Tuesday, November 24, 2026

ಪ್ರಾಯೋಗಿಕ ಆವೃತ್ತಿ

ಪರೀಕ್ಷೆಯ ಸಮಯದಲ್ಲಿ 10 ನೇ ತರಗತಿ ವಿದ್ಯಾರ್ಥಿ ಬಾಲಾಜಿ ತಂದೆ ನಿಧನ

ಮಂಡ್ಯ ತಾಲ್ಲೂಕಿನ ಚಿಕ್ಕ ಮಂಡ್ಯ ಸರ್ಕಾರಿ ಪ್ರೌಢಶಾಲೆಯ 10 ನೇ ತರಗತಿ ವಿದ್ಯಾರ್ಥಿ, ಚಿಂದಗಿರಿ ದೊಡ್ಡಿ ಗ್ರಾಮದ ಬಾಲಾಜಿ ಅವರ ತಂದೆ ಮಹೇಶ್ ನಿನ್ನೆ ಸಂಜೆ ಅನಿರೀಕ್ಷಿತವಾಗಿ ನಿಧನರಾದಾಗಿದ್ದಾರೆ.  ಬಾಲಾಜಿ ಈಗಾಗಲೇ ಎರಡು ವಿಷಯಗಳಲ್ಲಿ ಪರೀಕ್ಷೆಗಳನ್ನು ಪೂರ್ಣಗೊಳಿಸಿ, ಇಂದು ತಮ್ಮ ಇಂಗ್ಲಿಷ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಅವರ ತಂದೆಯ ಅಕಾಲಿಕ ಮರಣದ ಆಘಾತಕಾರಿ ಘಟನೆ ಜರುಗಿದೆ.

ಬಾಲ್ಯದಲ್ಲಿಯೇ ಅವರು ತಮ್ಮ ತಾಯಿಯನ್ನು ಕಳೆದುಕೊಂಡಿದ್ದರಿಂದ ತಂದೆಯ ಆಕಾಲಿಕ ಮರಣದ ಸುದ್ದಿ ಇನ್ನಷ್ಟು ಘಾಸಿಯಾಗಿದೆ. ಕುಟುಂಬದ  ಆಧಾರಸ್ತಂಭವಾಗಿದ್ದ ಅವರ ತಂದೆಯ ಹಠಾತ್ ಮರಣವು ಯುವ ವಿದ್ಯಾರ್ಥಿಯನ್ನು ಅವರ ಶೈಕ್ಷಣಿಕ ಪ್ರಯಾಣದ ಅತ್ಯಂತ ನಿರ್ಣಾಯಕ ಹಂತದಲ್ಲಿ ಘಟಿಸಿದೆ.

ಇಂದು ಬೆಳಿಗ್ಗೆ, ಚಿಕ್ಕ ಮಂಡ್ಯ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಚ್.ಎನ್. ದೇವರಾಜು, ಎಸ್‌ಡಿಎಂಸಿ ಅಧ್ಯಕ್ಷ ಸಿ.ಎಂ. ಮಹೇಶ್ ಮತ್ತು ಹಲವಾರು ಶಿಕ್ಷಕರು – ಬಸವರಾಜು, ಅಣ್ಣೇಗೌಡ, ರವಿಶಂಕರ್ –  ಸಹಪಾಠಿಗಳೊಂದಿಗೆ ಬಾಲಾಜಿ ಅವರ ಮನೆಗೆ ಭೇಟಿ ನೀಡಿದರು. ಈ ಕಷ್ಟದ ಸಮಯದಲ್ಲಿ ವಿದ್ಯಾರ್ಥಿಯನ್ನು ಬೆಂಬಲಿಸುವುದು ಮತ್ತು ಅವನ ಮನೋಸ್ಥೈರ್ಯವನ್ನು ಹೆಚ್ಚಿಸುವುದು ಅವರ ಪ್ರಾಥಮಿಕ ಗುರಿಯಾಗಿತ್ತು. ಬಾಲಾಜಿಯ ಶಿಕ್ಷಣದ ಮಹತ್ವ ಮತ್ತು ಅವನ ಭವಿಷ್ಯದಲ್ಲಿ ಪರೀಕ್ಷೆಗಳು ವಹಿಸುವ ಮಹತ್ವದ ಪಾತ್ರವನ್ನು  ತಿಳಸಿದ ಅವರು, ಅವನ ಪರೀಕ್ಷೆಗಳನ್ನು ಪೂರ್ಣಗೊಳಿಸಲು ಪ್ರೋತ್ಸಾಹಿಸಿದರು ಮತ್ತು ಅವನು ಪರೀಕ್ಷೆಯನ್ನು ಬರೆದ ನಂತರ ಅಂತ್ಯ ಸಂಸ್ಕಾರ ಮಾಡುವಂತೆ ಸಂಬಂಧಿಕರಿಗೆ ಮನ ಮನವೊಲಿಸಲಾಯಿತು.

ಮಂಡ್ಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ (ಸುಭಾಷ್ ನಗರ 6ನೇ ಕ್ರಾಸ್) ಏಕ ಪೋಷಕ, ಅಥವಾ ಅನಾಥ  ಮಕ್ಕಳಿಗೆ ಪ್ರತಿ ತಿಂಗಳು 4000  ರೂ ನಂತೆ 3 ವರ್ಷಗಳ ಕಾಲ 18 ವರ್ಷಗಳ ಒಳಗಿನ ಮಕ್ಕಳಿಗೆ ನೀಡಲಾಗುತ್ತದೆ.

ಈ ಸಂಬಂಧ, ಮಂಡ್ಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ಅರ್ಜಿ ಸಲ್ಲಿಸಿ, ಮಗುವಿನ ಮುಂದಿನ ಭವಿಷ್ಯಕ್ಕೆ ಪ್ರೋತ್ಸಾಹ ನೀಡುವ  ದೃಷ್ಟಿಯಿಂದ, ಮಕ್ಕಳಾ ರಕ್ಷಣಾ ಘಟಕವನ್ನು ಮೇಲಿನ ವಿಳಾಸದಲ್ಲಿ ಸೂಚಿಸಿರುವಂತೆ ಸಂಪರ್ಕಿಸಬಹುದಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ