Thursday, September 19, 2024

ಪ್ರಾಯೋಗಿಕ ಆವೃತ್ತಿ

ಅವಳಿ ಸಹೋದರಿಯರನ್ನು ವರಿಸಿದ ಭೂಪ : ವಿವಾಹವಾದ ಬೆನ್ನಲ್ಲೇ ಕೇಸ್

ಒಂದೇ ಮಂಟಪದಲ್ಲಿ ಅವಳಿ ಸಹೋದರಿಯರಿಗೆ ತಾಳಿ ಕಟ್ಟಿ, ವಿವಾಹವಾದ  ಬಳಿಕ, ವರನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಅಪರೂಪದ ಘಟನೆ ಮಹಾರಾಷ್ಟ್ರದ ಸೋಲಾಪುರದಲ್ಲಿ ನಡೆದಿದೆ.

ಮುಂಬೈನಲ್ಲಿ ಐಟಿ ಇಂಜಿನಿಯರ್‌ ವೃತ್ತಿಯಲ್ಲಿರುವ ಪಿಂಕಿ ಮತ್ತು ರಿಂಕಿ ಎಂಬ ಅವಳಿ ಸಹೋದರಿಯರ ವಿವಾಹವು ಅತುಲ್ ಅವತಾಡೆ ಎಂಬ ಯುವಕನ ಜೊತೆ ಸೋಲಾಪುರ ಜಿಲ್ಲೆಯ ಮಲ್ಶಿರಾಸ್ ತಾಲೂಕಿನ ಅಕ್ಲುಜ್‌ನಲ್ಲಿ ಎಂಬಲ್ಲಿ ಶುಕ್ರವಾರ ನೆರವೇರಿದೆ.

ಈ ಅಪರೂಪದ ವಿವಾಹದ ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ ಸೊಲ್ಲಾಪುರ ಪೊಲೀಸರು ಅತುಲ್ ಅವತಾಡೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ತಂದೆ ನಿಧನರಾದ ಬಳಿಕ ತಾಯಿಯ ಜೊತೆ ಪಿಂಕಿ ಮತ್ತು ರಿಂಕಿ ಅವಳಿ ಸಹೋದರಿಯರು ಒಂದೇ ಮನೆಯಲ್ಲಿ ವಾಸವಾಗಿದ್ದರು. ಇತ್ತೀಚಿನ ದಿನಗಳಲ್ಲಿ ತಾಯಿ ಅನಾರೋಗ್ಯಕ್ಕೀಡಾಗಿದ್ದರು. ಮಲ್ಶಿರಾಸ್ ತಾಲೂಕು ನಿವಾಸಿ ಅತುಲ್ ಎಂಬಾತನ ಟ್ಯಾಕ್ಸಿಯಲ್ಲಿ ಸಹೋದರಿಯರು ತಮ್ಮ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು.

ಈ ವೇಳೆ ಪರಸ್ಪರ ಪರಿಚಯವಾಗಿ, ಸ್ನೇಹ ವಿಶ್ವಾಸ ಬೆಳೆದು ಪ್ರೇಮಾಕುಂಕರವಾಗಿದೆ.  ನಂತರ ಎರಡೂ ಕುಟುಂಬಸ್ಥರು ಮಾತುಕತೆ ನಡೆಸಿ ವಿವಾಹ ನಡೆಸಿಕೊಡಲು ನಿರ್ಧರಿಸಿದ್ದಾರೆ.

ಈ ಮದುವೆಯ ನಿರ್ಧಾರ ಅವಳಿ ಸಹೋದರಿಗಳದ್ದು!

ಮುಂಬೈನ ಅವಳಿ ಸಹೋದರಿಯರಾದ ಪಿಂಕಿ ಮತ್ತು ರಿಂಕಿ ಇಬ್ಬರೂ ಐಟಿ ಇಂಜಿನಿಯರ್. ಇಬ್ಬರು ಸಹೋದರಿಯರು ಬಾಲ್ಯದಿಂದಲೂ ಒಂದೇ ಮನೆಯಲ್ಲಿ ಒಟ್ಟಿಗೇ ಇದ್ದು,. ಯಾವತ್ತೂ ಇಬ್ಬರು ದೂರ ಹೋಗಿದ್ದೇ ಗೊತ್ತಿಲ್ಲ. ಇಬ್ಬರು ಒಬ್ಬರನ್ನೊಬ್ಬರು ತುಂಬಾ ಹಚ್ಚಿಕೊಂಡಿದ್ದಾರೆ. ಅದಕ್ಕೆ ಒಬ್ಬನನ್ನೇ ಮದುವೆ ಆಗಲು ನಿರ್ಧಾರ ಮಾಡಿದ್ದಾರೆ. ಅಂತೆಯೇ ಅತುಲ್‍ನನ್ನು ಮದುವೆ ಆಗಲು ಒಪ್ಪಿಗೆ ನೀಡಿದ್ದಾರೆ ಎಂದು ವರದಿಯಾಗಿದೆ.

ಶುಕ್ರವಾರ ನಡೆದ ಅಪರೂಪದ ವಿವಾಹದ ವಿಡಿಯೋವನ್ನು ಪತ್ರಕರ್ತರಾದ ವಿವೇಕ್‌ ಗುಪ್ತಾ ಎಂಬವರು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದು ವೈರಲ್‌ ಆಗಿದೆ. ವಿಡಿಯೋಗೆ ಪ್ರತಿಕ್ರಿಯಿಸಿರುವ ಅನೇಕರು ವಿವಾಹದ ಕಾನೂನುಬದ್ಧತೆ ಮತ್ತು ನೈತಿಕತೆಯ ಬಗ್ಗೆ ಪ್ರಶ್ನಿಸಿದ್ದಾರೆ.

ದೂರೊಂದರ ಆಧಾರದ ಮೇಲೆ, “ಅಕ್ಲುಜ್ ಪೊಲೀಸ್ ಠಾಣೆಯಲ್ಲಿ ವರನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 494 (ಗಂಡ ಅಥವಾ ಹೆಂಡತಿಯ ಜೀವಿತಾವಧಿಯಲ್ಲಿ ಮತ್ತೆ ಮದುವೆಯಾಗುವುದು) ಅಡಿಯಲ್ಲಿ ನಾನ್-ಕಾಗ್ನೈಸಬಲ್ (ಎನ್‌ಸಿ) ಅಪರಾಧವನ್ನು ದಾಖಲಿಸಲಾಗಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ದೂರು ನೀಡಿದವರು ಯಾರು ಎಂಬ ಮಾಹಿತಿಯನ್ನು ಅಧಿಕಾರಿ ನೀಡಿಲ್ಲ ಎಂದು ವರದಿಯಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!