Friday, September 20, 2024

ಪ್ರಾಯೋಗಿಕ ಆವೃತ್ತಿ

ದೋಸೆಪ್ರಿಯ ತೇಜಸ್ವಿ ಸೂರ್ಯ ಸುಳ್ಳು ಹೇಳುವುದನ್ನು ಯಾವ ಯುನಿವರ್ಸಿಟಿಯಲ್ಲಿ ಕಲಿತಿದ್ದು?

ದೋಸೆಪ್ರಿಯ ತೇಜಸ್ವಿ ಸೂರ್ಯ, ಸುಳ್ಳು ಹೇಳುವುದನ್ನು ಯಾವ ಯುನಿವರ್ಸಿಟಿಯಲ್ಲಿ ಕಲಿತಿದ್ದು? ನಂದಿನಿ ಎಂದರೆ ಮಾರುಕಟ್ಟೆಯ ಸರಕು ಮಾತ್ರವಲ್ಲ, ರೈತರ ಬೆವರಿನಿಂದ ಕಟ್ಟಿದ ಸ್ವಾಭಿಮಾನದ ಸಂಕೇತ. ಹಿಂದೆ ರೈತರ ಸಾಲ ಮನ್ನಾದಿಂದ ಉಪಯೋಗವಿಲ್ಲ ಎಂದ ತಮಗೆ ರೈತರ ಬಗ್ಗೆ ಕಿಂಚಿತ್ ಗೌರವ ಇಲ್ಲವೇ? ತಮಗೆ ಜನಪ್ರತಿನಿಧಿಯಾಗುವ ಕನಿಷ್ಠ ಯೋಗ್ಯತೆ ಇಲ್ಲ ಎಂದು ಕಾಂಗ್ರೆಸ್ ಟೀಕಿಸಿದೆ.

“>

ಅಮೂಲ್ ಹಾಗೂ ನಂದಿನಿ ಎರಡೂ ರೈತರ ಬೆವರಿನ ಪ್ರತಿಫಲದ ಸಂಸ್ಥೆಗಳೇ, ಗುಜರಾತಿನ ಜನರಿಗೆ ಅಮೂಲ್ ಹೇಗೆ ಸ್ವಾಭಿಮಾನದ ಸಂಕೇತವೋ, ಹಾಗೆಯೇ ನಂದಿನಿ ಕನ್ನಡಿಗರ ಸ್ವಾಭಿಮಾನ ಸಂಕೇತ ಹಾಗೂ ಬದುಕಿನ ಆಧಾರ. ತೇಜಸ್ವಿ ಸೂರ್ಯ ನಂದಿನಿಯನ್ನು ಗುಜರಾತಿನ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಿ ತೋರಿಸಲಿ, ಹಾಗೆ ಮಾಡಲು ಅವರ ಮಾಲೀಕ ಅಮಿತ್ ಶಾ ಬಿಡುವರೇ?

ಚುನಾವಣೆ ಸಮಯ ಬಳಸಿಕೊಂಡು ಜನರ ಗಮನಕ್ಕೆ ಬಾರದಂತೆ ರಾಜ್ಯದೊಳಗೆ ಬೇರೆ ಬೇರೆ ರೂಪದಲ್ಲಿ ನುಸುಳುವ ಪ್ರಯತ್ನ ನಡೆಯುತ್ತಿದೆ. ಇವರ ಪಾಲಿಗೆ ಕನ್ನಡಿಗರು ಎಂದರೆ ಇಷ್ಟೊಂದು ನಿಕೃಷ್ಟ ಭಾವನೆಯೇ? ರೈತರಿಗೆ ನೆರವಾಗಲು ಕರ್ನಾಟಕ ಹಾಲು ಒಕ್ಕೂಟವನ್ನು ಸ್ಥಾಪಿಸಿ ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಾಗಿದೆ ಎಂದು ಕಾಂಗ್ರೆಸ್ ಟ್ವೀಟಿಸಿದೆ. 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!