ಪಾಕಿಸ್ತಾನ ಮತ್ತು ಕೆನಡಾ ಸೇರಿದಂತೆ ವಿದೇಶಗಳಲ್ಲಿ ನೆಲೆಸಿರುವ ದರೋಡೆಕೋರರು, ಭಯೋತ್ಪಾದಕ ಗುಂಪುಗಳು ಮತ್ತು ಮಾದಕವಸ್ತು ಕಳ್ಳಸಾಗಣೆದಾರರ ನಡುವಿನ ನಂಟಿನ ವಿರುದ್ಧ ಎನ್‌ಐಎ ಮಂಗಳವಾರ ಎಂಟು ರಾಜ್ಯಗಳ 76 ಸ್ಥಳಗಳಲ್ಲಿ ದಾಳಿ ನಡೆಸಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು ಸೇರಿದಂತೆ ನಗದು ₹1.5 ಕೋಟಿ ವಶಪಡಿಸಿಕೊಂಡಿದೆ ಎನ್ನಲಾಗುತ್ತಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಕ್ತಾರರು ಈ ದಾಳಿಗಳು ಆಗಸ್ಟ್ 2022 ರಿಂದ ಸಂಸ್ಥೆ ದಾಖಲಿಸಿದ ಮೂರು ಪ್ರಕರಣಗಳನ್ನು ಅಧರಿಸಿ ನಡೆದಿದೆ ಎಂದು ಹೇಳಿದ್ದಾರೆ
ಕೆಲವು ಕಬ್ಬಡಿ ಆಟಗಾರರು ಸೇರಿದಂತೆ ಹಲವಾರು ಜನರನ್ನು ಈ ಪ್ರಕರಣಗಳಲ್ಲಿ ಗುರುತಿಸಲಾಗಿದೆ ಮತ್ತು ಪ್ರಮುಖ ಉದ್ಯಮಿಗಳು ಮತ್ತು ವೃತ್ತಿಪರರಿಂದ ಉದ್ದೇಶಿತ ಹತ್ಯೆಗಳು ಮತ್ತು ಸುಲಿಗೆ ಸೇರಿದಂತೆ ಭಯೋತ್ಪಾದನೆ ಮತ್ತು ಇತರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.
ಮಹಾರಾಷ್ಟ್ರ ಬಿಲ್ಡರ್ ಸಂಜಯ್ ಬಿಯಾನಿ ಮತ್ತು ಅಂತರಾಷ್ಟ್ರೀಯ ಕಬ್ಬಡಿ ಆಟಗಾರ ಸಂದೀಪ್ ನಂಗಲ್ ಅಂಬಿಯಾ (ಕಳೆದ ವರ್ಷ ಪಂಜಾಬ್‌ನಲ್ಲಿ) ಹತ್ಯೆ ಸೇರಿದಂತೆ ಹಲವಾರು ಅಪರಾಧಗಳ ಸಂಚುಗಳನ್ನು ವಿವಿಧ ರಾಜ್ಯಗಳ ಜೈಲುಗಳಲ್ಲಿ ರೂಪಿಸಲಾಗಿದೆ ಮತ್ತು ವಿದೇಶದಲ್ಲಿರುವ ಸಂಘಟಿತ ಕಾರ್ಯಕರ್ತರಿಂದ ಮಾಡಿದ್ದಾರೆ ಎಂದು ತನಿಖೆ ತೋರಿಸುತ್ತಿದ್ದೆ ಎಂದು ವಕ್ತಾರರು ತಿಳಿಸಿದ್ದಾರೆ.
ಈ ದಾಳಿಯು ಐದನೆಯ ಸರಣಿಯಾದ್ದಗಿದ್ದು, ಇಂದಿನ ದಾಳಿಗಳನ್ನು ಪಂಜಾಬ್, ದೆಹಲಿ, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ನಡೆಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಈ ಗ್ಯಾಂಗ್‌ಗಳೊಂದಿಗೆ ಕೆಲಸ ಮಾಡುತ್ತಿರುವ ಶಸ್ತ್ರಾಸ್ತ್ರ ಪೂರೈಕೆದಾರರು ಮತ್ತು ಹವಾಲಾ ಆಪರೇಟರ್‌ಗಳ ಮೇಲೆ ಕೇಂದ್ರೀಕರಿಸಿದ ಈ ದಾಳಿಗಳು ಪಿಸ್ತೂಲ್, ರಿವಾಲ್ವರ್‌ಗಳು ಮತ್ತು ರೈಫಲ್‌ಗಳು ಸೇರಿದಂತೆ ಒಂಬತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ಮತ್ತು 1.5 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಹಲವು ದಾಖಲೆಗಳು, ಹಾರ್ಡ್ ಡ್ರೈವ್‌ಗಳು ಮತ್ತು ಮೊಬೈಲ್ ಫೋನ್‌ಗಳು ಸೇರಿದಂತೆ ದೋಷಾರೋಪಣೆಯ ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಪಂಜಾಬ್‌ನ ಅಬೋಹರ್, ಭಟಿಂಡಾ, ಮುಕ್ತಸರ್ ಸಾಹಬ್, ಮೊಗಾ, ಫಜಿಲ್ಕಾ, ಲುಧಿಯಾನ, ಮೊಹಾಲಿ, ಫಿರೋಜ್‌ಪುರ, ತರ್ನ್ ತರಣ್, ಲುಧಿಯಾನ, ಫರೀದ್‌ಕೋಟ್, ಸಂಗ್ರೂರ್ ಮತ್ತು ಜಲಂಧರ್ ಜಿಲ್ಲೆಗಳ 76 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.
ಈ ದಾಳಿಯು ಹರಿಯಾಣದ ಗುರುಗ್ರಾಮ್, ಯಮುನಾ ನಗರ, ರೋಹ್ಟಕ್, ಮಹೇಂದ್ರಗಢ, ಸಿರ್ಸಾ ಮತ್ತು ಜಜ್ಜರ್ ಜಿಲ್ಲೆಗಳಲ್ಲಿಯೂ ದಾಳಿಗಳನ್ನು ನಡೆಸಲಾಯಿತು; ರಾಜಸ್ಥಾನದ ಶ್ರೀ ಗಂಗಾ ನಗರ, ಸಿಕಾರ್, ಜೋಧಪುರ ಮತ್ತು ಜೈಪುರ ಜಿಲ್ಲೆಗಳು; ಉತ್ತರ ಪ್ರದೇಶದ ಬಾಗ್‌ಪತ್, ಬರೇಲಿ, ಪ್ರತಾಪ್‌ಗಢ, ಬುಲನ್‌ಶೆಹರ್, ಲಕ್ನೋ ಮತ್ತು ಪಿಲಿಭಿತ್; ಮಧ್ಯಪ್ರದೇಶದ ಉಜ್ಜಯಿನಿ ಮತ್ತು ರತ್ಲಂ ಜಿಲ್ಲೆಗಳು; ಮುಂಬೈನಲ್ಲಿ ಬೈಕುಲ್ಲಾ; ಗುಜರಾತಿನ ಗಾಂಧಿಧಾಮ; ಮತ್ತು ದ್ವಾರಕಾ, ದೆಹಲಿ/ಎನ್‌ಸಿಆರ್‌ನ ಮಧ್ಯ ಮತ್ತು ಹೊರ ಉತ್ತರ ಜಿಲ್ಲೆಗಳಲ್ಲಿ ನಡೆದಿದೆ
ಮುಕ್ತ್ಸರ್‌ನಲ್ಲಿರುವ ಗಿಡ್ಡರ್‌ಬಾಹಾದ ಲಖ್ವೀರ್ ಸಿಂಗ್, ಅಬೋಹರ್‌ನಲ್ಲಿ ನರೇಶ್, ಹರಿಯಾಣದ ನರ್ನಾಲ್‌ನಲ್ಲಿ ಸುರೇಂದರ್ ಅಲಿಯಾಸ್ ಚೀಕು, ಗುರುಗ್ರಾಮ್‌ನಲ್ಲಿ ಕೌಶಲ್ ಚೌಧರಿ ಮತ್ತು ಅಮಿತ್ ದಾಗರ್ ಮತ್ತು ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ಸುನಿಲ್ ರಾಠಿ ಅವರ ಸುತ್ತಮುತ್ತಲಿನ ಜಾಗಗಳಲ್ಲಿ ಶೋಧ ನಡೆಸಲಾಗಿದೆ.
ಕೆಲವು ಹವಾಲಾ ಆಪರೇಟರ್‌ಗಳು, ಕಬಡ್ಡಿ ಆಟಗಾರರು, ಶಸ್ತ್ರಾಸ್ತ್ರ ಪೂರೈಕೆದಾರರು, ಗನ್ ಹೌಸ್‌ಗಳು, ಉದ್ಯಮಿಗಳು ಮತ್ತು ಅವರಿಗೆ ಹಣವನ್ನು ನೀಡುತ್ತಿದ್ದವರ ಮೇಲೂ ದಾಳಿ ನಡೆಸಲಾಗಿದೆ.
ಭಾರತದಲ್ಲಿ ಪ್ರಮುಖ ದರೋಡೆಕೋರರಾಗಿದ್ದ ಅನೇಕ ಕ್ರಿಮಿನಲ್‌ಗಳು ಪಾಕಿಸ್ತಾನ, ಕೆನಡಾ, ಮಲೇಷ್ಯಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಿಗೆ ಪಲಾಯನ ಮಾಡಿದ್ದಾರೆ ಮತ್ತು ವಿವಿಧ ರಾಜ್ಯಗಳ ಜೈಲುಗಳಲ್ಲಿ ಇರುವ ಅಪರಾಧಿಗಳೊಂದಿಗೆ ಸೇರಿಕೊಂಡು ಅಲ್ಲಿಂದ ತಮ್ಮ ಅಪರಾಧಗಳನ್ನು ಪ್ಲಾನ್ ಮಾಡುತ್ತಿದ್ದಾರೆ ಎಂದು ತನಿಖೆಗಳು ತೋರಿಸಿವೆ.
ಈ ಗುಂಪುಗಳು ಉದ್ದೇಶಿತ ಹತ್ಯೆಗಳನ್ನು ನಡೆಸುತ್ತಿದ್ದವು ಮತ್ತು ಮಾದಕ ದ್ರವ್ಯ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆ, ಹವಾಲಾ ಮತ್ತು ಸುಲಿಗೆಗಳ ಮೂಲಕ ತಮ್ಮ ದುಷ್ಕೃತ್ಯಗಳಿಗೆ ಹಣವನ್ನು ಸಂಗ್ರಹಿಸುತ್ತಿದ್ದವು.
ಇಂತಹ ಭಯೋತ್ಪಾದಕ ಜಾಲಗಳನ್ನು ಮತ್ತು ಈ ಗುಂಪುಗಳಿಗೆ ನೀಡುತ್ತಿದ್ದ ಧನಸಹಾಯ ಮತ್ತು ಬೆಂಬಲ ನೀಡುತ್ತಿದ್ದವರನ್ನು ಬುಡ ಸಮೇತ ಕಿತ್ತುಹಾಕಲು ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.




