Friday, September 20, 2024

ಪ್ರಾಯೋಗಿಕ ಆವೃತ್ತಿ

”ದಿ ಕೇರಳ ಸ್ಟೋರಿ” ಚಿತ್ರದ ಕಲೆಕ್ಷನ್ ದಿನೇ ದಿನೇ ಕುಸಿತ

ಹೆಣ್ಣು ಮಕ್ಕಳ ಮತಾಂತರದ ಕಥಾವಸ್ತುವುಳ್ಳ ಇತ್ತೀಚೆಗೆ ಬಿಡುಗಡೆಯಾದ ‘ದಿ ಕೇರಳ ಸ್ಟೋರಿ’ ಸಿನಿಮಾದ ಕಲೆಕ್ಷನ್ ದಿನೇ ದಿನೇ ಕುಸಿತ ಕಾಣುತ್ತಿದ್ದು, ಈ ಚಿತ್ರದ ಬಗ್ಗೆ ಪ್ರೇಕ್ಷಕರು ಆಸಕ್ತಿ ವಹಿಸುತ್ತಿಲ್ಲ ಎಂಬ ವರದಿ ಈಗ ಬಯಲಾಗಿದೆ.

ಈ ಚಿತ್ರ ಮೂರನೇ ವಾರದಲ ಕಲೆಕ್ಷನ್ ಗಣನೀಯವಾಗಿ ಕುಸಿದಿದೆ. 19ನೇ ದಿನಕ್ಕೆ ಈ ಚಿತ್ರ ಕೇವಲ 3.50 ಕೋಟಿ ರೂಪಾಯಿ ಗಳಿಸಿದೆ. ಅಲ್ಲಿಗೆ, ಒಟ್ಟು ಕಲೆಕ್ಷನ್​ 206.97 ಕೋಟಿ ರೂಪಾಯಿ ಆಗಿದೆ. ಅದಾ ಶರ್ಮಾ (Adah Sharma) ನಟನೆಯ ಈ ಚಿತ್ರಕ್ಕೆ ಸುದೀಪ್ತೋ ಸೇನ್​ ನಿರ್ದೇಶನ ಮಾಡಿದ್ದಾರೆ.

  • ಚಿತ್ರದ ಕಲೆಕ್ಷನ್​ ವಿವರ
    1ನೇ ದಿನ: 8.03 ಕೋಟಿ ರೂ.
  • 2ನೇ ದಿನ: 11.22 ಕೋಟಿ ರೂ.
  • 3ನೇ ದಿನ: 16.40 ಕೋಟಿ ರೂ.
  • 4ನೇ ದಿನ: 10.07 ಕೋಟಿ ರೂ.
  • 5ನೇ ದಿನ: 11.14 ಕೋಟಿ ರೂ.
  • 6ನೇ ದಿನ: 12 ಕೋಟಿ ರೂ.
  • 7ನೇ ದಿನ: 12.50 ಕೋಟಿ ರೂ.
  • 8ನೇ ದಿನ: 12.23 ಕೋಟಿ ರೂ.
  • 9ನೇ ದಿನ: 19.50 ಕೋಟಿ ರೂ.
  • 10ನೇ ದಿನ: 23.75 ಕೋಟಿ ರೂ.
  • 11ನೇ ದಿನ: 10.30 ಕೋಟಿ ರೂ.
  • 12ನೇ ದಿನ: 9.65 ಕೋಟಿ ರೂ.
  • 13ನೇ ದಿನ: 8.03 ಕೋಟಿ ರೂ.
  • 14ನೇ ದಿನ: 7 ಕೋಟಿ ರೂ.
  • 15ನೇ ದಿನ: 6.60 ಕೋಟಿ ರೂ.
  • 16ನೇ ದಿನ: 9.15 ಕೋಟಿ ರೂ.
  • 17ನೇ ದಿನ: 11.50 ಕೋಟಿ ರೂ.
  • 18ನೇ ದಿನ: 4.50 ಕೋಟಿ ರೂ.
  • 19ನೇ ದಿನ: 3.50 ಕೋಟಿ ರೂ.

‘ದಿ ಕೇರಳ ಸ್ಟೋರಿ’ ಸಿನಿಮಾ 250 ಕೋಟಿ ರೂಪಾಯಿ ಕಲೆಕ್ಷನ್​ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸಾಧ್ಯವಾಗುವ ಲಕ್ಷಣ ಕಾಣಿಸುತ್ತಿಲ್ಲ. ಮೂರನೇ ವಾರದಲ್ಲಿ ಈ ಸಿನಿಮಾದ ಕಲೆಕ್ಷನ್ ತೀರ​ ಕ್ಷೀಣಿಸಿದೆ. ಪಶ್ಚಿಮ ಬಂಗಾಳದಲ್ಲಿ ಈ ಚಿತ್ರಕ್ಕೆ ಹೇರಲಾಗಿದ್ದ ನಿಷೇಧವನ್ನು ಹಿಂಪಡೆಯಲಾಗಿದ್ದರೂ ಅಲ್ಲಿನ ಚಿತ್ರಮಂದಿರಗಳ ಮಾಲೀಕರು ಈ ಚಿತ್ರ ಪ್ರದರ್ಶನಕ್ಕೆ ಆಸಕ್ತಿ ತೋರಿಸುತ್ತಿಲ್ಲ ಎಂದು ತಿಳಿದು ಬಂದಿದೆ.

2022ರಲ್ಲಿ ಬಿಡುಗಡೆ ಆಗಿದ್ದ ಕಾಶ್ಮೀರಿ ಹಿಂದೂಗಳ ಹತ್ಯೆ ಕುರಿತಾದದ್ದು ಎನ್ನಲಾದ ‘‘ದಿ ಕಾಶ್ಮೀರ್​ ಫೈಲ್ಸ್​’’ ಚಿತ್ರ  ಭಾರತೀಯ ಮಾರುಕಟ್ಟೆಯಲ್ಲಿ ಆ ಸಿನಿಮಾ 252 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!