Friday, September 20, 2024

ಪ್ರಾಯೋಗಿಕ ಆವೃತ್ತಿ

‘ಇಂಡಿಯಾ’ ಎಂಬುದು ಒಬ್ಬ ವ್ಯಕ್ತಿಗೆ ಮಾತ್ರ ಇಷ್ಟವಾಗುತ್ತಿಲ್ಲ: ಖ್ಯಾತ ಪತ್ರಕರ್ತೆ ಸುಪ್ರಿಯಾ ಶ್ರೀನಾಟೆ

ಪ್ರಸ್ತುತ ಸಂದರ್ಭದಲ್ಲಿ ಭಾರತ ಎಂದರೆ ಯಾವುದು? ಕೆಲವರಿಗೆ ʼಇಂಡಿಯಾʼ ಎಂಬ ಪದವನ್ನೇ ಕೇಳಲು ಸಾಧ್ಯವಿಲ್ಲ. ಇಂಡಿಯಾ ಎಂಬ ಹೆಸರು ಸಂವಿಧಾನದಿಂದ ದೊರಕಿದೆ. ಆದರೆ ಇಂದು ʼಭಾರತ್ʼ ಎಂದು ಬದಲಿಸುವ ಪ್ರಯತ್ನ ನಡೆಯುತ್ತಿದೆ. ಇಂದಿನ ಜಿ20 ಸಮಾವೇಶದಲ್ಲೂ ದ್ರೌಪದಿ ಮುರ್ಮು ಅವರು ಅದನ್ನೇ ಪುನರುಚ್ಛರಿಸಿದ್ದಾರೆ. ಇದನ್ನು ಒಪ್ಪಲಾಗದು ಎಂದು ಖ್ಯಾತ ಪತ್ರಕರ್ತೆ ಸುಪ್ರಿಯಾ ಶ್ರೀನಾಟೆ ಅಭಿಪ್ರಾಯ ಪಟ್ಟರು.

ಬೆಂಗಳೂರಿನಲ್ಲಿ ನಡೆದ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ನೆನಪಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ವಿ ದ ಪೀಪಲ್‌ ಆಫ್‌ ಇಂಡಿಯಾ, ಹಮ್‌ ಭಾರತ್‌ ಕೆ ಲೋಗ್‌ ಎಂಬುದು ಸಂವಿಧಾನದ ಕೊಡುಗೆ. ಇದನ್ನು ಒಬ್ಬ ಮನುಷ್ಯ ಒಪ್ಪುವುದಿಲ್ಲ ಎಂಬ ಕಾರಣಕ್ಕೆ ನಾವು ತೆಗೆದುಹಾಕಲಾಗದು. ಒಬ್ಬ ವ್ಯಕ್ತಿ ತನ್ನ ಅಭಿಪ್ರಾಯಕ್ಕೆ ವಿರುದ್ಧ ಇರುವವರನ್ನು ಸಹಿಸುವುದಿಲ್ಲ ಎಂದರೆ, ಆತನಿಗೆ ಈ ದೇಶದ ಜೊತಗೆ ಏನೋ ಸಮಸ್ಯೆ ಇದೆ ಎಂದರ್ಥ. ನಾನು ನನ್ನ ತಾಯಿಯನ್ನು ಅಮ್ಮ ಎಂದು ಕರೆಯುತ್ತೇನೆ. ಕೆಲವರು ಮಾಯಿ ಎನ್ನಬಹುದು ಅಥವಾ ಬೇರೇನೋ ಕರೆಯಬಹುದು. ಅದನ್ನು ಬದಲಿಸುವ ಉದ್ಧಟತನ ಯಾರು ತೋರಿಸುತ್ತಾರೆ” ಎಂದು ಇಂಡಿಯಾ ಎಂಬ ಹೆಸರನ್ನು ಭಾರತ್ ಎಂದು ಬದಲಿಸುವ ಕೇಂದ್ರ ಸರ್ಕಾರದ ಹುನ್ನಾರದ ವಿರುದ್ಧ ಕಿಡಿಕಾರಿದರು.

“ಭಾರತ ಎಂಬುದು ಸಾವಿರಾರು ವರ್ಷಗಳ ಇತಿಹಾಸವಿರುವ ಉಜ್ವಲವಾದ ದೇಶ. ಇಲ್ಲಿ ನದಿಗಳಿವೆ, ನಾಲೆಗಳಿವೆ, ಜನರಿದ್ದಾರೆ, ರಾಜ್ಯಗಳಿವೆ. ಇವೆಲ್ಲವೂ ಸೇರಿ ಭಾರತ. ಈ ದೇಶ ಕಾರ್ಮಿಕರಿಗೆ ಸೇರಿದ್ದು, ರೈತರಿಗೆ ಸೇರಿದ್ದು, ವಿದ್ಯಾರ್ಥಿಗಳಿಗೆ ಸೇರಿದ್ದು, ಮಹಿಳೆಯರಿಗೆ ಸೇರಿದ್ದು. ಒಬ್ಬ ವ್ಯಕ್ತಿ ಅದನ್ನು ತನ್ನಿಷ್ಟದಂತೆ ನಡೆಸಲು ಸಾಧ್ಯವಿಲ್ಲ” ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!