Wednesday, July 24, 2024

ಪ್ರಾಯೋಗಿಕ ಆವೃತ್ತಿ

ಸುಣ್ಣ-ಬಣ್ಣ ಕಂಡ ಈಶ್ವರ ದೇವಾಲಯ!

ಮದ್ದೂರು ತಾಲ್ಲೂಕಿನ ಹೊಸಕೆರೆ ಗ್ರಾಮದ ಇತಿಹಾಸ ಪ್ರಸಿದ್ಧ ಈಶ್ವರ ದೇವಾಲಯ ಆವರಣವನ್ನು ಶುಚಿಗೊಳಿಸಿ, ದೇಗುಲಕ್ಕೆ ಸುಣ್ಣ-ಬಣ್ಣ ಬಳಿಯುವ ಕಾರ್ಯಕ್ಕೆ ಕೆಚ್ಚೆದೆಯ ಕನ್ನಡತಿ ಅನು ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ತಂಡ ಕರ್ನಾಟಕ ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿದ್ದು, ಪುರಾತನ ದೇಗುಲಗಳು ಮತ್ತು ಸರಕಾರೀ ಶಾಲೆಗಳಿಗೆ ಕಾಯಕಲ್ಪ ನೀಡುವ ಕೆಲಸವನ್ನು ಮಾಡುತ್ತಿದೆ ಎಂದರು.

ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಈ ಕಾರ್ಯ ಮಾಡುತ್ತಿದ್ದು ರಾಜ್ಯದ ಸರಕಾರಿ ಶಾಲೆಗಳನ್ನು ಉಳಿಸುವುದು, ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಸ್ವಚ್ಚತೆಯನ್ನು ಕೈಗೊಳ್ಳುವುದು ನಮ್ಮ ಆದ್ಯತೆಯಾಗಿದೆ. ಕೆರೆ- ಕಟ್ಟೆ, ಕಾಲುವೆಗಳು, ಬಾವಿಗಳನ್ನು ಸ್ವಚ್ಛ ಮಾಡಲಾಗುತ್ತಿದೆ.

ಪುರಾತನ ಕಾಲದ ಕೆರೆಕಟ್ಟೆ ದೇಗುಲಗಳನ್ನ ಉಳಿಸದಿದ್ದರೆ ಭವಿಷ್ಯದಲ್ಲಿ ಮಕ್ಕಳಿಗೆ ಚಿತ್ರಪಟಗಳನ್ನು ತೋರಿಸಬೇಕಾದ ಪರಿಸ್ಥಿತಿ ಬಂದೊದಗುತ್ತದೆ ಎಂದರು. ವಿವಿಧ ಜಿಲ್ಲೆಗಳ ತಂಡಗಳನ್ನು ಕಟ್ಟಿಕೊಂಡು ಇದೀಗ ಹತ್ತೊಂಬತ್ತು ಜಿಲ್ಲೆಗಳ ಪ್ರವಾಸ ಮಾಡಿ ಈ ಸೇವಾ ಕಾರ್ಯ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಅನು ಮತ್ತು ಅವರ ತಂಡದ ಸದಸ್ಯರನ್ನು ಕರಡಕೆರೆ ಯೋಗೇಶ್ ಅಭಿನಂದಿಸಿದರು. ರಾಘವೆಂದ್ರ, ಅಕ್ಷಯ್, ಮಲ್ಲಿಕಾರ್ಜುನ, ಬಸವರಾಜು,ಸಂತೋಷ್, ಎಚ್.ಎನ್. ದಯಾನಂದ್, ಸತೀಶ್, ರೇಣುಕಾ ಪ್ರಸಾದ್. ಸೇರಿದಂತೆ ಇತರರಿದ್ದರು.

ಇದನ್ನು ಓದಿ:ಸದ್ಯಕ್ಕೆ ಪಕ್ಷ ಸೇರ್ಪಡೆ ಮಾತೇ ಇಲ್ಲ : ಸುಮಲತಾ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!