Friday, September 20, 2024

ಪ್ರಾಯೋಗಿಕ ಆವೃತ್ತಿ

ಬಿಹಾರ| ವೇದಿಕೆ ಕುಸಿದರೂ ಧೃತಿಗೆಡದ ರಾಹುಲ್ ಗಾಂಧಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಚಾರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಭಾಷಣ ಮಾಡುವ ವೇದಿಕೆ ಕುಸಿದ ಘಟನೆ ಬಿಹಾರದ ಪಾಲಿಗಂಜ್‌ನಲ್ಲಿ ನಡೆದಿದೆ.

ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್‌ ಅವರ ಪುತ್ರಿ ಮಿಸಾ ಭಾರತಿ ಅವರು ಪಾಟಲಿಪುತ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದು,ಇವರ ಪರವಾಗಿ ಪ್ರಚಾರ ಕೈಗೊಳ್ಳಲು ರಾಹುಲ್‌ ಗಾಂಧಿ ಅವರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪಾಲಿಗಂಜ್‌ ಪ್ರದೇಶಕ್ಕೆ ತೆರಳಿದ್ದರು.

“>

ಮಿಸಾ ಭಾರತಿ ಅವರ ಜೊತೆ ವೇದಿಕೆಗೆ ತೆರಳುತ್ತಿದ್ದಾಗ ವೇದಿಕೆಯು ಒಂಚೂರು ಕೆಳಕ್ಕೆ ಕುಸಿಯಿತು. ಅಭ್ಯರ್ಥಿ ಮಿಸಾ ಭಾರತಿ ಹಾಗೂ ಭದ್ರತಾ ಸಿಬ್ಬಂದಿ ರಾಹುಲ್‌ ಅವರ ಸಹಾಯಕ್ಕೆ ಬಂದರು ಜೊತೆಗಿದ್ದವರೆಲ್ಲ ಬೆದರಿದರೂ ರಾಹುಲ್‌ ಗಾಂಧಿ ಅವರು ದೃತಿಗೆಡದೆ ಅಲ್ಲೆ ನಿಂತುಕೊಂಡರು. ಆಗ ವೇದಿಕೆಯನ್ನು ಸ್ವಲ್ಪ ಭಾಗ ಹಿಂದಕ್ಕೆ ಸರಿಸಿ ಕಾರ್ಯಕ್ರಮ ಆರಂಭಿಸಲಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!