Tuesday, September 17, 2024

ಪ್ರಾಯೋಗಿಕ ಆವೃತ್ತಿ

ಶ್ರೀ ಕಾಳಮ್ಮ ಮತ್ತು ಶ್ರೀ ಬಿಸಿಲು ಮಾರಮ್ಮ ದೇವಿಗೆ ವಿಶೇಷ ಆಲಂಕಾರ

ಭೀಮನ ಅಮಾವಾಸೆ ಪ್ರಯುಕ್ತ, ಮಂಡ್ಯ ನಗರದಲ್ಲಿರುವ ಶ್ರೀ ಕಾಳಿಕಾಂಭ ದೇವಿ ಮತ್ತು ಶ್ರೀ ಬಿಸಿಲು ಮಾರಮ್ಮ ದೇವಸ್ಥಾನದಲ್ಲಿ ವಿಶೇಷ ಆಲಂಕಾರದೊಂದಿಗೆ ಪೂಜೆ ನಡೆಯಲಿದ್ದು, ಅಪಾರ ಭಕ್ತಾದಿಗಳು ಬಂದು ದೇವರ ಕೃಪೆಗೆ ಪಾತ್ರರಾಗುತ್ತಾರೆ ಎಂದು ದೇವಸ್ಥಾನದ ಆರ್ಚಕರಾದ ಎಂ.ಎನ್. ಮಧುಸೂದನ್, ಕೆ.ಪಿ.ಚಿರಂಜೀವಿ ತಿಳಿಸಿದರು.

ಗ್ರಾಮ ದೇವತೆಯಾದ ಕಾಳಿಕಾಂಬ ದೇವಿ ಮತ್ತು ಶ್ರಿ ಬಿಸಿಲು ಮಾರಮ್ಮ ಈ ಎರಡು ದೇವತೆಗಳು ಏಳು ಗ್ರಾಮಕ್ಕೆ ಸೇರಿದಂತೆ ಎಲ್ಲಾ ಜನರಿಗೂ ಸಮಸ್ತ ರೋಗರೋಜಿನ ಎಲ್ಲವನ್ನೂ ಕೂಡ ಹೋಗಲಾಡಿಸಿ ಭೀಮನ ಅಮಾವಾಸ್ಯೆ ದಿನದಂದು ನೂತನವಾದಂತಹ ಜೀವನವನ್ನು ಕಳಿಸುತ್ತಾಳೆ ಎಂದು ವಾಡಿಕೆಯಾಗಿ ಬಂದಿದೆ ಎಂದು ಆರ್ಚಕರಾದ ಮೋಹನಾಚಾರ್ ಮತ್ತು ಹರೀಶ್ ಕೆ ಇನ್ನಷ್ಟು ವಿವರಿಸಿದರು.

Sri Bisilu Maramma Devi

ಯಾವುದೇ ರೀತಿಯ ಜನ್ಮ ಜನ್ಮಂತರ ಪಾಪ ಕರ್ಮಗಳು ಈ ಗ್ರಾಮ ದೇವತೆಯ ಆಶೀರ್ವಾದ ಮತ್ತು ದರ್ಶನದಿಂದ ಅದೆಲ್ಲವೂ ನಶಿಸಿಹೋಗಿ ನೂತನ ಬದುಕನ್ನು ಪ್ರಾರಂಭಿಸುತ್ತಾರೆ ಎಂದು ಹೇಳಿ ಅನಾದಿಕಾಲದಿಂದ ಅಂದರೆ 1823ನೇ ಇಸವಿಯಿಂದಲೂ ಕೂಡ ನಡೆದು ಬಂದಿದೆ.

ನಮ್ಮ ಗಮನಕ್ಕೆ ಬಂದ ಹಾಗೆ ಸುಮಾರು 65 ರಿಂದ 70 ವರ್ಷಗಳಿಂದಲೂ ಸಹ ಭೀಮನ ಅಮಾವಾಸ್ಯೆ ದಿನದಂದು 10 ಸಾವಿರ ಭಕ್ತಾದಿಗಳು ಹೆಚ್ಚು ಜನ ಸೇರಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ ಮತ್ತು ಬಂದಂತಹ ಭಕ್ತಾದಿಗಳು ತೀರ್ಥ ಪ್ರಸಾದವನ್ನು ತೆಗೆದುಕೊಂಡು ಹೋಗುತ್ತಾರೆ.

ಭೀಮನ ಅಮಾವಾಸ್ಯೆ ಪ್ರಯುಕ್ತ ಇಲ್ಲಿ ತಡೆಯೊಡೆಯುವುದು ವಿಶೇಷ. ತಡೆ ಹೊಡೆಯುವ ಸದುದ್ದೇಶವೇನೆಂದರೆ ಯಾವುದೇ ತರಹದ ದುಷ್ಟ ಶಕ್ತಿಗಳ ಪ್ರಭಾವವು ಗ್ರಾಮಕ್ಕೆ, ಗ್ರಾಮದ ಜನತೆಗೆ ಬೀರದೆ ಇರುವ ಹಾಗೆ ತಡೆ ಹಿಡಿಯುವುದಕ್ಕೆ ತಡೆ ಅಂತ ಹೇಳಿ ಹೊಡೆಸುತ್ತಾರೆ.

ಈ ಗ್ರಾಮ ದೇವತೆಯ ದೇವಸ್ಥಾನದಲ್ಲಿ ತುಂಬಾ ಅನಾದಿಕಾಲದಿಂದಲೂ ತಡೆ ಹೊಡೆಸುವ ಸಂಪ್ರದಾಯವನ್ನು ನಡೆಸಿಕೊಂಡು ಬಂದಿರುತ್ತಾರೆ. ಹಾಗಾಗಿ ಸುಮಾರು ಸಾವಿರ 823 ವರ್ಷಗಳಿಂದಲೂ ಸಹ ಭೀಮನ ಅಮಾವಾಸ್ಯೆ ದಿವಸ ತಡೆ ಹೊಡೆಯುವುದು ಬಹಳ ವಿಶೇಷ ಮತ್ತು ಆ‍‍ಷಾಢ ಮಾಸದ ಮುಕ್ತಾಯದ ಹಂತದಲ್ಲಿ ನೂತನವಾಗಿ ವಿವಾಹದ ವಧು-ವರರು ದೇವಿಯ ದರ್ಶನವನ್ನು ಮಾಡುತ್ತಾರೆ. ಹಾಗಾಗಿ ಗ್ರಾಮದೇವತೆಯು ಗ್ರಾಮ ಜನತೆಗೆ ಸಕಲ ಸೌಭಾಗ್ಯ ,ಸಂತಾನವನ್ನು ಕೊಟ್ಟು ಆಶೀರ್ವದಿಸಿ ಬರುತ್ತಿರುತ್ತಾಳೆ ಎಂಬ ನಂಬಿಕೆಯಿಂದ ದೇವರಿಗೆ ನಡೆದುಕೊಳ್ಳುತ್ತಾರೆ ಎಂದು ತಿಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!