ ಮಾಡಿ ಅವರು ಮನವಿ ಮಾಡಿದರು.

ಖಾಸಗಿ ಹಾಗೂ ಸರ್ಕಾರಿ ಶಾಲೆ ಶಿಕ್ಷಕರ ಸಮಸ್ಯೆಗಳು ಹಾಗೂ ಅತಿಥಿ ಉಪನ್ಯಾಸಕರ ಸಮಸ್ಯೆಗಳು ಸೇರಿದಂತೆ ಪದವೀಧರರ ಸಮಸ್ಯೆಗಳು ಸಾಕಷ್ಟಿದ್ದು,ಇವುಗಳನ್ನು ಈಡೇರಿಸುವ ಸಲುವಾಗಿ ಮೈ.ವಿ.ರವಿಶಂಕರ್ ಅವರನ್ನು ಗೆಲ್ಲಿಸಬೇಕು ಎಂದರು.

ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮ ಸರ್ಕಾರ ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದು,ನಮ್ಮ ಅಭ್ಯರ್ಥಿಗೆ ಗೆಲುವು ಖಚಿತವಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷರಾದ ಚಂದಗಾಲು ಶಂಕರ್ ,ಜಿಲ್ಲಾ ಕಾರ್ಯದರ್ಶಿ ಪೈಲ್ವಾನ್ ಮಹಾದೇವು, ಇಂದ್ರಕುಮಾರ್ , ಬಿಜೆಪಿ ಮುಖಂಡರಾದ ಜನಾರ್ಧನ್, ಮಂಡಲ ಕಾರ್ಯದರ್ಶಿ ರವಿ , ಓಬಿಸಿ ಉಪಾಧ್ಯಕ್ಷ ಮಲ್ಲೇಶ್, ವಿಶ್ವೇಶ್ವರ್ ಹಾಗೂ ಬಿಜೆಪಿ ಮುಖಂಡ ಕುಮಾರ್ ಇತರರು ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!