Wednesday, September 18, 2024

ಪ್ರಾಯೋಗಿಕ ಆವೃತ್ತಿ

ಷೇರು ಮಾರುಕಟ್ಟೆಯ ಪಕ್ಷಿ ನೋಟ

ಮಂಗಳವಾರದ ಮಾರುಕಟ್ಟೆಯು ಮುಗಿಯುವ ವೇಳೆಗೆ ಹಠಾತ್ತನೆ ಕೆಳಗೆ ಬಿದ್ದ ಸೂಚ್ಯಂಕದ ಗಲಿಬಿಲಿಗೆ ಒಳಗಾಗಿದ್ದ ಷೇರು ದಲ್ಲಾಳಿಗಳು, ಹೂಡಿಕೆದಾರರಿಗೆ ಇಂದಿನ ಮಾರುಕಟ್ಟೆಯು ಮೇಲೆ ಚಲಿಸುವ ಮೂಲಕ ಕೂಂಚ ನಿರುಮ್ಮುಳವಾಗುವಂತೆ ಮಾಡಿದೆ.

ಭಾರತದ ಸೂಚ್ಯಂಕ 574 ರಷ್ಟು ಮತ್ತು ನಿಫ್ಟಿಯು 177ರಷ್ಟು ಅಂಶಗಳಷ್ಟು ಎತ್ತರಕ್ಕೆ ತಲುಪಿದೆ.

ಮಾರುಕಟ್ಟೆಯು ಮೇಲೆ ಚಲಿಸಲು ಕಾರಣವಾದ ಬಿಪಿಸಿಎಲ್, ಟಾಟಮೋಟಾರ್ಸ್, ರಿಲೆಯನ್ಸ್, ಟಿಸಿಎಸ್,ಇನ್ಫೀ ಹಿಂದೂಸ್ಥಾನ ಯುನಿಲಿವರ್,ಎಚ್ ಡಿ ಎಫ್ ಸಿ ಗ್ರೂಪ್ ಮತ್ತು ಏಷಿಯನ್ ಪೈಂಟ್ಸ್ ಮತ್ತು ಅಲ್ಟ್ರಟೆಕ್ ಸಿಮೆಂಟ್ ಕಂಪನಿಗಳು.

ಸೂಚ್ಯಂಕವು ಎತ್ತರಕ್ಕೆ ಜಿಗಿಯುವಾಗಲೂ, ಕೆಲವು ಕಂಪನಿಗಳ ‍ಷೇರುಗಳ ಪಾತಳಕ್ಕೆ ಇಳಿದಿದೆ.  ಜಜಾಜ್ ಫಿನ್, ಬಜಾಜ್ ಫಿನ್ ಸರ್ವ್ ಇತರ ಕಂಪನಿಗಳು.

ಕಳೆದ ಕೆಲವು ದಿನಗಳಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನಿರಂತರವಾಗಿ ತಮ್ಮ ಹೂಡಿಕೆಗಳನ್ನು ಮಾರಾಟ ಮಾಡುತ್ತಲೆ ಬಂದಿದ್ದಾರೆ. ಕಳೆದ ಮೂರು ದಿನಗಳಿಂದ 15 ಸಾವಿರ ಕೋಟಿಯಷ್ಟು ಮಾರಾಟ ಮಾಡಿದ್ದಾರೆ.

ಇಷ್ಟೆಲ್ಲಾ ಅವರು ಮಾರಾಟ ಮಾಡುತ್ತಿದ್ದಾಗಲೂ ಈ ಮಾರುಕಟ್ಟೆಯು ಮೇಲೇಕೆ ಚಲಿಸುತ್ತಿದ್ದೆ? ಮುಂದಿನ ದಿನಗಳಲ್ಲಿ ಯಾವುದಾದರೂ ಋಣತ್ಮಾತಕ ಸುದ್ದಿಗಳೇನಾದರೂ ಇರಬಹುದಾ? ಇದೆಲ್ಲಾ ಮುಂದಿರುವ ಪ್ರಶ್ನೆಗಳು.

ವಿದೇಶಿ ಹೂಡಿಕೆದಾರರ ನಡೆಗಳನ್ನು ಸಾಮಾನ್ಯ ಹೂಡಿಕೆದಾರರು ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಯಾವಾಗ ಸಾಮಾನ್ಯ ಹೂಡಿಕೆದಾರರು ಹಣವಿನಿಯೋಸಿಬೇಕು, ಹೇಗೆ ಇದರ ಲಾಭ ಗಳಿಸುವುದು ಅನೇಕರಿಗೆ ಇನ್ನೂ ಯಕ್ಷ ಪ್ರಶ್ನೆಯಾಗಿದೆ.

ಮಾರುಕಟ್ಟೆಯು ರಷ್ಯಾ-ಉಕ್ರೇನ್ ಮತ್ತು ಕೋವಿಡ್ -4ನೇ ಅಲೆಯ ಭೀತಿಯ ಕಾರಣದ ಮೇಲೆ ಕೆಳಗೆ ಬೀಳುತ್ತಿದೆ ಎಂದು ಮಾರುಕಟ್ಟೆಯಲ್ಲಿ ಗುಸು ಗುಸು ಕೇಳಿ ಬರುತ್ತಿತ್ತು.

ಆದರೆ, ರಷ್ಯಾ-ಉಕ್ರೇನ್ ಯುದ್ದ ಸಂಭವಿಸಿದ್ದಲ್ಲಿ ಇದರ ಪರಿಣಾಮವು ನೇರವಾಗಿ  ಯೂರೋಪಿನ ‍ಷೇರು ಮಾರುಕಟ್ಟೆಯ ಸೂಚ್ಯಂಕವನ್ನು ಪ್ರಭಾವಿಸಬೇಕಿತ್ತು. ಅದು ಸಂಭವಿಸಿಲ್ಲವೆಂದರೆ, ವಿದೇಶಿ ಹೂಡಿಕೆದಾರರ ಲೆಕ್ಕಚಾರವೇ ಬೇರೆಯದ್ದಾಗಿದೆ.

ಇದೇ 23ರ ಶನಿವಾರ ಐಸಿಐಸಿಐ ಬ್ಯಾಂಕಿನ ಫಲಿತಾಂಶವನ್ನು ಪ್ರಕಟಿಸಲಿದೆ. ಇಂದು ಕೂಡ ಐಸಿಐಸಿಐ ಬ್ಯಾಂಕಿನ ಷೇರಿನ ಬೆಲೆಯು ಋಣತ್ಮಾಕವಾಗಿಯೇ ಅಂತಿಮಗೊಂಡಿದೆ.

ಶನಿವಾರ ಫಲಿತಾಂಶ ಪ್ರಕಟಗೊಂಡ ಮೇಲೆ, ಮುಂದಿನ ಸೋಮವಾರದಂದು ಬ್ಯಾಂಕಿನ ಫಲಿತಾಂಶದ ಪ್ರಭಾವ ಯಾವ ರೀತಿ ಪರಿಣಾಮ ಬೀರುತ್ತದೋ ಕಾದು ನೋಡಬೇಕಿದೆ.

ಕಳೆದ ಒಂದೆರಡು ದಿನದಲ್ಲಿ ಮಾರುಕಟ್ಟೆಯು ಚೇತರಿಕೆ ಕಂಡಿದೆ. ಯಾವ ಹೂಡಿಕೆ ದಾರರೆಲ್ಲಾ ಮಾರುಕಟ್ಟೆಯು ಕೆಳಗೆ ಬೀಳುತ್ತದೆ ಎಂದು ಊಹಿಸಿ ತಮ್ಮ ‍ಷೇರುಗಳನ್ನು ಮಾರಾಟ ಮಾಡಿದ್ದರೂ ಅವರೆಲ್ಲರೋ, ಕಳೆದೆರಡು ದಿನದಿಂದ ಬಿಕ್ಕಟಿಗೆ ಸಿಲುಕ್ಕಿಕೊಂಡಿದ್ದಾರೆ ಎನ್ನುವುದು ಮಾರುಕಟ್ಟೆಯ ತಜ್ಞರ ಅಭಿಪ್ರಾಯ.

ಮಾರುಕಟ್ಟೆಯಲ್ಲಿ ನಾಳೆ ಅಂದರೆ ಗುರುವಾರ ವಾರಾಂತ್ಯದ ಕಾಂಟ್ರಾಕ್ಟಗಳ ಅಂತಿಮ ದಿನವಾಗಿದೆ. ಜಾಗತಿಕ ಮಾರುಕಟ್ಟೆಯ ಪ್ರಭಾವ, ಅದರ ಅವಲಂಭನೆ, ದಿಡೀರನೆ ಬರುವ ಸುದ್ದಿಗಳನ್ನು ತಿಳಿದುಕೊಂಡು ಹೂಡಿಕೆದಾರರು ‍ಮಾರುಕಟ್ಟೆಯಲ್ಲಿ ವ್ಯವಹರಿಸಬೇಕಿದೆ. ‍‍‍

ಇಂದಿನ ಮಾರುಕಟ್ಟೆಯ ಪರಿಸ್ಥಿತಿ ಹೇಗಿದೆ ಎಂದರೆ, ಸಣ್ಣ ಸಣ್ಣ ಘಟನಾವಳಿಗಳು, ಹೂಡಿಕೆದಾರರನ್ನು ಬಹುಬೇಗ ಗಲಿಬಿಲಿಗೊಳ್ಳುವ ಪರಿಸ್ಥಿತಿ ಬಂದೊದಗಿದೆ. ಇರುವ ಹಣದಲ್ಲೇ ಹಂತ ಹಂತವಾಗಿ ಹೂಡಿಕೆ ಮಾಡುವುದು ಸದ್ಯಕ್ಕೆ ಸಾಮಾನ್ಯ ಹೂಡಿಕೆದಾರರು ಕಂಡುಕೊಂಡಿರುವ ಮಾರ್ಗ.

ಕ್ಷಣಾಮಾತ್ರದಲ್ಲೇ ಅತ್ಯಂತ ಶ್ರೀಮಂತನಾಗಬೇಕೆನ್ನುವವರು ಬಹು ಬೇಗ ಗಲಿಬಿಲಿಗೊಳಗಾಗಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಪಟ್ಟುಗಳಿಗೆ ಹಿಡಿತಕ್ಕೆ ಸಿಕ್ಕಿಕೊಂಡಿರುವ ನಿದರ್ಶನಗಳೇ ಹೆಚ್ಚಾಗಿದೆ. ಮಂದಿನ ದಿನಗಳಲ್ಲಿ ಮಾರುಕಟ್ಟೆಯ ಒಳಹುಗಳು ಮತ್ತು ಕರಾಳತೆಗಳು, ಧನಾತ್ಮಕವಾಗಿರುವ ಅಂಶಗಳನ್ನು ತಿಳಿದುಕೊಳ್ಳೋಣ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!