Thursday, September 19, 2024

ಪ್ರಾಯೋಗಿಕ ಆವೃತ್ತಿ

ರೈತ ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ

ಜಮೀನು ಸರ್ವೆ ಮಾಡುವ ಸಂದರ್ಭದಲ್ಲಿ ರೈತ ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಾರೆಯಲ್ಲಿ ಚುಚ್ಚಿ ಎಂದು ಸರ್ವೆಯರ್ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ ರೈತರು ಸರ್ವೆಯರ್ ಅನ್ನು ತರಾಟೆಗೆ ತೆಗೆದುಕೊಂಡು ತಹಶೀಲ್ದಾರ್ ಅವರಿಗೆ ದೂರು ಸಲ್ಲಿಸಿದ ಘಟನೆ ಇಂದು ನಡೆದಿದೆ.

ಪಾಂಡವಪುರ ತಾಲ್ಲೂಕಿನ ಬೇವಿನಕುಪ್ಪೆ ಗ್ರಾಮದ ರೈತ ಮಹಿಳೆ ಅನುಸೂಯ ದಂಪತಿಗಳು ತಹಶೀಲ್ದಾರ್ ಕಚೇರಿಗೆ ಆಗಮಿಸಿ ಸರ್ವೇಯರ್ ಭಾಸ್ಕರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಅವಾಚ್ಯ ಶಬ್ಧಗಳಿಂದ ಬೈದುದಲ್ಲದೆ, ಹಾರೆಯಿಂದ ಚುಚ್ಚಿ ಎಂದು ಹೇಳುವ ನಿನಗೆ ಅಕ್ಕ ತಂಗಿಯರಿಲ್ವಾ ಎಂದೆಲ್ಲಾ ಪ್ರಶ್ನಿಸಿ ಕಣ್ಣೀರು ಹಾಕಿದರು.

ಪಾಂಡವಪುರ ತಾಲ್ಲೂಕಿನ ಬೇವಿನಕುಪ್ಪೆ ಗ್ರಾಮದ ಅನುಸೂಯ ಹಾಗೂ ಕೃಷ್ಣೇಗೌಡ ದಂಪತಿಗೆ ಸೇರಿದ ಸರ್ವೆ ನಂಬರ್ 43 ರಲ್ಲಿ ಇರುವ 21 ಗುಂಟೆ ಜಮೀನಿನಲ್ಲಿ ಕಬ್ಬು ಬೆಳೆ ಬೆಳೆದಿದ್ದು, ಈ ಜಮೀನು ವಿಷಯವಾಗಿ ನ್ಯಾಯಾಲಯದಲ್ಲಿ ಕೇಸು ದಾಖಲಾಗಿದ್ದರೂ ಸರ್ವೆ ಕೆಲಸಕ್ಕೆ ಬಂದ ಸರ್ವೆಯರ್ ಭಾಸ್ಕರ್ ಅವರು ಜಮೀನಿನ ಮಾಲೀಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಾರೆಯಲ್ಲಿ ಚುಚ್ಚಿ ಎಂದು ಹೇಳುವ ಮೂಲಕ ಬೆದರಿಕೆ ಹಾಕಿದರು.

ಇದರಿಂದ ನೊಂದ ಮಹಿಳೆ ಅನುಸೂಯ ಅವರು ಪಾಂಡವಪುರ ತಹಶೀಲ್ದಾರ್ ಕಚೇರಿಗೆ ಬಂದು ತಹಶೀಲ್ದಾರ್ ನಯನ ಅವರಿಗೆ ದೂರು ಸಲ್ಲಿಸಿದರು. ಈ ಬಗ್ಗೆ ವಿಚಾರಣೆ ನಡೆಸಿ, ಕ್ರಮ ಜರುಗಿಸುತ್ತೇನೆ ಎಂದು ನಯನವರು ಭರವಸೆ ನೀಡಿದರು. ನಂತರ ಸರ್ವೆಗೆ ತೆರಳಿದ್ದ ಸರ್ವೆಯರ್ ಭಾಸ್ಕರ್ ಅವರನ್ನು ವಾಪಸ್ ಬರುವಂತೆ ಸೂಚಿಸಿದರು.

ನೊಂದ ರೈತ ಮಹಿಳೆ ಅನುಸೂಯರವರಿಗೆ ಛಲವಾದಿ ಮಹಾಸಭಾ ಮುಖಂಡ ಆನುವಾಳು ಸುರೇಶ್ ಹಾಗೂ ಪರಿವರ್ತನ ಸೇವಾ ಸಂಸ್ಥೆ ಮುಖ್ಯಸ್ಥ ಲೋಕರಕ್ಷಕ ಸೇರಿದಂತೆ ಕಾರ್ಯಕರ್ತರು ಬೆಂಬಲ ಸೂಚಿಸಿ, ತಹಶೀಲ್ದಾರ್ ಜೊತೆ ಮಾತನಾಡಿ ಸರ್ವೆಯರ್ ಭಾಸ್ಕರ್ ವಿರುದ್ಧ ಕ್ರಮಕ್ಕಾಗಿ ಆಗ್ರಹಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!