Saturday, September 7, 2024

ಪ್ರಾಯೋಗಿಕ ಆವೃತ್ತಿ

ರೈತರಿಗೆ ದ್ರೋಹ ಬಗೆದ ಕೇಂದ್ರ ಬಜೆಟ್ ; ಕರ್ನಾಟಕ ಪ್ರಾಂತ ರೈತ ಸಂಘ ತೀವ್ರ ಖಂಡನೆ

ರೈತಾಪಿ ಕೃಷಿ ಯನ್ನು ನಾಶ ಮಾಡಿ, ಬಲಿಷ್ಠ ಕಾರ್ಪೊರೇಟ್ ಸಂಸ್ಥೆಗಳ ಮರ್ಜಿಗೆ ಕೃಷಿ ರಂಗವನ್ನು ಒಳಪಡಿಸುವ ಸ್ಪಷ್ಟ ಉದ್ದೇಶದ ರೈತ ವಿರೋಧಿ ಬಜೆಟ್ ಮಂಡಿಸುವ ಮೂಲಕ ಬಿಜೆಪಿ ನೇತೃತ್ವದ ಎನ್ ಡಿ ಎ ಕೇಂದ್ರ ಸರ್ಕಾರವು ರೈತರಿಗೆ ದ್ರೋಹ ಬಗೆದಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ( KPRS) ಕರ್ನಾಟಕ ರಾಜ್ಯ ಸಮಿತಿ ತೀವ್ರ ಖಂಡನೆ ಹಾಗೂ ಆಕ್ರೋಶ ವ್ಯಕ್ತಪಡಿಸಿದೆ.

ಕೃಷಿ ಉತ್ಪಾದಕತೆ ಹಾಗೂ ರೈತರ ಕಲ್ಯಾಣವನ್ನು ಕಡೆಗಣಿಸಿರುವ ಈ ಬಜೆಟ್, ಮತ್ತಷ್ಟು ಕೇಂದ್ರೀಕರಣ ಹಾಗೂ ರಾಜ್ಯಗಳ ಒಕ್ಕೂಟ ಹಕ್ಕುಗಳ ಮೇಲೆ ಮತ್ತಷ್ಟು ಆಕ್ರಮಣ ಮಾಡಿದೆ ಮತ್ತು ಕೃಷಿ ಕಾರ್ಪೋರೇಟೀಕರಣದ ಕಡೆಗೆ ಕೃಷಿ ರಂಗವನ್ನು ಒಯ್ಯುವ ಸ್ಪಷ್ಟ ಲಕ್ಷಣಗಳನ್ನು ತೋರ್ಪಡಿಸಿದೆ. ಕೃಷಿ ಸಂಬಂದಿತ ವಲಯಗಳಿಗೆ ತೀವ್ರ ವಾಗಿ ಅನುದಾನ ಕಡಿತದ ಮೂಲಕ ಕೃಷಿ ರಂಗವನ್ನು ಮತ್ತಷ್ಟು ದಿವಾಳಿ ಕಡೆಗೆ ನೂಕುವ ನಿರುದ್ಯೋಗ, ವಲಸೆ ,ಹಸಿವನ್ನು ಹೆಚ್ಚಿಸುವ ಬಜೆಟ್ ನಿಂದ ರೈತಾಪಿ ಹಾಗೂ ಗ್ರಾಮೀಣ ಸಮುದಾಯಕ್ಕೆ ತೀವ್ರ ನಿರಾಶೆಯನ್ನು ಉಂಟು ಮಾಡಿದೆ ಎಂದು ಸಂಘದ ಅಧ್ಯಕ್ಷ ಜಿ.ಸಿ ಬಯ್ಯಾರೆಡ್ಡಿ ಹಾಗೂ ಪ್ರಧಾನ ಕಾರ್ಯದರ್ಶಿ ಟಿ ಯಶವಂತ ಪ್ರಕಟಣೆಯಲ್ಲಿ ಕಿಡಿಕಾರಿದ್ಧಾರೆ.

2019 ರಲ್ಲಿ ಶೇಕಡಾ 5.44 ರಷ್ಟು ಇದ್ದ ಕೃಷಿ ಮತ್ತು ಸಂಬಂದಿತ ಕ್ಷೇತ್ರಗಳ ಅನುದಾನವನ್ನು ಶೇಕಡಾ 3.15 ರಷ್ಟಕ್ಕೆ ಕಡಿತಗೊಳಿಸಿದೆ. 2022-23 ಕ್ಕೆ ಹೋಲಿಸಿದರೆ ಶೇ 21.3 ರಷ್ಟು ಕಡಿತಗೊಂಡಿದೆ. ರೈತಾಪಿ ಸಮುದಾಯದ ಬಹು ಮುಖ್ಯ ಹಕ್ಕೋತ್ತಾಯವಾದ ಸಮಗ್ರ ಕೃಷಿ ವೆಚ್ಚಕ್ಕೆ ಶೇಕಡಾ 50 ರಷ್ಟು ಲಾಭಾಂಶ ಒಳಗೊಂಡ ಕನಿಷ್ಟ ಬೆಂಬಲ ಬೆಲೆ ನಿಗದಿಗೆ ಯಾವುದೇ ಕ್ರಮವನ್ನು ಒಳಗೊಂಡಿಲ್ಲ. ಗ್ರಾಮೀಣ ಉದ್ಯೋಗದ ಬೇಡಿಕೆ ತೀವ್ರ ವಾಗಿ ಹೆಚ್ಚುತ್ತಿದ್ದರೂ, ಹಳೇ ಕೂಲಿ ಪಾವತಿ ಬೆಟ್ಟದಷ್ಟು ಉಳಿದಿದ್ದರೂ ನರೇಗಾ ಯೋಜನೆಗೆ ಅನುದಾನ ಹೆಚ್ಚಳ ಮಾಡಿಲ್ಲ. ಅದೇ ರೀತಿ ಪಿಎಂ ಕಿಸಾನ್, ಪಿಎಂ ಫಸಲ್ ಭೀಮಾ ಯೋಜನೆಗಳ ಅನುದಾನದಲ್ಲೂ ಹೆಚ್ಚಳ ಮಾಡಿಲ್ಲ. ಕೃಷಿಗೆ ಪ್ರಥಮ ಅಧ್ಯತೆ ನೀಡಲಾಗಿದೆ ಎಂಬ ಹಣಕಾಸು ಸಚಿವರ ಹೇಳಿಕೆ ಮೋಸಗೊಳಿಸುವಂತಹದ್ದು . ವಾಸ್ತವವಾಗಿ ರೈತರ, ಕಾರ್ಮಿಕರ, ಬಡವರ ಕಲ್ಯಾಣಕ್ಕೆ ಯಾವುದೇ ಅಧ್ಯತೆಯನ್ನು ಈ ಬಜೆಟ್ ಒದಗಿಸಿಲ್ಲ ದೂರಿದ್ದಾರೆ.

ಈಗ ಒದಗಿಸಿರುವ ನರೇಗಾ ಅನುದಾನದಲ್ಲಿ ಈಗಾಗಲೇ ಈ ಹಣಕಾಸು ವರ್ಷದಲ್ಲಿ 42,000 ಕೋಟಿಯಷ್ಟು ವ್ಯಯವಾಗಿದ್ದು, ಇನ್ನು ಉಳಿದ ಎಂಟು ತಿಂಗಳಿಗೆ ಕೇವಲ 44 ಸಾವಿರ ಕೋಟಿ ಮಾತ್ರ ಉಳಿದಿದೆ. ನರೇಗಾಕ್ಕೆ ಹಣ ಹೆಚ್ಚಳ ಮಾಡದೇ ಇರುವುದು ಗ್ರಾಮೀಣ ಬಡವರ ಸಂಕಟಗಳನ್ನು ಹೆಚ್ಚಿಸಲಿದೆ. ಗ್ರಾಮಾಂತರ ಪ್ರದೇಶಗಳ ಸಂಕಟ,ನಿರುದ್ಯೋಗ, ವಲಸೆಯಂತಹ ವಿಷಯಗಳಿಗೆ ಬಿಜೆಪಿ ನೇತೃತ್ವದ ಸರ್ಕಾರ ಎಷ್ಟು ಅಸೂಕ್ಷ್ಮವಾಗಿದೆ ಎಂಬುದನ್ನು ಇದು ತೋರಿಸುತ್ತದೆ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!