Thursday, September 19, 2024

ಪ್ರಾಯೋಗಿಕ ಆವೃತ್ತಿ

ಮೂತ್ರಕೋಶದಿಂದ 672 ಗ್ರಾಂ ತೂಕದ ಕಲ್ಲು ಹೊರತೆಗೆದ ವೈದ್ಯರು


  • 60 ವರ್ಷದ ಮಹಿಳೆಯ ಮೂತ್ರಕೋಶದಲ್ಲಿ ಕಲ್ಲು ಪತ್ತೆ
  • ಉರಿಮೂತ್ರ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ

ಮೂತ್ರಕೋಶದಿಂದ ಅತಿ ದೊಡ್ಡ ಕಲ್ಲನ್ನು ತೆಗೆಯುವಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿದೆ.

ಸುಮಾರು 60 ವರ್ಷದ ಮಹಿಳೆಯ ಮೂತ್ರಕೋಶದಿಂದ ಕಲ್ಲನ್ನು ತೆಗೆಯಲಾಗಿದೆ. ಕಲ್ಲು 11.5×7.5 ಸೆಂ.ಮೀ ಅಳತೆಯ 672 ಗ್ರಾಂ ತೂಕ ಹೊಂದಿದೆ. ಕಲ್ಲನ್ನು ತೆಗೆದ ಎರಡೇ ದಿನಕ್ಕೆ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದು, ರೋಗಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಮಹಿಳೆಯು ಆರು ವರ್ಷದಿಂದ ಉರಿ ಮೂತ್ರ ಸಮಸ್ಯೆಯಿಂದ ಬಳಲುತ್ತಿದ್ದರು. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಎಷ್ಟೇ ಚಿಕಿತ್ಸೆ ಪಡೆದರೂ ಉರಿ ಮೂತ್ರ ಸಮಸ್ಯೆ ಉಲ್ಬಣಗೊಳ್ಳುತ್ತಿತ್ತು. ಇದರಿಂದ ಬೇಸತ್ತ ಮಹಿಳೆ ಇತ್ತೀಚೆಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಮಹಿಳೆಯನ್ನು ಸಿ.ಟಿ ಸ್ಕ್ಯಾನ್‌ಗೆ ಒಳಪಡಿಸಿದಾಗ ಯಾವುದೋ ದೊಡ್ಡ ಗಾತ್ರದ ವಸ್ತುವಿರುವುದು ವೈದ್ಯರ ಗಮನಕ್ಕೆ ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ವೈದ್ಯರು ಹಲವಾರು ವರ್ಷದಿಂದ ಮಹಿಳೆಗೆ ತೊಂದರೆ ನೀಡುತ್ತಿದ್ದ ಕಲ್ಲನ್ನು ಹೊರತೆಗೆದಿದ್ದಾರೆ.

ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ 528 ಗ್ರಾಂ ತೂಕ ಕಲ್ಲನ್ನು ತೆಗೆಯಲಾಗಿದ್ದು, ಇದು ವಿಶ್ವದಲ್ಲಿ ವರದಿಯಾಗಿರುವ ಮಹಿಳಾ ರೋಗಿಯಲ್ಲಿನ ಅತಿ ದೊಡ್ಡ ಮೂತ್ರಕೋಶದ ಕಲ್ಲು (672 ಗ್ರಾಂ) ಎಂದು ವೈದೈರು ತಿಳಿಸಿದ್ದಾರೆ.

ಅಲ್ಟ್ರಾಸೋನೋಗ್ರಫಿ ಅಥವಾ ಎಕ್ಸ್-ರೇನಂತಹ ಆರೋಗ್ಯ ಸೌಲಭ್ಯಗಳನ್ನು ಹೊಂದಿರುವ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಪ್ರಕರಣಗಳನ್ನು ಭೇದಿಸುವುದು ಸವಾಲಿನ ಸಂಗತಿಯಾಗಿದೆ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!