Thursday, April 18, 2024

ಪ್ರಾಯೋಗಿಕ ಆವೃತ್ತಿ

ಮೇಲುಕೋಟೆ| ಶಿಕ್ಷಕಿ ದೀಪಿಕಾ ಕೊಲೆ ಪ್ರಕರಣ: ಆರೋಪಿ ನಿತಿಶ್ ಬಂಧನ

ಮೇಲುಕೋಟೆಯ ಪ್ರಸಿದ್ದ ಯೋಗಾನರಸಿಂಹ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ನಡೆದ ಶಿಕ್ಷಕಿ ದೀಪಿಕಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಿತಿನ್ ಎಂಬುವನನ್ನು ಮೇಲುಕೋಟೆ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಪಾಂಡವಪುರ ತಾಲ್ಲೂಕಿನ ಮಾಣಿಕ್ಯನಹಳ್ಳಿಯವನಾದ ನಿತಿಶ್ ಶಿಕ್ಷಕಿ ಪರಿಚಿತನಾಗಿ ಒಡನಾಟ ಹೊಂದಿದ್ದ. ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲಿ ಇವರಿಬ್ಬರು ಜಗಳವಾಡಿದ್ದ ವಿಡಿಯೋವನ್ನು ಪ್ರವಾಸಿಗರೊಬ್ಬರು ಚಿತ್ರೀಕರಣ ಮಾಡಿ ಪೊಲೀಸರಿಗೆ ನೀಡಿದ್ದು, ಅದನ್ನು ಪ್ರಮುಖ ಸಾಕ್ಷಿಯನ್ನಾಗಿ ಪರಿಗಣಿಸಿರುವ ಪೊಲೀಸರು ನಿತಿನ್ ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಕಳೆದ ಜ.20ರಂದು ಮೇಲುಕೋಟೆ ಎಸ್‌ಇಟಿ ಶಾಲೆ ಹೋಗಿದ್ದ ದೀಪಿಕಾ ಮರಳಿ ಮನೆಗೆ ಬಂದಿರಲಿಲ್ಲ. ಇದರಿಂದಾಗಿ ಆಕೆಯ ಕುಟುಂಬದವರು ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರಿಗೆ ಮೇಲುಕೋಟೆ ಬೆಟ್ಟದ ತಪ್ಪಲಲ್ಲಿ ಸ್ಕೂಟರ್ ಅವರ ಸ್ಕೂಟರ್ ಕಂಡು ಬಂದಿತ್ತು. ಕೊಲೆ ಮಾಡಿದ ದುರುಳರು ಗುಂಡಿ ತೆಗೆದು ಆಕೆಯನ್ನು ಹೂತು ಹಾಕಿರುವುದು ಬೆಳಕಿಗೆ ಬಂದಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!