Friday, September 20, 2024

ಪ್ರಾಯೋಗಿಕ ಆವೃತ್ತಿ

ಮಧ್ಯಪ್ರದೇಶ| NEET ಫಲಿತಾಂಶದ ಬೆನ್ನಲ್ಲೇ ವಿದ್ಯಾರ್ಥಿನಿ ಆತ್ಮಹತ್ಯೆ

ರಾಷ್ಟ್ರೀಯ ಅರ್ಹತಾ ಪರೀಕ್ಷೆ ಬೆನ್ನಲ್ಲೇ ಮಧ್ಯಪ್ರದೇಶದ ರೇವಾದಲ್ಲಿ 18 ವರ್ಷದ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜೂ.4ರಂದು ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಮಹಡಿಯಿಂದ ಬಿದ್ದು ಬಾಗೀಶಾ ತಿವಾರಿ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ವರ್ಷದ ಆರಂಭದಿಂದ ಕೋಟಾದಲ್ಲಿ ಇಂತಹ 10 ಆತ್ಮಹತ್ಯೆ ಪ್ರಕರಣ ದಾಖಲಾಗಿವೆ. 2023 ರಲ್ಲಿ, ರಾಜಸ್ಥಾನ ಕೋಟಾದಲ್ಲಿ 26 ಆತ್ಮಹತ್ಯೆ ಪ್ರಕರಣಗಳುಗಳು ದಾಖಲಾಗಿದ್ದವು. ಈ ವರ್ಷ ಇಂತಹ ಪ್ರಕರಣಗಳು ಅಧಿಕವಾಗಿವೆ.

ವಿದ್ಯಾರ್ಥಿನಿ ಬಗೀಶಾ ಕಳೆದ ಮೂರು ವರ್ಷಗಳಿಂದ ನೀಟ್‌ಗೆ ತಯಾರಿ ನಡೆಸುತ್ತಿದ್ದರು ಮತ್ತು ಜೆಇಇ ಆಕಾಂಕ್ಷಿಯಾಗಿದ್ದ ಈಕೆ, ತನ್ನ ತಾಯಿ ಮತ್ತು ಕಿರಿಯ ಸಹೋದರನೊಂದಿಗೆ NEET ತರಬೇತಿ ಪಡೆಯುವುದಕ್ಕಾಗಿ ಒಂದು ವರ್ಷದ ಹಿಂದೆ ಕೋಟಾಕ್ಕೆ ಬಂದಿದ್ದರು. ಅಲ್ಲಿನ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸವಾಗಿದ್ದರು.  NEET ಫಲಿತಾಂಶದಲ್ಲಿ 720ಕ್ಕೆ 320 ಅಂಕ ಗಳಿಸಿ ನಿರಾಸೆಗೊಂಡ ಹಿನ್ನಲೆಯಲ್ಲಿ ಆಕೆ, 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆಕೆಯ ತಂದೆ ವಿನೋದ್ ತಿವಾರಿ, PWD ಇಂಜಿನಿಯರ್ ಆಗ ರೇವಾದಲ್ಲಿದ್ದರು. ಅವರು ಫಲಿತಾಂಶದ ನಂತರ ಆಕೆಯೊಂದಿಗೆ ಫೋನ್‌ನಲ್ಲಿ ಮಾತನಾಡಿ, ಫಲಿತಾಂಶದ ಬಗ್ಗೆ ಚಿಂತಿಸಬೇಡ, ಖಾಸಗಿ ಕಾಲೇಜಿಗೆ ಸೇರಬಹುದು ಎಂದು ಧೈರ್ಯ ಹೇಳಿದ್ದರು. ಆದರೆ ಆನಂತರ ಆಕೆ ಆತ್ಮಹತ್ಯೆ ಮಾಡಿಕೊಂಡರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!