Friday, September 20, 2024

ಪ್ರಾಯೋಗಿಕ ಆವೃತ್ತಿ

ಟಿಪ್ಪು ಶ್ರೀರಂಗಪಟ್ಟಣದವನು- ಮೈಸೂರಿಗೆ ಏನು ಸಂಬಂಧ : ಪ್ರತಾಪ್ ಸಿಂಹ

ಮೈಸೂರು ಸಂಸದ ಪ್ರತಾಪ್ ಸಿಂಹ ಟಿಪ್ಪು ರೈಲಿನ ಹೆಸರನ್ನು ಒಡೆಯರ್ ಹೆಸರಿಗೆ ಬದಲಾಯಿಸಿರುವುದನ್ನು ಸಮರ್ಥಿಸಿಕೊಳ್ಳುವಾಗ ಟಿಪ್ಪು ಶ್ರೀರಂಗಪಟ್ಟಣದವನಾಗಿದ್ದು, ಮೈಸೂರಿಗೆ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ.

ಸಂಸದ ಪ್ರತಾಪ್ ಸಿಂಹ ಅವರು ಟಿಪ್ಪು ಶ್ರೀರಂಗಪಟ್ಟಣಕ್ಕೆ ಸೇರಿದವನು.ಅವನಿಗೂ ಮೈಸೂರಿಗೂ ಏನು ಸಂಬಂಧ ಎಂದು ಕೇಳಿ‌ ಉದ್ದೇಶಪೂರ್ವಕವಾಗಿ ಟಿಪ್ಪು ಹೆಸರನ್ನು ಬದಲಾಯಿಸಿದ್ದೇವೆ ಎಂದು ಹೇಳಿದ್ದಾರೆ.

ಮೈಸೂರು ಸಂಸದರ ಈ ಹೇಳಿಕೆಯು, ಶ್ರೀರಂಗಪಟ್ಟಣ ಮತ್ತು ಮೈಸೂರು ಎಂದು ವಿಭಜನೆ ಮಾಡಿದೆ. ಇದನ್ನು ಶ್ರೀರಂಗಪಟ್ಟಣ ಅಥವಾ ಮಂಡ್ಯ ಭಾಗದ ಜನಪ್ರತಿನಿಧಿಗಳು ಖಂಡಿಸದೆ ಸುಮ್ಮನಿರುವುದು ಸರಿಯಲ್ಲ‌.

ಸಂಸದ ಪ್ರತಾಪ ಸಿಂಹ ಅವರು ಶ್ರೀರಂಗಪಟ್ಟಣ ಮತ್ತು ಮೈಸೂರು ಎಂದು ಭೇದ ಭಾವ ಮಾಡಿರುವುದನ್ನು ಮಂಡ್ಯದ ನಾಗೇಗೌಡ ಎನ್ನುವವರು ಖಂಡಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಡೀ ಮೈಸೂರು ಸಂಸ್ಥಾನಕ್ಕೆ ಸೀರಂಗಪಟ್ಟಣ ಅಥವಾ ಶ್ರೀರಂಗಪಟ್ಟಣವೇ ರಾಜಧಾನಿಯಾಗಿದ್ದು, ಇಡೀ ಮೈಸೂರು ರಾಜ್ಯವನ್ನೇ ವಿಶ್ವವಿಖ್ಯಾತಗೊಳಿಸಿದ್ದು ಶ್ರೀರಂಗಪಟ್ಟಣ ಎಂಬುದು ಇತಿಹಾಸದ ವಿದ್ಯಾರ್ಥಿ ಆಗಿರುವ ನನಗೆ ಚೆನ್ನಾಗಿಯೇ ಗೊತ್ತಿದ್ದು, ಸಂಸದ ಪ್ರತಾಪ ಸಿಂಹ ಅವರು ಕೂಡ ಈ ಬಗ್ಗೆ ಸಂಪೂರ್ಣ ತಿಳಿದು ಮಾತನಾಡಲಿ.

ಶ್ರೀರಂಗಪಟ್ಟಣದ ಬಗ್ಗೆ ನನಗೆ ಅಭಿಮಾನವಿದ್ದು, ಪ್ರತಾಪ್ ಸಿಂಹ ಅವರ ಹೇಳಿಕೆಯಿಂದ ನನಗೆ ಬಹಳ ನೋವಾಗಿದೆ ಎಂದು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!