Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಪೌಷ್ಟಿಕತೆ ಇರುವ ಮಕ್ಕಳ ಗುರುತಿಸಲು ಮಿಂಚಿನ ಸಂಚಾರದ ಜಾಥಾಕ್ಕೆ ಚಾಲನೆ

ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಅಪೌಷ್ಟಿಕ ಮಕ್ಕಳನ್ನು ಗುರುತಿಸಲು ಅಂಗನವಾಡಿ ಕೇಂದ್ರಗಳಿಗೆ ಮಿಂಚಿನ ಸಂಚಾರ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಇಂದಿನಿಂದ ಹಮ್ಮಿಕೊಳ್ಳಲಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜು ಅವರು ಜಾಥ ಮೆರವಣಿಗೆ ಚಾಲನೆ ನೀಡಿದರು.

ಮಂಡ್ಯ ಜಿಲ್ಲೆಯಲ್ಲಿ ಅಪೌಷ್ಟಿಕ ಮಕ್ಕಳು ಎಷ್ಟಿದ್ದಾರೆ ಎಂದು ಪರಿಶೀಲನೆ ನಡೆಸಿ, ಮಕ್ಕಳನ್ನು ತೂಕ ಮಾಡುತ್ತೇವೆ, ನಂತರ ಮಕ್ಕಳು ಕುಗ್ಗಿದ ಬೆಳವಣಿಗೆಗೆ ಕಾರಣಗಳೇನು, ಸಣ್ಣ ಇರೊದಕ್ಕೆ ಕಾರಣಗಳೇನು ಎಂಬ ವರದಿ ಸಿದ್ದಪಡಿಸಿ ರಾಜ್ಯ ಮಟ್ಟಕ್ಕೆ ಕಳುಹಿಸುತ್ತೇವೆ. ಅಂಗನವಾಡಿ ಕಾರ್ಯಕರ್ತೆಯ ಇಂದಿನಿಂದ ಜಿಲ್ಲೆಯಲ್ಲಿರುವ ಎಲ್ಲಾ ಅಂಗನವಾಡಿಗೆ ಭೇಟಿ ನೀಡುತ್ತಾರೆ ಸಾರ್ವಜನಿಕ ಸಹಕರಿಸಿ ಎಂದರು.

ಜಾಥದಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಹೆಚ್.ಕೆ ಕುಮಾರಸ್ವಾಮಿ, ಎನ್.ಟಿ ಯೋಗೇಶ್, ಪ್ರದೀಪ್, ಕುಮಾರ್, ನಟರಾಜ್, ಅರುಣ್ ಕುಮಾರ್, ಅಶೋಕ್ ಸೇರಿದಂತೆ ಇನ್ನಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!