Thursday, September 19, 2024

ಪ್ರಾಯೋಗಿಕ ಆವೃತ್ತಿ

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಂ.ವಿ. ರಮಣ ಮದ್ದೂರಿಗೆ ಭೇಟಿ

ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಅವರು ಇಂದು ಬೆಳಿಗ್ಗೆ ಮೈಸೂರಿಗೆ ತೆರಳುವಾಗ ಮಾರ್ಗಮಧ್ಯೆ ಮದ್ದೂರಿನ ಪ್ರವಾಸಿ ಮಂದಿರಕ್ಕೆ ಆಗಮಿಸಿದರು. ಮುಖ್ಯ ನ್ಯಾಯಮೂರ್ತಿ ರಮಣ ಅವರು ಪ್ರವಾಸಿ ಮಂದಿರಕ್ಕೆ ಆಗಮಿಸಿದಾಗ ಪೊಲೀಸ್ ಇಲಾಖೆ ವತಿಯಿಂದ ನೀಡಿದ ಗಾಡ್ ಆಫ್ ಹಾನರ್ ಸ್ವೀಕರಿಸಿದರು.

ಪ್ರವಾಸಿ ಮಂದಿರಕ್ಕೆ ಆಗಮಿಸಿದ ರಮಣ ಅವರನ್ನು ಜಿಲ್ಲಾ ನ್ಯಾಯಾಧೀಶರು, ಜೆಎಂಎಫ್ ಸಿ ನ್ಯಾಯಾಧೀಶರು,ಜಿಲ್ಲಾಧಿಕಾರಿ,ವಕೀಲರು ಪುಷ್ಪಮಾಲೆ ಹಾಕಿ ಸ್ವಾಗತಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ರಮಣ ಅವರು ಜಿಲ್ಲೆಯ ನ್ಯಾಯಾಲಯಗಳ‌ ಬಗ್ಗೆ ಮಾಹಿತಿ ಪಡೆದುಕೊಂಡರು.

ಜಿಲ್ಲೆಯಲ್ಲಿರುವ ನ್ಯಾಯಾಲಯಗಳ ಸಂಖ್ಯೆ, ಪ್ರಕರಣಗಳ ಸಂಖ್ಯೆ,ಯಾವ ಯಾವ ಪ್ರಕರಣಗಳಿವೆ. ಕ್ರಿಮಿನಲ್ ಪ್ರಕರಣಗಳು ಎಷ್ಟು? ಸಿವಿಲ್ ಪ್ರಕರಣಗಳು ಎಷ್ಟಿವೆ? ನ್ಯಾಯಾಲಯ ಏನಾದರೂ ಕೊರತೆಯಿದೆಯಾ ನಮ್ಮಿಂದ ಏನಾದರೂ ಆಗಬೇಕಾದ ಬಗ್ಗೆ ತಿಳಿಸಿ ಎಂದು ಕೇಳಿದರು.

ಇಲ್ಲಿಂದ ಯಾರಾದರೂ ಹೈಕೋರ್ಟಿಗೆ, ಸುಪ್ರೀಂಕೋರ್ಟಿಗೆ ನ್ಯಾಯಾಧೀಶರು ಬಂದಿದ್ದಾರೆ ಎಂದು ಪ್ರಶ್ನಿಸಿದರು.

ಇದಕ್ಕೆ ಹಿರಿಯ ವಕೀಲರುಗಳು ಮದ್ದೂರು ತಾಲ್ಲೂಕು ಮಟ್ಟದ ನ್ಯಾಯಾಲಯವಾಗಿದೆ. ಇಲ್ಲಿ 7 ನ್ಯಾಯಾಲಯಗಳಿದ್ದು,ಇಲ್ಲಿ 135 ವಕೀಲರು ವೃತ್ತಿಪರ ಕೆಲಸ ಮಾಡುತ್ತಿದ್ದಾರೆ. ಮುಖ್ಯವಾಗಿ ನ್ಯಾಯಾಲಯ ಕಟ್ಟಡ ಚಿಕ್ಕದಾಗಿದ್ದು, ವಿಶಾಲವಾದ ದೊಡ್ಡ ಕಟ್ಟಡ ಆಗಬೇಕಾಗಿದೆ. ಇಲ್ಲಿ ಸಿವಿಲ್,ಕ್ರಿಮಿನಲ್ ಸೇರಿದಂತೆ ಎಲ್ಲಾ ರೀತಿಯ ಪ್ರಕರಣಗಳಿವೆ ಎಂದು ಮಾಹಿತಿ ನೀಡಿದರು.

ಇಲ್ಲಿಂದ ಹಿಂದೆ ವೃತ್ತಿ ಮಾಡಿದ್ದ ನ್ಯಾಯಾಧೀಶರಾದ ವೆಂಕಟರಮಣರವರು ನಿವೃತ್ತರಾಗಿದ್ದಾರೆ. ಅವರ ಮಗಳಾದ ಶ್ರೀಮತಿ ನಾಗರತ್ನ ಅವರು ಮಂಡ್ಯದರಾಗಿದ್ದು ಸುಪ್ರೀಂಕೋರ್ಟಿನಲ್ಲಿ ನ್ಯಾಯಾಧೀಶರಾಗಿದ್ದಾರೆ. ಅದಲ್ಲದೆ ಮಂಡ್ಯದಿಂದ ಎ.ಜೆ ಸದಾಶಿವ. ಮಲ್ಲಿಕಾರ್ಜುನರವರು ಸುಪ್ರೀಂ ಕೋರ್ಟಿನಲ್ಲಿ ನ್ಯಾಯಾಧೀಶರಾಗಿದ್ದರು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸೈನಿಕ ಸಿಪಾಯಿ ಶ್ರೀನಿವಾಸ್ ರವರು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಸನ್ಮಾನ್ಯ ಶ್ರೀ ಎನ್.ವಿ. ರಮಣ ಹಾಗೂ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ.ಜೆ.ಶಂಕರೇಗೌಡ ಅವರಿಗೆ ಮಾಲಾರ್ಪಣೆ ಮಾಡಿ ಅಭಿನಂದಿಸಿದರು.

ಅವರನ್ನು ಉದ್ಯಮಿಗಳಾದ ಬಿ.ವಿಜಯ್ ಕುಮಾರ್ ಗುರೂಜಿಯವರು ಮುಖ್ಯ ನ್ಯಾಯಮೂರ್ತಿ ವಿ.ಎನ್. ರಮಣ ಅವರಿಗೆ ಸಿಪಾಯಿ ಶ್ರೀನಿವಾಸ್ ಅವರನ್ನು ಪರಿಚಯಿಸಿ ಇವರು ಸೈನಿಕರಾಗಿದ್ದರು.ಈಗ ನಿವೃತ್ತರಾಗಿ ಹೋಟೆಲ್ ಉದ್ಯಮವನ್ನು ಹಾಗೂ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ ಎಂದಾಗ, ನೀವು ನಿವೃತ್ತರಾಗಿ ಮಾಡುತ್ತಿರುವ ಕೆಲಸ ಸಮಾಜಮುಖಿಯಾಗಿರಲಿ ಎಂದು ರಮಣ ಅವರು ಹಾರೈಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶರಾದ ಶ್ರೀಮತಿ ರಮಾ,ಮದ್ದೂರು ಹಿರಿಯ ನ್ಯಾಯಾಧೀಶರಾದ ವಿದ್ಯಾ, ನ್ಯಾಯಾಧೀಶರಾದ ಕಿರಣ್,ಜಿಲ್ಲಾಧಿಕಾರಿ ಅಶ್ವತಿ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಉಪವಿಭಾಗಾಧಿಕಾರಿ ಐಶ್ವರ್ಯ, ತಹಶೀಲ್ದಾರ್ ನರಸಿಂಹಮೂರ್ತಿ,ವಕೀಲರ ಸಂಘದ ಅಧ್ಯಕ್ಷ ಶ್ರೀ ಸತ್ಯ,ಹಿರಿಯ ವಕೀಲರಾದ ಬಾಲರಾಜು. ಎಂ.ಎನ್ ಶಿವಣ್ಣ. ಪ್ರಶಾಂತ್. ಮಲ್ಲೇಶ್. ಶಿವಣ್ಣ,ಕೆ.ಬಿ.ನವೀನ್, ಕುಮಾರ್,ಜೈರಾಮ್, ಮಹೇಶ್,ದಯಾನಂದ,ವೆಂಕಟೇಶ್,ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಪೊಲೀಸ್ ಇಲಾಖೆ ಅಧಿಕಾರಿಗಳಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!